ನಟಿ ರೇಖಾ ವಿವಾಹವಾಗಲು ಮುಂದಾಗಿದ್ದ ಇಮ್ರಾನ್ ಖಾನ್: ಸುದ್ದಿ ಮತ್ತೆ ಮುನ್ನೆಲೆಗೆ
Team Udayavani, Apr 10, 2022, 12:54 PM IST
ಮುಂಬಯಿ: ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ, ಪಟ್ಟವನ್ನು ತ್ಯಜಿಸಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಗತ ಕಾಲದಲ್ಲಿ ಪ್ರಖ್ಯಾತ ಬಾಲಿವುಡ್ ನಟಿ ರೇಖಾ ಅವರನ್ನು ಮದುವೆಯಾಗಲು ಮುಂದಾಗಿದ್ದರು ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಕ್ರೀಡಾ ಮತ್ತು ಚಲನಚಿತ್ರ ತಾರೆಯರು ಕೈಜೋಡಿಸುವ ಹಲವು ಕಥೆಗಳಲ್ಲಿ ಇಮ್ರಾನ್ ಮತ್ತು ರೇಖಾ ಅವರ ವಿಚಾರವೂ ಒಂದು ಕಾಲದಲ್ಲಿ ಸುದ್ದಿಯಾಗಿತ್ತು. ಅದು ದೊಡ್ಡ ವಿವಾದಗಳಿಗೆ ಕಾರಣವಾಗಿತ್ತು.
ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಇಮ್ರಾನ್ ಜೀವನದಲ್ಲಿ ಹಲವು ಮಹಿಳೆಯರ ಹೃದಯಗಳನ್ನೂ ಗೆದ್ದಿದ್ದರು. ಅವರು ತಮ್ಮ ಆಟದ ದಿನಗಳಲ್ಲಿ ಬಾಲಿವುಡ್ ನಟಿಯರು ಸೇರಿದಂತೆ ಅನೇಕ ಸುಂದರ ಮಹಿಳೆಯರ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಮತ್ತು ರೇಖಾ ಮತ್ತು ಅವರ ನಡುವಿನ ಸಂಬಂಧ ಪ್ರೀತಿಗೆ ತಿರುಗಿ ಇಬ್ಬರು ಜತೆಯಲ್ಲಿ ಸಮಯವನ್ನೂ ಕಳೆದಿದ್ದರು. ವರದಿಗಳ ಪ್ರಕಾರ, ನಟಿಯ ರೇಖಾ ಅವರ ತಾಯಿ ಕೂಡ ಅವರ ಸಂಬಂಧವನ್ನು ಅನುಮೋದಿಸಿದ್ದರು ಮತ್ತು ಅವರ ಜೀವನದ ಕುರಿತಾಗಿ ತಿಳಿಯಲು ಜ್ಯೋತಿಷಿಯನ್ನೂ ಸಂಪರ್ಕಿಸಿದ್ದರು ಎಂದು ದಿ ಸ್ಟಾರ್‌ನಲ್ಲಿ ಹಿಂದೆ ಪ್ರಕಟವಾದ ಲೇಖನದ ವರದಿ ಹೇಳುತ್ತದೆ.
ಎಲ್ಲವೂ ನಿರೀಕ್ಷಿಸಿದಂತೆ ನಡೆಯಲಿಲ್ಲ ಮತ್ತು ಇಬ್ಬರೂ ಬೇರೆಯಾದರು. ನಾನು ನಟಿಯರ ಸಹವಾಸವನ್ನು ಆನಂದಿಸುತ್ತೇನೆ ಆದರೆ ಎಂದಿಗೂ ಮದುವೆಯಾಗುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಮ್ರಾನ್ ಖಾನ್ ರೇಖಾ ಮಾತ್ರವಲ್ಲದೆ ಜೀನತ್ ಅಮಾನ್ ಜತೆ ಸಂಪರ್ಕ ಹೊಂದಿದ್ದುದು ಬಹಿರಂಗವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.