ತವರಲ್ಲಿ ಅತ್ಯಧಿಕ ಟೆಸ್ಟ್‌ ಗೆಲುವು : ದಾಖಲೆಯತ್ತ ವಿರಾಟ್‌ ಕೊಹ್ಲಿ

ಧೋನಿ ನಾಯಕತ್ವದ 21 ಗೆಲುವಿನ ದಾಖಲೆಗೆ ಗಂಡಾಂತರ

Team Udayavani, Jan 31, 2021, 10:59 PM IST

ತವರಲ್ಲಿ ಅತ್ಯಧಿಕ ಟೆಸ್ಟ್‌ ಗೆಲುವು : ದಾಖಲೆಯತ್ತ ವಿರಾಟ್‌ ಕೊಹ್ಲಿ

ಚೆನ್ನೈ: ವಿರಾಟ್‌ ಕೊಹ್ಲಿ ಮತ್ತೆ ಟೀಮ್‌ ಇಂಡಿಯಾದ ಚುಕ್ಕಾಣಿ ಹಿಡಿದಿದ್ದಾರೆ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಮಹೋನ್ನತ ಗೆಲುವು ಸಾಧಿಸಿ ಬಂದ ಭಾರತಕ್ಕೆ ಇದು ತವರಿನಲ್ಲಿ ಎದುರಾಗುವ ಅಗ್ನಿಪರೀಕ್ಷೆಯಾಗಿದೆ.

ಆಸ್ಟ್ರೇಲಿಯದಲ್ಲಿ ಆಡಲಾದ ಅಡಿಲೇಡ್‌ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ಹೀನಾಯ ಸೋಲನುಭವಿಸಿತ್ತು. ಬಳಿಕ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಸರಣಿ ಗೆದ್ದು ಮೆರೆದದ್ದು ಈಗ ಇತಿಹಾಸ. ಹೀಗಾಗಿ ಟೆಸ್ಟ್‌ ತಂಡಕ್ಕೆ ರಹಾನೆ ಸಾರಥ್ಯವೇ ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿರುವ ಹೊತ್ತಿನಲ್ಲೇ ಕೊಹ್ಲಿ ಮರಳಿ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಇದರಲ್ಲಿ ಅವರು ಯಶಸ್ಸು ಸಾಧಿಸಬೇಕಾದ ತುರ್ತು ಅಗತ್ಯ ಇದೆ. ಆಗ ಕೊಹ್ಲಿ ಕೆಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.

ಬೇಕಿದೆ ಇನ್ನೆರಡು ಗೆಲುವು
ಇವುಗಳಲ್ಲೊಂದು ದಾಖಲೆಯೆಂದರೆ, ಭಾರತದಲ್ಲಿ ಅತ್ಯಧಿಕ ಗೆಲುವು ಸಾಧಿಸಿದ ನಾಯಕನಾಗಿ ಮೂಡಿಬರುವುದು. ಸದ್ಯ 21 ಟೆಸ್ಟ್‌ ಪಂದ್ಯಗಳಲ್ಲಿ ಗೆಲುವು ಕಂಡ ಮಹೇಂದ್ರ ಸಿಂಗ್‌ ಧೋನಿ ಹೆಸರಲ್ಲಿ ಈ ದಾಖಲೆ ಇದೆ. ಕೊಹ್ಲಿ ತವರಿನ 20 ಟೆಸ್ಟ್‌ಗಳಲ್ಲಿ ಗೆಲುವು ಕಂಡಿದ್ದಾರೆ. ನಾಲ್ಕರಲ್ಲಿ ಎರಡು ಟೆಸ್ಟ್‌ಗಳನ್ನು ಗೆದ್ದರೆ ದಾಖಲೆ ಕೊಹ್ಲಿ ಪಾಲಾಗಲಿದೆ.

ಇದನ್ನೂ ಓದಿ:ಇಸ್ರೇಲ್‌ ಎಂಬೆಸಿ ಸ್ಫೋಟ ಪ್ರಕರಣ : ಎನ್‌ಐಎ ನೇತೃತ್ವದಲ್ಲಿ ತನಿಖೆ

ನಾಯಕನ ರನ್‌ ಸಾಧನೆ
ಟೆಸ್ಟ್‌ ನಾಯಕನಾಗಿ ಅತ್ಯಧಿಕ ರನ್‌ ಬಾರಿಸಿದ ಸಾಧಕರ ಯಾದಿಯಲ್ಲಿ ಮೇಲೇರುವ ಅವಕಾಶವೂ ವಿರಾಟ್‌ ಕೊಹ್ಲಿ ಮುಂದಿದೆ. ಇದಕ್ಕೆ ಬೇಕಿರುವುದು ಕೇವಲ 14 ರನ್‌ ಮಾತ್ರ. ಆಗ ಕೊಹ್ಲಿ ವೆಸ್ಟ್‌ ಇಂಡೀಸಿಕ ಕ್ಲೈವ್‌ ಲಾಯ್ಡ ಅವರನ್ನು ಮೀರಿ 4ನೇ ಸ್ಥಾನಕ್ಕೆ ಏರಲಿದ್ದಾರೆ. ಸದ್ಯ ಕೊಹ್ಲಿ ನಾಯಕನಾಗಿ 5,220 ರನ್‌ ಬಾರಿಸಿದ್ದಾರೆ.

ದಾಖಲೆ 8,659 ರನ್‌ ಬಾರಿಸಿದ ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ ಹೆಸರಲ್ಲಿದೆ. ಆಸ್ಟ್ರೇಲಿಯದ ಅಲನ್‌ ಬೋರ್ಡರ್‌ ದ್ವಿತೀಯ (6,623), ರಿಕಿ ಪಾಂಟಿಂಗ್‌ ತೃತೀಯ ಸ್ಥಾನದಲ್ಲಿದ್ದಾರೆ (6,542 ರನ್‌).

ಟಾಪ್ ನ್ಯೂಸ್

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ

EX-PM-M-Singh

Critical: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

M Chinnaswamy Stadium

M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

Pro Kabaddi League: ಯುಪಿ ಯೋಧಾಸ್‌,ಪಾಟ್ನಾ ಪೈರೇಟ್ಸ್‌ ಸೆಮಿಫೈನಲಿಗೆ

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

IND Vs AUS ಬಾಕ್ಸಿಂಗ್‌ ಡೇ ಟೆಸ್ಟ್‌: ಆಸ್ಟ್ರೇಲಿಯ ರನ್‌ ಓಟಕ್ಕೆ ಬುಮ್ರಾ ಬ್ರೇಕ್‌

dw

Padubidri: ಕಾರು ಢಿಕ್ಕಿ; ಪಾದಚಾರಿ ಸಾವು

8

Kasaragod: ಟ್ಯಾಂಕರ್‌ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ

EX-PM-M-Singh

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.