![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jan 6, 2023, 11:55 AM IST
ವಾಷಿಂಗ್ಟನ್: ಸಮುದ್ರ ಪ್ರಯಾಣದ ವೇಳೆ ಕೆಲವೊಮ್ಮೆ ಅತ್ಯಪರೂಪದ ಅನುಭವ ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಕ್ಯಾಲಿಫೋರ್ನಿಯಾದ ಪ್ರವಾಸಿಗರ ತಂಡವೊಂದಕ್ಕೆ ಜೀವಮಾನದಲ್ಲೇ ಮರೆಯಲಾರದಂಥ ದೃಶ್ಯವೊಂದಕ್ಕೆ ಸಾಕ್ಷಿಯಾಗಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಅರ್ಷದೀಪ್ ರನ್ನು ದೂಷಿಸುತ್ತಿಲ್ಲ, ಆದರೆ ನೋ ಬಾಲ್ ಹಾಕುವುದು ಅಪರಾಧ: ಹಾರ್ದಿಕ್
ಹೌದು ಮೆಟ್ರೋ ವರದಿ ಪ್ರಕಾರ, ಕ್ಯಾಲಿಫೋರ್ನಿಯಾದ ಹವ್ಯಾಸಿ ಪ್ರವಾಸಿಗರ ತಂಡ ಬೋಟ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬರೋಬ್ಬರಿ 35 ಅಡಿ ಉದ್ದದ ಬೂದುಬಣ್ಣದ ತಿಮಿಂಗಲ ಕಣ್ಣೆದುರಲ್ಲೇ ಪುಟ್ಟ ತಿಮಿಂಗಲ ಮರಿಗೆ ಜನ್ಮ ನೀಡಿರುವ ದೃಶ್ಯಕ್ಕೆ ಪ್ರತ್ಯಕ್ಷದರ್ಶಿಗಳಾಗಿರುವ ಅಪರೂಪದ ಪ್ರಸಂಗ ನಡೆದಿದೆ.
ಸಮುದ್ರದ ಮಧ್ಯದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮೊದಲು ಬೂದುಬಣ್ಣದ ವಲಸಿಗ ತಿಮಿಂಗಲವೊಂದು ಬರುತ್ತಿರುವುದನ್ನು ಪ್ರವಾಸಿಗರು ಗಮನಿಸಿದ್ದರು. ನಂತರ ಬೋಟ್ ಅನ್ನು ನಿಧಾನಕ್ಕೆ ತಿಮಿಂಗಿಲದ ಬಳಿ ಕೊಂಡೊಯ್ದಿದ್ದರು. ಆದರೆ ತಿಮಿಂಗಲದ ವರ್ತನೆ ವಿಚಿತ್ರವಾಗಿರುವುದನ್ನು ಕೆಲವು ಪ್ರವಾಸಿಗರು ಗುರುತಿಸಿದ್ದು, ಆ ವೇಳೆಯಲ್ಲಿ ಪುಟ್ಟ ತಿಮಿಂಗಲ ರಕ್ತಸ್ರಾವದೊಂದಿಗೆ ಹೊರ ಬಂದಿದ್ದು, ತಕ್ಷಣವೇ ಈಜಾಡುತ್ತ ತಾಯಿ ತಿಮಿಂಗಲದ ಸುತ್ತ ಸುತ್ತಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಅತ್ಯಪರೂಪದ ದೃಶ್ಯವನ್ನು ಪ್ರವಾಸಿಗರ ತಂಡ ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಸಫಾರಿ ಸರ್ವೀಸ್ ಕೂಡಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ.
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
Malaysia; ಭಾರತ ಮೂಲದ ಮಹಿಳೆಯಿಂದ ಕೆಲಸಕ್ಕಾಗಿ ಪ್ರತಿದಿನ 700 ಕಿ.ಮೀ. ವಿಮಾನ ಯಾನ!
You seem to have an Ad Blocker on.
To continue reading, please turn it off or whitelist Udayavani.