![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 18, 2021, 5:00 AM IST
ಬೆಳ್ತಂಗಡಿ: ಸ್ವತ್ಛತೆ ಜಾಗೃತಿ ಸಂದೇಶಗಳು ಕೇವಲ ಹೆಸರಿಗಷ್ಟೆ ಎಂಬಂತಾಗಿದೆ. ಇತ್ತೀಚೆಗಷ್ಟೆ ಚಾರ್ಮಾಡಿ ಗ್ರಾ.ಪಂ. ಪಿಡಿಒ ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿದ ಘಟನೆ ನಡೆದಿತ್ತಾದರು ಮತ್ತೆ ಮಂಗಳೂರು- ವಿಲ್ಲು ಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ನಿಡಿಗಲ್‌ನಿಂದ ಚಾರ್ಮಾಡಿ ವರೆಗೂ ಹೆದ್ದಾರಿ ಅಂಚಿನ ಅರಣ್ಯ ಪ್ರದೇಶ ತ್ಯಾಜ್ಯದ ಕೂಪದಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಬದಿ ಅರಣ್ಯ ಪ್ರದೇಶವಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಒಳಭಾಗಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿಯ ಲಾಗುತ್ತಿದೆ. ಅರಣ್ಯ ಪ್ರದೇಶದ ಹೆದ್ದಾರಿಯ ಸುತ್ತ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ.
ಪ್ರಯೋಜನಕ್ಕೆ ಬಾರದ ಎಚ್ಚರಿಕೆ ಫಲಕ
ಈ ಪ್ರದೇಶದಲ್ಲಿ ಕಸ ಸುರಿಯದಂತೆ ಪಂಚಾಯತ್ ವತಿಯಿಂದ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಈ ಫಲಕಗಳು ಇರುವ ಕಡೆಗಳಲ್ಲೇ ತ್ಯಾಜ್ಯ ತಂದು ಹಾಕಲಾಗಿದೆ. ಇಲ್ಲಿನ ರಸ್ತೆ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸುವ ಸವಾರರು ಊಟ, ಅಡುಗೆ, ಮದ್ಯ ಪಾನ, ಧೂಮಪಾನ ಮಾಡಿ ತ್ಯಾಜ್ಯವನ್ನು ಅಲ್ಲೇ ಎಸೆದು ಸಾಗುತ್ತಿದ್ದಾರೆ. ಸೀಟು ಪ್ರದೇಶದಲ್ಲಿ ವನ್ಯಜೀವಿಗಳು ಸಹಿತ ದನಕರುಗಳು ಪ್ಲಾಸ್ಟಿಕ್ ತಿಂದು ಜೀವಹಾನಿಗೆ ಕಾರಣವಾಗುತ್ತಿದೆ.
ಸಭೆಯಲ್ಲಿ ಚರ್ಚಿಸಿ ತೀರ್ಮಾನ
ಕಾಡು ಪ್ರದೇಶದಲ್ಲಿ ಎರಡು ಬದಿಗಳಲ್ಲಿ ಬೇಲಿ ರಚಿಸಿದರೆ ಪ್ರವಾಸಿಗರ ಹಾಗೂ ತ್ಯಾಜ್ಯ ತಂದು ಸುರಿಯುವವರ ಉಪಟಳಕ್ಕೆ ಕಡಿವಾಣ ಹಾಕಬಹುದು. ಮುಂದಿನ ದಿನಗಳಲ್ಲಿ ನಿರಂತರ ದಂಡ ವಿಧಿಸುವ ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
– ರಂಜಿನಿ ರವಿ, ಅಧ್ಯಕ್ಷರು, ಗ್ರಾ.ಪಂ. ಮುಂಡಾಜೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.