Virender Sehwag:ಪೃಥ್ವಿ ಶಾ ನನ್ನು ಗಿಲ್,ಗಾಯಕ್ವಾಡ್‌ಗೆ ಹೋಲಿಸಿ ಸೆಹ್ವಾಗ್ ಹೇಳಿದ್ದೇನು?
Team Udayavani, Apr 5, 2023, 4:55 PM IST
ನವದೆಹಲಿ: ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್-ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ಗೆ ಶರಣಾಗಿದೆ. ಈ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಡೆಲ್ಲಿ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ಗೆಲುವಿನ ಕದ ತಟ್ಟುವಲ್ಲಿ ವಿಫಲವಾಗಿದೆ.
ಡೆಲ್ಲಿ ತಂಡದಲ್ಲಿ ಈ ಬಾರಿ ಒಂದೆಡೆ ಬಿಗ್ ಹಿಟ್ಟರ್ ರಿಷಬ್ ಪಂತ್ ಕೊರತೆ ಎದ್ದು ಕಾಣುತ್ತಿದ್ದು, ಇನ್ನೊಂದೆಡೆ ತಂಡದಲ್ಲಿ ಈ ವರೆಗೆ ಸಿಡಿದೇಳುವ ಬ್ಯಾಟಿಂಗ್ ಸ್ಟಾರ್ ಕಂಡುಬಂದಿಲ್ಲ. ಇದು ಹೀಗೇ ಮುಂದುವರಿದರೆ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್‌ನಂದ ಹೊರಬಿದದ್ದಿರುವ ರಿಷಬ್ ಪಂತ್ ಸ್ಥಾನ ತುಂಬುವವರು ತಂಡದಲ್ಲಿ ಯಾರೂ ಇಲ್ಲ. ಆದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಓಪನರ್‌ಗಳಾದ ವಾರ್ನರ್- ಪೃಥ್ವಿ ಶಾ ಜೋಡಿಯಿಂದ ನಿರೀಕ್ಷಿತ ಜತೆಯಾಟ ಇನ್ನೂ ಕಂಡುಬಂದಿಲ್ಲ. ವಾರ್ನರ್ ಸಿಡಿಯುವ ಮುನ್ಸೂಚನೆ ತೋರಿದ್ದರೂ ಪೃಥ್ವಿ ಶಾ ಅವರು ಇನ್ನೂ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್: ಆರೋಪಿ ಬಂಧನ, 48 ಲಕ್ಷ ರೂ. ನಗದು ವಶ
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಪೃಥ್ವಿ ಶಾ ಆಟದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
2018 ರಲ್ಲಿ ಭಾರತದ ಅಂಡರ್-19 ತಂಡವನ್ನು ಮುನ್ನಡೆಸಿದ್ದ ಪೃಥ್ವಿ ಶಾ ಅವರ ಇತ್ತೀಚಿನ ಕ್ರಿಕೆಟ್ ಬೆಳವಣಿಗೆ ಬಗ್ಗೆ ಮಾತನಾಡಿದ ಸೆಹ್ವಾಗ್, ಅಂಡರ್-19 ತಂಡದಲ್ಲಿ ಪೃಥ್ವಿ ಶಾ ಜೊತೆಗೆ ತಂಡದಲ್ಲಿದ್ದ ಶುಭ್‌ಮಾನ್ ಗಿಲ್ ಇಂದು ಎಲ್ಲಾ ಮೂರು ವಿಭಾಗದಲ್ಲಿ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸಿ ಸೈ ಎನಿಸಿಕೊಂಡಿದ್ಧಾರೆ ಎಂದರು.
ಪೃಥ್ವಿ ಶಾ ಅವರ ಹೊಡೆತಗಳಿಗೆ ಬೇಸರ ವ್ಯಕ್ತಪಡಿಸಿದ ಸೆಹ್ವಾಗ್, ʻತಪ್ಪು ಹೊಡೆತಗಳಿಗೆ ಪ್ರಯತ್ನಿಸಿ ಶಾ ಬಹಳಷ್ಟು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಅವರು ಆ ತಪ್ಪುಗಳಿಂದ ಸುಮಾರಷ್ಟು ಸಂಗತಿಗಳನ್ನು ಕಲಿಯಬೇಕಾಗುತ್ತದೆ ಅಲ್ಲವೇ?ʼ ಎಂದು ಹೇಳಿದ್ಧಾರೆ.
ʻಭಾರತ ತಂಡದ ಪರ ಎಲ್ಲಾ ಮೂರು ವಿಭಾಗಗಳಲ್ಲೂ ಆಡುತ್ತಿರುವ ಶುಭ್‌ಮಾನ್ ಗಿಲ್ 2018ರಲ್ಲಿ ಪೃಥ್ವಿ ಶಾ ಜೊತೆಗೂ ಆಡಿದ್ದರು. ಇಂದು ಅವರು ಭಾರತ ತಂಡದಲ್ಲಿ ಮಿಂಚುತ್ತಿದ್ದಾರೆ. ಆದರೆ ಶಾ ಇನ್ನೂ ಐಪಿಎಲ್‌ನಲ್ಲಿ ರನ್ ಗಳಿಸಲು ಒದ್ದಾಡುತ್ತಿದ್ಧಾರೆʼ ಎಂದು ಸೆಹ್ವಾಗ್ ಹೇಳಿದ್ದಾರೆ.
ಇದೇ ವೇಳೆ ಪೃಥ್ವಿ ಶಾ ಅವರನ್ನು ಹೋಲಿಸಿ ಋತುರಾಜ್ ಗಾಯಕ್ವಾಡ್ ಬಗ್ಗೆಯೂ ಮಾತನಾಡಿದ ಸೆಹ್ವಾಗ್ ʻಈಗಾಗಲೇ ಐಪಿಎಲ್‌ನಲ್ಲಿ ಒಂದು ಬಾರಿ ಆರೆಂಜ್ ಕ್ಯಾಪ್ ಗಳಿಸಿರುವ ಗಾಯಕ್ವಾಡ್ ಪ್ರತಿ ಸೀಸನ್‌ನಲ್ಲಿಯೂ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕಂಡುಬರುತ್ತಾರೆ. ಈ ಬಾರಿಯೂ ಉತ್ತಮ ಆಟವನ್ನು ಮುಂದುವರಿಸಿದ್ಧಾರೆ. ಹಾಗಾಗಿ ಪೃಥ್ವಿ ಶಾ ಅವರೂ ಗಾಯಕ್ವಾಡ್, ಗಿಲ್‌ರಂತೆ ದೊಡ್ಡ ಮೊತ್ತ ಪೇರಿಸಲು ಪ್ರಯತ್ನ ಪಡಲೇಬೇಕಾಗಿದೆʼ ಎಂದು ಹೇಳಿದ್ಧಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.