ದಾಖಲೆಗಳು ಮನೆ ಬಾಗಿಲಿಗೆ ತಲುಪಿಸಿ ಕಂದಾಯ ಕ್ರಾಂತಿ ಮಾಡಿದ್ದೇವೆ: ಸಿಎಂ
ತವರು ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ
Team Udayavani, Mar 26, 2022, 2:20 PM IST
ಹಾವೇರಿ: ಮುಖ್ಯಮಂತ್ರಿ ತವರು ಕ್ಷೇತ್ರ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿರುವ ಕಂದಾಯ ದಾಖಲೆಗಳು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ಕಂದಾಯ ದಾಖಲೆ ಪಡೆಯುವುದು ಸಾಮನ್ಯ ಜನರಿಗೆ ರೈತರಿಗೆ ಸಮಸ್ಯೆ ಆಗಿತ್ತು. ಕಚೇರಿಗೆ ಅಲೆದಾಟ, ದಾಖಲೆಗಳನ್ನು ಕೊಡಲು ವಿಳಂಬ, ತಪ್ಪು ದಾಖಲೆ ಕೊಡುವುದು, ಭ್ರಷ್ಟಾಚಾರದಿಂದ ಕಷ್ಟ ಆಗಿತ್ತು. ಈಗ ನಮ್ಮ ಸರ್ಕಾರದಿಂದ ಮನೆ ಬಾಗಿಲಿಗೆ ದಾಖಲೆಗಳನ್ನು ವಿತರಿಸುವ ಮೂಲಕ ಕಂದಾಯ ಕ್ರಾಂತಿ ಮಾಡಿದ್ದೇವೆ ಎಂದರು.
ಯಾರ ಕಚೇರಿಗೆ ಹೋಗಿ ಕೈಕಟ್ಟಿಕೊಂಡು ನಿಲ್ಲುತ್ತಿದ್ದಿರೋ ಈಗ ಅದೇ ಅಧಿಕಾರಿಗಳು ನಿಮ್ಮ ಮನಗೆ ಬಂದು ದಾಖಲೆ ಕೊಡುತ್ತಾರೆ. ಒಂದು ದಿನ ಬರುತ್ತದೆ ಕಂದಾಯ ದಾಖಲೆಗಳು ಮನೆಗೆ ಬರುತ್ತಾವೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ, ಈಗ ರಾಜ್ಯದಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಮಳೆ ಹೆಚ್ಚಾಗಿ ಮಳೆಯಾನಿದಾಗ ಕೇಂದ್ರ ಸರ್ಕಾರ ಕೊಡುವ ಪರಿಹಾರವನ್ನೇ ಕೊಟ್ಟಿದ್ದರು. ಆದರೆ ನಮ್ಮ ಸರ್ಕಾರ ದುಪ್ಪುಟ್ಟು ಮಾಡಿದ್ದೇವೆ. ಇದು ಜನಪರ, ಜೀವಂತ ಇರುವ ಸರ್ಕಾರ. ಅಂಗವಿಕಲ ಮಾಶಾಸನ, ವಿಧವಾ ವೇತನ ಪಡೆಯಲು ಗ್ರಾಮ ಒನ್ ಕೇಂದ್ರ ಆರಂಭಿಸಿದ್ದೇವೆ. ಸರ್ಕಾರದ ಸವಲತ್ತುಗಳನ್ನು ಮನೆ, ಗ್ರಾಮಗಳಲ್ಲಿ ತಲುಪಿಸಿದ್ದೇವೆ ಎಂದರು.
ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಮಾಡಿದ್ದೇವೆ. ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೈಗಾರಿಕೆ, ಕೈಗೆ ಕೆಲಸ ಕೊಡುವ ಕೆಲಸ,ನೀರಾವರಿ, ರಸ್ತೆಗಳು, ಸಣ್ಣ, ದೊಡ್ಡ ಕೆರೆಗಳ ಅಭಿವೃದ್ಧಿ ಮಾಡುವ ವಿಶಿಷ್ಟ ಬಜೆಟ್ ಕೊಟ್ಟಿದ್ದೇವೆ.
ಬಜೆಟ್ ಗೆ ಎಲ್ಲ ವರ್ಗದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ. ರೈತ ಯಶಸ್ವಿನಿ ಕಾರ್ಯಕ್ರಮ ಪುನಾರಂಭಿಸಿದ್ದೇವೆ. 33 ಲಕ್ಷ ರೈತರಿಗೆ ಸಾಲ ಕೊಡುವ ವ್ಯವಸ್ಥೆ ಮಾಡಿದ್ದೇವೆ.
