“ಉ.ಪ್ರ.ದಲ್ಲಿ ಕ್ಷಿಪಣಿಯನ್ನೇ ಉತ್ಪಾದಿಸುತ್ತೇವೆ”: ರಾಜನಾಥ ಸಿಂಗ್
Team Udayavani, Jun 18, 2023, 7:02 AM IST
ಲಕ್ನೋ: ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್‌ನಲ್ಲಿ ಬರೀ ನಟ್-ಬೋಲ್ಟ್‌ಗಳನ್ನಲ್ಲ, ಶತ್ರುಗಳ ಹಿಮ್ಮೆಟ್ಟಿಸುವ ಬ್ರಹ್ಮೋಸ್‌ನಂಥ ಬಲಿಷ್ಠ ಕ್ಷಿಪಣಿ, ಡ್ರೋನ್‌ಗಳು, ತಂತ್ರಜ್ಞಾನ ಚಾಲಿತ ಯುದ್ಧ ಉಪಕರಣಗಳು, ಯುದ್ಧ ವಿಮಾನಗಳನ್ನು ಉತ್ಪಾದಿಸಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ.
ಲಕ್ನೋನಲ್ಲಿ ಆತ್ಮನಿರ್ಭರ ಭಾರತದ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜನಾಥ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶ ಹಾಗೂ ತಮಿಳುನಾಡಿನ ರಕ್ಷಣಾ ಕಾರಿಡಾರ್‌ಗಳು ಭಾರತ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾಗಿವೆ. ಈ ಕಾರಿಡಾರ್‌ಗಳಲ್ಲಿ ರಕ್ಷಣಾ ಪರಿಕರಗಳಿಗೆ ಬೇಕಾಗುವ ನಟ್-ಬೋಲ್ಟ್‌ಗಳನ್ನು ಮಾತ್ರವಲ್ಲ, ಸ್ವತಃ ಬ್ರಹ್ಮೋಸ್‌ನಂಥ ಕ್ಷಿಪಣಿಗಳನ್ನೂ ಉತ್ಪಾದಿಸಲಾಗುತ್ತದೆ. ಈ ಮಹತ್ವಾಕಾಂಕ್ಷೆಯ ಕಾರಿಡಾರ್‌ಗಳು ರಕ್ಷಣಾ ವ್ಯವಸ್ಥೆಯಲ್ಲಿ ವಿದೇಶಗಳ ಅವಲಂಬನೆಯನು ತಗ್ಗಿಸುವುದು ಮಾತ್ರವಲ್ಲದೇ, ರಕ್ಷಣಾ ಕ್ಷೇತ್ರವನ್ನು ಅತೀ ಪ್ರಭಾವಶಾಲಿಯನ್ನಾಗಿಸುತ್ತವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.