ನಮಗೆ ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು: ಸಿ.ಟಿ.ರವಿ
ಕಟು, ಮೃದು ಎಂದಿಲ್ಲ, ಹಿಂದುತ್ವ ಅಂದ್ರೆ ಹಿಂದುತ್ವ ಮಾತ್ರ
Team Udayavani, Mar 11, 2022, 3:03 PM IST
ಬೆಂಗಳೂರು : ಎಲ್ಲರನ್ನೂ ಒಳಗೊಳ್ಳುವುದೇ ನಿಜವಾದ ಹಿಂದುತ್ವ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಾಖ್ಯಾನಿಸಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟು ಹಿಂದುತ್ವ ಪ್ರತಿಪಾದನೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವನ್ನು ಜಾತಿವಾದಿಗಳು ತಪ್ಪಾಗಿ ಅರ್ಥೈಸಿದರು. ಕಟು, ಮೃದು ಎಂದಿಲ್ಲ, ಹಿಂದುತ್ವ ಅಂದ್ರೆ ಹಿಂದುತ್ವ ಮಾತ್ರ. ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು.ಸರ್ವೇಜನೋ ಸುಖಿನೋಭವಂತು ಇದೇ ಹಿಂದುತ್ವ.ಸಿದ್ದರಾಮಯ್ಯನಂತಹವರು ಹಿಂದುತ್ವವನ್ನು ತಪ್ಪಾಗಿ ವ್ಯಾಖ್ಯಾನ ಮಾಡಿದರು. ಸಬ್ ಕಾ ಸಾಥ್ ಸಬ್ ಕಾ ವಿನಾಶ್ ಎಂಬುದು ಅವರ ವಾದ. ಸಿದ್ದರಾಮಯ್ಯಗೆ ಕೇಸರಿ ಶಾಲು ಬೇಡ, ಸಾಬರ ಟೋಪಿ ಬೇಕು. ನಮಗೆ ಕೇಸರಿ ಶಾಲೂ ಬೇಕು, ಸಾಬರ ಟೋಪಿಯೂ ಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬುದೇ ಹಿಂದುತ್ವ ಎಂದು ಅಭಿಪ್ರಾಯಪಟ್ಟರು.
ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಮಾಡಿದ್ದರು.ನಾಲ್ಕು ರಾಜ್ಯಗಳಲ್ಲಿ ಆಡಳಿತ ಪರವಾದ ಅಲೆ ಇತ್ತು.ಪಂಜಾಬ್ ನಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಉತ್ತರ ಪ್ರದೇಶ ಸ್ಪರ್ಧೆ ಮಾಡಿದ ಶೇಕಡ 99 ರಷ್ಟು ಕಡೆ ಕಾಂಗ್ರೆಸ್ ಡೆಪಾಸಿಟ್ ಕಳೆದುಕೊಂಡಿದೆ. ಗೋವಾದಲ್ಲಿ ಐತಿಹಾಸಿಕ ದಾಖಲೆ ಮಾಡಿದ್ದೇವೆ. ಮೂರನೇ ಭಾರಿ ಅಧಿಕಾರಕ್ಕೆ ನಮ್ಮನ್ನ ಕೂರಿಸಿದ್ದಾರೆ ಎಂದರು.
ಮಣಿಪುರ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕದ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.ನಾಲ್ಕು ರಾಜ್ಯದ ಗೆಲುವಿಗೆ ಕರ್ನಾಟಕದ ಕಾರ್ಯಕರ್ತರು ಅಳಿಲು ಸೇವೆ ಸಲ್ಲಿಸಿದ್ದಾರೆ.ಮುಂದೆ ಗುಜರಾತ್,ಕರ್ನಾಟಕ ವಿಧಾನಸಭಾ ಚುನಾವಣೆ ಕೂಡ ಬರಲಿದೆ.ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ನಡೆಯುತ್ತಿದೆ. ಒಂದು ದೇಶ ಒಂದು ಚುನಾವಣೆ ಬಗ್ಗೆ ನಿರ್ಣಯ ಆಗಬೇಕಿದೆ ಎಂದರು.
ರಾಜ್ಯ ಕಾಂಗ್ರೆಸ್ ನಲ್ಲಿ ಕೆಲವರು ಖಾತೆಗಳನ್ನೂ ಫಿಕ್ಸ್ ಮಾಡ್ಕೊಂಡಿದ್ದಾರೆ.ಇಂತಿಂಥವರು ಇಂತಿಂಥ ಖಾತೆ ನಿರ್ವಹಿಸಬೇಕು ಅನ್ನೋದನ್ನು ನಿಗದಿ ಮಾಡಿಕೊಂಡಿದ್ದಾರೆ.ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೆ ಬರಲ್ಲ, ಮತ್ತೆ ಬಿಜೆಪಿಯೇ ಅಧಿಕಾರ ಹಿಡಿಯುತ್ತೆ ಎಂದರು.
ನಾಲ್ಕು ರಾಜ್ಯಗಳಲ್ಲಿ ಬಂದ ಫಲಿತಾಂಶವೇ ಕರ್ನಾಟಕದಲ್ಲೂ ಬರಲಿದೆ.ಕರ್ನಾಟಕದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ.ಕಾಂಗ್ರೆಸ್ ನಲ್ಲಿ ಸಿಎಂ ಆಗಲು ಹೊಸ ಪಂಚೆ, ಶಲ್ಯ ಕೊಂಡ್ಕೊಂಡವರಿದ್ದಾರೆ. ಕೋಟು, ಸೂಟು ಹೊಲಿಸ್ಕೊಂಡವರೂ ಇದ್ದಾರೆ. ಅವರ ಕನಸು ಇಲ್ಲಿ ನನಸಾಗಲ್ಲ ಎಂದರು.
ಕೆಲವು ವಿಚಾರ ನಾನು ಬಹಿರಂಗ ಮಾತಾಡಲು ಆಗುವುದಿಲ್ಲ.ಹಾಗೆ ಮಾತಾಡಿದರೆ ವಿವಾದ ಆಗಬಹುದುನಮ್ಮ ಪಕ್ಷದ ದುರ್ಬಲತೆಗೆ ಯಾವ ಟಾನಿಕ್ ಕೊಡ್ಬೇಕೋ ಅದನ್ನು ಕೊಡ್ತೀವಿ. ನಮ್ಮ ಸಾಮರ್ಥ್ಯ, ನಮ್ಮ ಮಿತಿ ನಮಗೆ ಗೊತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.