ಅನುಷ್ಕಾರನ್ನು ಇಂಪ್ರೆಸ್ ಮಾಡಿದ ವಿರಾಟ್ ಕೊಹ್ಲಿ ಗುಣ ಯಾವುದು ?
ʻಇಂಡಿಯನ್ ಸ್ಪೋರ್ಟ್ಸ್ ಹಾನರ್ 2023ʼಯಲ್ಲಿ ವಿಷಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾ
Team Udayavani, Mar 28, 2023, 5:41 PM IST
ಮುಂಬೈ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ನ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಸುಮಾರು 6 ವರ್ಷಗಳೇ ಕಳೆದಿವೆ. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನುಷ್ಕಾ ಶರ್ಮಾ ಕೊಹ್ಲಿ ಮತ್ತು ತಮ್ಮ ನಡುವೆ ನಡೆದಿದ್ದ ಮೊದಲ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ.
ಭಾರತದ ಸೆಲೆಬ್ರಿಟಿ ಜೋಡಿಗಳಲ್ಲೇ ಸದಾ ಸುದ್ದಿಯಲ್ಲಿರುವ ಸ್ಟಾರ್ ದಂಪತಿಗಳೆಂದರೆ ಅದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ತಮ್ಮ ಮಧುರ ದಾಂಪತ್ಯದಿಂದಾಗಿಯೇ ಹಲವು ಬಾರಿ ಮುನ್ನೆಲೆಗೆ ಬರುವ ʻವಿರುಷ್ಕಾʼ ಹಲವು ಯುವಜನರ ಮನಗೆದ್ದಿದ್ದಾರೆ.
ಈಗಾಗಲೇ ಯುವಜನರ ಮನಗೆದ್ದಿರುವ ಈ ಜೋಡಿಯ ಪೈಕಿ, ಅನುಷ್ಕಾ ಶರ್ಮಾ, ವಿರಾಟ್ ಮೊದಲ ಬಾರಿಗೆ ತನ್ನ ಮನಸ್ಸನ್ನು ಹೇಗೆ ಗೆದ್ದರು ಎಂಬ ಬಗ್ಗೆ ಇತ್ತೀಚೆಗೆ ನಡೆದ ಇಂಡಿಯನ್ ಸ್ಪೋರ್ಟ್ಸ್ ಹಾನರ್ 2023 ಕಾರ್ಯಕ್ರಮದ ರೆಡ್ಕಾರ್ಪೆಟ್ನಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
ಅಂದ ಹಾಗೆ, ತಮ್ಮ ಮೊದಲ ಡೇಟಿಂಗ್ಗೂ ಮೊದಲು ಅನುಷ್ಕಾ ಹೃದಯ ಗೆದ್ದದ್ದು ವಿರಾಟ್ ಅವರ ಶಾರ್ಪ್ ಮೆಮೊರಿ ಅಂತೆ. ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ಧಾರೆ.
ʻನಾನು ವಿರಾಟ್ನನ್ನು ಮೊದ ಮೊದಲು ನೋಡುತ್ತಿದ್ದಾಗ ನಾನು ಅವರಲ್ಲಿ ಗಮನಿಸಿದ್ದು ಮತ್ತು ಮಾರುಹೋದ್ದು ವಿರಾಟ್ನ ತೀಕ್ಷ್ಣ ನೆನಪಿನ ಶಕ್ತಿಗೆ. ಅದು ನನಗೆ ತುಂಬಾ ಸಹಕಾರಿಯಾಗಲಿದೆʼ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ಅನುಷ್ಕಾ ಹೇಳಿದ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Before he dons Bangalore’s red jersey at IPL 2023, see how he performs on the red carpet!
We witnessed Virushka’s compatibility first-hand 🫶
Tune-in to the @sportshonours
Today | 8 PM & 10 PM | Star Sports Network#ISH2023 pic.twitter.com/XsKMLpUrI0— Star Sports (@StarSportsIndia) March 26, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.