Viral Video: ಫ್ಯಾಷನ್ ಡಿಸೈನಿಂಗ್ ಕೆಲಸ ಬಿಟ್ಟು ಸ್ಟ್ರೀಟ್‌ಫುಡ್ ಅಂಗಡಿ ತೆರೆದ ಯುವತಿ
ಈಕೆಯ ʻಬೆಂಗಾಲಿ ಥಾಲಿʼಗೂ, ಗ್ರಾಹಕರನ್ನು ಉಪಚರಿಸುವ ರೀತಿಗೂ ಜನ ಫುಲ್ ಫಿದಾ!
Team Udayavani, Apr 12, 2023, 7:26 PM IST
ಕೋಲ್ಕತ್ತಾ: ಎಷ್ಟೇ ಬಡವನಾಗಿದ್ರೂ, ಎಷ್ಟೇ ಶ್ರೀಮಂತನಾಗಿದ್ರೂ ಸ್ಟ್ರೀಟ್‌ಫುಡ್ ಅಂದ್ರೆ ಎಲ್ಲರಿಗೂ ಇಷ್ಟನೇ. ಇನ್ನು ಬೆಂಗಳೂರು, ಮುಂಬೈ, ಕೋಲ್ಕತ್ತಾದಂತಹ ಮಹಾನಗರಗಳ ಗಲ್ಲಿ ಗಲ್ಲಿಗಳಲ್ಲಿ ಸಿಗುವ ವಿಧ ವಿಧವಾದ ಸ್ಟ್ರೀಟ್‌ಫುಡ್‌ಗಳು ಬಾಯಿ ಚಪ್ಪರಿಸುವಂತೆ ಮಾಡುತ್ತವೆ. ಈ ಎಲ್ಲಾ ಸ್ಟ್ರೀಟ್‌ಫುಡ್ ಅಂಗಡಿಗಳಿಗೂ ತಮ್ಮದೇ ಆದ ಶ್ರಮದ ಕಥೆಗಳಿವೆ. ಕಷ್ಟದ ದುಡಿಮೆಯೂ ಬಡತನದ ನೋವೂ ಅದರಲ್ಲಿದೆ. ಆದರೆ ಅದರಲ್ಲೂ ಯಶಸ್ಸು ಗಳಿಸಿದವರು ಅದೆಷ್ಟೋ ಮಂದಿ.
ಇಂತಹಾ ಅದೆಷ್ಟೋ ಕಥೆಗಳು, ದೃಶ್ಯಗಳು ಈಗೀಗ ವೈರಲ್ ಆಗುತ್ತಿರುವುದು ಸರ್ವೇ ಸಾಮಾನ್ಯವೆನಿಸಿದೆ. ಕೊಲ್ಕತ್ತಾದಲ್ಲಿನ ಇಂತದ್ದೇ ವೀಡಿಯೋವೊಂದು ಈಗ ವೈರಲ್ ಆಗಿದೆ.
ಕೋಲ್ಕತ್ತಾ ನಗರದಲ್ಲಿ ಒಬ್ಬಾಕೆ ತಾನು ಕಲಿತ ಫ್ಯಾಶನ್ ಡಿಸೈನಿಂಗ್ ವೃತ್ತಿ ಬಿಟ್ಟು ಗಲ್ಲಿಯೊಂದರಲ್ಲಿ ಸ್ಟ್ರೀಟ್‌ಫುಡ್ ಅಂಗಡಿಯೊಂದನ್ನು ತೆರೆದಿದ್ದಾಳೆ. ಈಕೆಯ ಅಂಗಡಿಯಲ್ಲಿ ಪ್ರಸಿದ್ಧ ʻಬೆಂಗಾಲಿ ಥಾಲಿʼಗೆ ಬಲು ಬೇಡಿಕೆ. ಈಕೆ ಇದೀಗ ಕೋಲ್ಕತ್ತಾ ನಗರದಲ್ಲಿ ಫೇಮಸ್ ಆಗಿದ್ದಾಳೆ. ಇದೀಗ ಈಕೆಯ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಫ್ಯಾಷನ್ ಡಿಸೈನರ್ ಆಗಿದ್ದ ಕೋಲ್ಕತ್ತಾ ಮೂಲದ ನಂದಿನಿ ಗಂಗೂಲಿ ಎಂಬ ಯುವತಿಯೊಬ್ಬಳ ಸ್ಟ್ರೀಟ್ ಫುಡ್ ಅಂಗಡಿ ಇತ್ತೀಚೆಗೆ ಹೆಡ್‌ಲೈನ್ ಆಗಿತ್ತು.! ಈ ಬೆನ್ನಲ್ಲೇ ಈಕೆಯ ವೀಡಿಯೋಗಳೂ ಈಗ ವೈರಲ್ ಆಗಿದೆ.
ನಂದಿನಿಯ ತಂದೆ ರಬ್ಬರ್ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊರೋನಾ ಕಾಲದಲ್ಲಿ ನಂದಿನಿಯ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಆಗ ತನ್ನ ವೃತ್ತಿ ಬಿಟ್ಟು ಸ್ಟ್ರೀಟ್ ಫುಡ್ ಅಂಗಡಿಯೊಂದನ್ನು ಪ್ರಾರಂಭಿಸಿದ ನಂದಿನಿಯ ಅಂಗಡಿಯ ಮುಂದೆ ʻಬೆಂಗಾಲಿ ಥಾಲಿʼ ತಿನ್ನಲು ಇಂದು ಜನ ಕ್ಯೂ ನಿಲ್ಲುತ್ತಿದ್ದಾರೆ.
ಅವರು ತಯಾರಿಸುವ ಆಹಾರಕ್ಕೂ, ಅವರು ತನ್ನ ಗ್ರಾಹಕರನ್ನು ಉಪಚರಿಸುವ ರೀತಿಗೂ ಜನ ಫಿದಾ ಆಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವೀಡಿಯೋವೊಂದು ಕೆಲವೇ ಗಂಟೆಗಳಲ್ಲಿ ಸುಮಾರು 8 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಇವರ ಈ ಶ್ರಮಕ್ಕೆ ನೆಟ್ಟಿಗರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.
ಇದನ್ನೂ ಓದಿ: ʻFarzi’ ವೆಬ್ ಸೀರಿಸ್ ಸ್ಟೈಲ್‌ನಲ್ಲೇ ನಕಲಿ ನೋಟು ದಂಧೆ: ಆರೋಪಿಗಳು ಅಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.