![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 9, 2020, 7:16 PM IST
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲ್ಪಟ್ಟಿರುವಂತ ಮಾಜಿ ಸಚಿವ ವಿನಯ್ ಕುಲಕರ್ಣಿ ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಲಯ ಡಿ.14 ಕ್ಕೆ ಕಾಯ್ದಿರಿಸಿದೆ.
ಕಳೆದ ನಾಲ್ಕು ದಿನಗಳ ಹಿಂದೆ ವಿನಯ್ ಪರ ವಕೀಲರು ಜಾಮೀನು ನೀಡುವಂತೆ ವಾದ ಮಂಡಿಸಿದ್ದರು. ಡಿ.9 ಕೆ ಸಿಬಿಐ ಪರ ವಕೀಲರು ವಾದ ಮಂಡಿಸಬೇಕಿತ್ತು ಆ ಪ್ರಕಾರ ಬುಧವಾರ ಸಿಬಿಐ ಪರ ವಕೀಲರು ಪ್ರತಿವಾದ ಮಂಡಿಸಿದರು. ದೆಹಲಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಸಿಬಿಐ ಪರ ವಾದ ಮಂಡನೆ ಮಾಡಿದರು. ಈ ವೇಳೆ ವಿನಯ ಕುಲಕರ್ಣಿ ಪ್ರಕರಣದ ಮಾಸ್ಟರ್ ಮೈಂಡ್. ಮೇಲಾಗಿ ಅವರು ಭಾರೀ ಪ್ರಭಾವಿ ವ್ಯಕ್ತಿ. ಒಂದು ವೇಳೆ ಜಾಮೀನು ಸಿಕ್ಕರೆ ಅವರು ಸಾಕ್ಷಿ ನಾಶ ಮಾಡೋ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರಿಗೆ ಜಾಮೀನನ್ನು ನೀಡಬಾರದು ಎಂದು ಎಸ್.ವಿ. ರಾಜು ವಾದ ಮಂಡಿಸಿದರು. ಈ ವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಅದಕ್ಕೆ ಪ್ರತಿವಾದ ಮಂಡಿಸಲು ವಿನಯ ಪರ ವಕೀಲರಿಗೆ ಅವಕಾಶ ನೀಡಿದರು.
ಈ ವೇಳೆ ವಿನಯ ಪರ ವಕೀಲ ಸುಮಾರು ಅರ್ಧ ಗಂಟೆ ವಾದ ಮಂಡಿಸಿದರು. ಎರಡೂ ಕಡೆಗಳ ವಾದ ಪರಿಗಣಿಸಿ ಅಂತಿಮವಾಗಿ ತೀರ್ಪನ್ನು ಡಿ.14 ಕ್ಕೆ ಕಾಯ್ದಿರಿಸಿತು.
You seem to have an Ad Blocker on.
To continue reading, please turn it off or whitelist Udayavani.