Rajya Sabhaದಲ್ಲಿ ಪ್ರತಿಧ್ವನಿಸಿದ ಫೋಗಾಟ್ ಅನರ್ಹತೆ; ಕಲಾಪದಿಂದ ಹೊರನಡೆದ ವಿಪಕ್ಷಗಳು
Team Udayavani, Aug 8, 2024, 12:56 PM IST
ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಪಟು ವಿನೇಶ್ ಫೋಗಾಟ್ ಅನರ್ಹ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡದಿರುವುದಕ್ಕೆ ಅಸಮಧಾನಗೊಂಡ ವಿಪಕ್ಷ INDIA ಬ್ಲಾಕ್ ಸದಸ್ಯರು ರಾಜ್ಯಸಭೆ ಕಲಾಪ ಬಹಿಷ್ಕರಿಸಿ ಹೊರ ನಡೆದ ಘಟನೆ ಗುರುವಾರ (ಆಗಸ್ಟ್ 08) ನಡೆದಿದೆ.
ಕುಸ್ತಿ ನಿಯಮದ ಪ್ರಕಾರ ಕೇವಲ 100 ಗ್ರಾಮ್ ನಷ್ಟು ತೂಕ ಹೆಚ್ಚಳವಾಗಿದ್ದರಿಂದ ಪ್ಯಾರಿಸ್ ಒಲಿಂಪಿಕ್ಸ್ ಸಮಿತಿ ಕುಸ್ತಿಪಟು ವಿನೇಶ್ ಫೋಗಾಟ್ ಅವರನ್ನು ಬುಧವಾರ ಅನರ್ಹಗೊಳಿಸಿತ್ತು.
ಈ ವಿಚಾರವಾಗಿ ರಾಜ್ಯಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಫೋಗಾಟ್ ವಿಷಯವನ್ನು ಪ್ರಸ್ತಾಪಿಸಿ, ಅನರ್ಹತೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಚರ್ಚೆಯಾಗಬೇಕು ಎಂದರು. ಆದರೆ ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್, ಈ ವಿಚಾರದಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳಿದರು.
ಬಳಿಕ ತೃಣಮೂಲ ಕಾಂಗ್ರೆಸ್ ಸಂಸದ ಡೇರೆಕ್ ಓಬ್ರಿಯಾನ್ ಎದ್ದು ನಿಂತು, ಕೆಲವು ವಿಷಯ ಪ್ರಸ್ತಾಪಿಸಿದಾಗಲೂ ಅದಕ್ಕೂ ಸಭಾಪತಿ ಅನುಮತಿ ನೀಡಲಿಲ್ಲ. ಆಗ ಓಬ್ರಿಯಾನ್ ಗಟ್ಟಿ ಧ್ವನಿಯಲ್ಲಿ ಮಾತನಾಡಿದಾಗ, ನೀವು ಸಭಾಪತಿ ಪೀಠದ ವಿರುದ್ಧ ಕೂಗಾಡುತ್ತೀರಾ, ಸದನದಲ್ಲಿನ ನಿಮ್ಮ ನಡವಳಿಕೆ ಖಂಡನೀಯವಾಗಿದೆ. ಮುಂದಿನ ಬಾರಿ ಹೀಗಾದರೆ ಕಲಾಪದಿಂದ ಹೊರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭಾಪತಿಯ ಹೇಳಿಕೆಯಿಂದ ಅಸಮಾಧಾನಗೊಂಡ ವಿಪಕ್ಷ ಮುಖಂಡರು ಕಲಾಪ ಬಹಿಷ್ಕರಿಸಿ ಹೊರನಡೆದಿರುವುದಾಗಿ ವರದಿ ತಿಳಿಸಿದೆ. ಒಲಿಂಪಿಕ್ಸ್ ನಿಂದ ಫೋಗಾಟ್ ಅನರ್ಹಗೊಂಡಿರುವ ವಿಚಾರದಿಂದ ವಿಪಕ್ಷಗಳ ಹೃದಯ ಮಾತ್ರ ನೂಚ್ಚು ನೂರಾದಂತೆ ಭಾವಿಸಿದಂತಿದೆ ಎಂದು ಧನ್ಕರ್ ಪ್ರತಿಕ್ರಿಯಿಸಿದ್ದಾರೆ.
ಫೋಗಾಟ್ ವಿಚಾರದಲ್ಲಿ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಆದರೆ ರಾಜಕಾರಣ ಆಕೆಯನ್ನು ಅಗೌರವಿಸುತ್ತಿದೆ ಎಂದು ಸಭಾಪತಿ ಹೇಳಿದರು. ಫೋಗಾಟ್ ಕುರಿತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಲೋಕಸಭೆಯಲ್ಲಿ ನೀಡಿದ ಅಭಿಪ್ರಾಯಕ್ಕೆ ವಿಪಕ್ಷಗಳು ಅಸಮಧಾನ ವ್ಯಕ್ತಪಡಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.