ಸರಕಾರಿ ಕೆಲಸ ಮಾರಾಟ ಮಾಡುವ ಗ್ಯಾಂಗ್ ಹೊರ ತರುತ್ತೇವೆ : ಆರಗ ಜ್ಞಾನೇಂದ್ರ
ದಿವ್ಯಾ ಹಾಗರಗಿ ಸ್ಟ್ರಾಂಗ್ ಏನಿಲ್ಲ, ಆಸ್ತಿ ಮುಟ್ಟುಗೋಲು ಹಾಕುತ್ತೇವೆ
Team Udayavani, Apr 28, 2022, 1:47 PM IST
ಬೆಂಗಳೂರು:ಹಣಕ್ಕಾಗಿ ಸರಕಾರಿ ಕೆಲಸ ಮಾರಾಟ ಮಾಡುವ ಗ್ಯಾಂಗ್ ಹೊರ ತರುತ್ತೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಗುರುವಾರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವೂ ತನಿಖೆ ಮಾಡಲು ಸಿಐಡಿಗೆ ಕೊಟ್ಟಿದ್ದೇವೆ. ನಾನೇ ಸ್ವತಃ ಈ ಬಗ್ಗೆ ತೀರ್ಮಾನ ಮಾಡಿ, ಸಿಎಂ ಗಮನಕ್ಕೆ ತಂದು ಮಾಡಿದ್ದೇವೆ.ಹಣಕ್ಕೆ ಸರ್ಕಾರಿ ಜಾಬ್ ಗಳನ್ನು ಮಾರಾಟ ಮಾಡುವ ಗ್ಯಾಂಗ್ ಗಳನ್ನೂ ಹೊರಗೆ ತರುತ್ತೇವೆ ಎಂದರು.
ಇದುವರೆಗೂ ದಿವ್ಯಾ ಹಾಗರಗಿ ಬಂಧನ ಮಾಡದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಿಎಸ್ ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸ್ಟ್ರಾಂಗ್ ಏನಿಲ್ಲ, ಅವರು ಊರು ಬಿಟ್ಟಿದ್ದಾರೆ . ಈಗಾಗಲೇ ಅವರಿಗೆ ಅರೆಸ್ಟ್ ವಾರೆಂಟ್ ಕೊಟ್ಟಿದ್ದಾರೆ. ಶೀಘ್ರವೇ ಅವರ ಆಸ್ತಿ ಮುಟ್ಟುಗೋಲು ಹಾಕಲಿದ್ದಾರೆ. ಗೌರವಯುತವಾಗಿ ಬಂದು ಶರಣಾಗಬೇಕು ಎಂದರು.
ವಿಚಾರಣೆಗೆ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹಾಜರಾಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಿಯಾಂಕ ಖರ್ಗೆ ಅನೇಕ ಆರೋಪ ಮಾಡಿದ್ದಾರೆ.ಸಿಐಡಿಯವರು ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ಇವರು ತನಿಖೆಗೆ ಸಹಕಾರ ಕೊಡದೆ ಪಲಾಯನ ಮಾಡಿದ್ದಾರೆ. ಅವರಿಗೆ ಕಾನೂನು ಗೊತ್ತಿಲ್ಲ. ಅವರು ದಾಖಲೆ ಕೊಡಬಹುದು ಅಲ್ವಾ? ಅವ್ರ ತಂದೆ ಎಷ್ಟು ದೊಡ್ಡವರು? ಅವರಿಗೆ ತನಿಖೆ ಬಗ್ಗೆ ಗೊತ್ತಿಲ್ಲವೇ? ಅವರನ್ನು ಏನು ಅರೆಸ್ಟ್ ಮಾಡ್ತಾರಾ? ವಿಚಾರಣೆ ತಾನೇ ಮಾಡೋದು, ಅವರ ಬಳಿ ಇರುವ ದಾಖಲೆ ಕೊಡಲಿ. ಬುಟ್ಟಿಯಲ್ಲಿ ಹಾವು ಇಟ್ಟುಕೊಂಡು ಬಿಡ್ತೀನಿ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಮೃತ್ ಪೌಲ್ ಅಪರಾಧಿ ಅನ್ನೋದು ಸರಿಯಲ್ಲ
ಅಮೃತ್ ಪೌಲ್ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಗಾವಣೆ ಸಹಜ ಪ್ರಕ್ರಿಯೆ. ಹಾಗಂತ ಅವರನ್ನು ಅಪರಾಧಿ ಅನ್ನೋದು ಸರಿಯಲ್ಲ. ತನಿಖೆಯಲ್ಲಿ ಯಾರ ಹೆಸರು ಬರುತ್ತೋ ಅವರೇ ತಪ್ಪಿತಸ್ಥರು ಆಗುತ್ತಾರೆ ಎಂದರು.
ಬೆಂಗಳೂರಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ನಾಗೇಶ್ ಎಂಬುವನು ಯುವತಿ ಮೇಲೆ ಆ್ಯಸಿಡ್ ಹಾಕಿದ್ದಾನೆ. ಈ ಕಾಲದಲ್ಲಿ ಇದೊಂದು ಅಮಾನುಷ ಕೃತ್ಯ. ಪೊಲೀಸರು ಅವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಯುವತಿಯನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ, ಒಳ್ಳೆಯ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.