ಹಾಲು ಉತ್ಪಾದಕ ರೈತರಿಗೆ ಆರ್ಥಿಕ ಉತ್ತೇಜನ ನೀಡಲು ಅವರಿಗ ಒಂದು ಬ್ಯಾಂಕ್ ಆರಂಭಿಸಿದ್ದೇವೆ. ಏ. 1 ಕೇಂದ್ರ ಗೃಹ ಸಚಿವ ಅಮಿತ್ ಶಾ ಬ್ಯಾಂಕ್ ಲೋಗೋ ಬಿಡುಗಡೆ ಮಾಡಲಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಹಾಲು ಉತ್ಪಾದಕರಿಗೆ ಬ್ಯಾಂಕ್ ಆರಂಭಿಸಿದ್ದೇವೆ ಎಂದರು.
ಇಂದು ಕ್ಷೇತ್ರದ ಜನರು ಮತ ಹಾಕಿದ್ದಾಗಿ ಶಾಸಕ, ಮಂತ್ರಿಯಾಗಿ, ಈಗ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸುತ್ತಿದ್ದೇನೆ.
150ಕೋಟಿ ಗೂ., ಹೆಚ್ಚು ರಸ್ತೆ ಅಭಿವೃದ್ಧಿಗೆ, 250 ಬೆಡ್ ಆಸ್ಪತ್ರೆ, ಶಿಗ್ಗಾವಿ ಡಿಪೋ, ಕೆರೆ ತುಂಬಿಸುವ ಕಾರ್ಯಕ್ರಮ, ಜಿಟಿಟಿಸಿ ಮಂಜೂರಾತಿ ಆಗಿದೆ. ಆರ್ಯುವೇದಿಕ್ ಮೆಡಿಕಲ್ ಕಾಲೇಜು, ಬಂಕಾಪುರ ಡಿಪ್ಲೊಮಾ ಕಾಲೇಜ್ ಅನ್ನು ಎಂಜಿನಿಯರಿಂಗ್ ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಲಾಗುವುದು. ಹೀಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ ಎಂದರು.
1,23,180 ದಾಖಲೆಗಳನ್ನು ಶಿಗ್ಗಾವಿ ಕ್ಷೇತ್ರದ ಜನರಿಗೆ ತಲುಪಿಸಿದ್ದೇವೆ. ಗ್ರಾಮ ಒನ್ಎ ನಲ್ಲಿ 75 ಸಾವಿರ ಅರ್ಜಿ ಕೊಟ್ಟಿದ್ದೇವೆ. 56ಸಾವಿರ ಅರ್ಜಿ ಇತ್ಯರ್ಥ ಮಾಡಿದ್ದೇವೆ.ಆಡಳಿತದಲ್ಲಿ ಬದಲಾವಣೆ ಮಾಡಿದ್ದೇವೆ. ಜನಸ್ಪಂದನಾ ಸರ್ಕಾರ ನೀಡಿದ್ದೇವೆ.ಬಜೆಟ್ ನಲ್ಲಿ ನಮ್ಮ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಏ.1 ರಿಂದ ಪ್ರಾರಂಭವಾಗಲಿದೆ. ಯಾವುದಕ್ಕೆ ಹೋರಾಟ ಮಾಡಿದ್ದೇನೋ ಅದಕ್ಕೆ ಆಜ್ಞೆ ಮಾಡಿದ್ದೇನೆ. ಹಾಲು ಉತ್ಪಾದನೆ ಹೆಚ್ಚಿಸಲು ಆಕಳು ಕೊಡಲು ಪ್ರೋತ್ಸಾಹ ಧನ ಕೊಟ್ಟಿದ್ದೇವೆ. ಪ್ರತಿ ಗ್ರಾಪಂಗೆ ಮತ್ತೆ 50 ಮನೆ ಕೊಡಲಿದ್ದೇವೆ ಎಂದರು.
ನಮ್ಮ ಜಿಲ್ಲೆಗೆ ಮೆಗಾ ಡೈರಿ ಅಲ್ಲದೇ ರೇಷ್ಮೆ ಉತ್ಪಾದಕರಿಗೆ ರೇಷ್ಮೆ ಮಾರುಕಟ್ಟೆ ಮಾಡಲಿದ್ದೇವೆ. ಕೈಗಾರಿಕಾ ಟೌನ್ ಶಿಪ್ ಮಾಡಿದ್ದೇವೆ. ಬಹುತೇಕ ಆರ್ಥಿಕ ಅಭಿವೃದ್ಧಿ ನಮ್ಮ ಜಿಲ್ಲೆಯಲ್ಲಿ ಆಗಲಿದೆ ಎಂದರು.
ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ಕೊಡಲು ಕಾರ್ಯಕ್ರಮ ರೂಪಿಸಲಿದ್ದೇವೆ. ತಿಮ್ಮಾಪುರ ಜನ ಬಹಳ ಬೆರಕಿ ಇದ್ದೀರಿ. ಪ್ರೀತಿಯಿಂದ ಒಂದಾಗಿ ಎಲ್ಲ ಕೆಲಸ ಮಾಡಿಸಿಕೊಂಡಿದ್ದೀರಿ. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ಡಿಸಿ ಸಂಜಯ ಶೆಟ್ಟಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್, ಎಸಿ ಅನ್ನಪೂರ್ಣ ಮುದಕ್ಕಮ್ಮನವರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.