ಯಾರು ಮುಳುಗುತ್ತಿದ್ದಾರೆ? ಬಿಜೆಪಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ
Team Udayavani, Nov 29, 2021, 1:45 PM IST
ಬೆಳಗಾವಿ: ಯಾರು ಮುಳುಗುತ್ತಿದ್ದಾರೆ ಎಂದು ಜೆಡಿಎಸ್ ಬೆಂಬಲಕೇಳುತ್ತಿರುವ ಬಿಜೆಪಿ ಉತ್ತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೋಮವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕಳೆದ ಬಾರಿಗಿಂತ ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ.ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ’ ಎಂದರು.
‘ಕಾಂಗ್ರೆಸ್ ಮುಳುಗುತ್ತಿರುವ ಹಡಗು’ ಎಂಬ ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಯಡಿಯೂರಪ್ಪ ಅವರು ಜನತಾದಳದ ಬೆಂಬಲ ಕೇಳಿದ್ದಾರೆ.ಸಿಎಂ ಬೊಮ್ಮಾಯಿ ಅವರು ಕೇಳುತ್ತಿದ್ದಾರೆ ಎಂದು ಸುದ್ದಿ.ಅರುಣ್ ಸಿಂಗ್ ಅವರು ಜನತಾದಳ ಬಗ್ಗೆನೀಡಿದ ಹೇಳಿಕೆ ಬಳಿಕವೂ ಮಾಜಿ ಪ್ರಧಾನಿ, ಮಾಜಿ ಸಿಎಂ ಜತೆಗೆ ಮಾತಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಹಾಗಾದರೆ ಯಾರು ಮುಳುಗುತ್ತಿದ್ದಾರೆ ಅವರು ಬಲಿಷ್ಠವಾಗಿದ್ದರೆ ಜನತಾದಳದ ಬೆಂಬಲ ಯಾಕೆ ಕೇಳಬೇಕು’ ಎಂದು ಡಿಕೆಶಿ ಪ್ರಶ್ನಿಸಿದರು.
ಇದನ್ನೂ ಓದಿ : ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ: ವೇಳಾಪಟ್ಟಿ ಪ್ರಕಟ
ಬ್ಲ್ಯಾಕ್ ಮೇಲರ್
ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ.ಎಫ್ ಬಾಬು ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಸೋಮಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ನೂರಾರು ಅಭ್ಯರ್ಥಿಗಳು ನೂರಾರು ವ್ಯವಹಾರ ಇಟ್ಟುಕೊಂಡಿರುತ್ತಾರೆ.ದಾಖಲೆ ಬಿಡುಗಡೆ ಮಾಡಲಿ, ಯಾರು ಯಾವ ಅಭ್ಯರ್ಥಿಗಳ ಬಗ್ಗೆ ನಾನೇನು ಹೇಳಲಿ’ ಎಂದು ಕಿಡಿ ಕಾರಿದರು.
‘ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ’ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಬಿಜೆಪಿ ಶಿಸ್ತಿನ ಪಕ್ಷ ಅಂತ ಮಾತನಾಡುತ್ತಾರೆ.ಬಿಜೆಪಿಗೆ ಸ್ವಾಭಿಮಾನ, ಶಿಸ್ತು ಇದ್ದರೆ ಅದಕ್ಕೆ ಉತ್ತರ ಕೊಡಲಿ.ಬ್ಲ್ಯಾಕ್ ಮೇಲರ್ಸ್ ಪಾರ್ಟಿ, ಬ್ಲ್ಯಾಕ್ ಮೇಲರ್ಸ್ ಜತೆ ಹೊಂದಾಣಿಕೆ ಮಾಡುತ್ತೇವೆ ಎಂದರೆ ಅವರಿಗೆ ಇಷ್ಟ ಬಂದ ಹಾಗೆ ಮಾಡಿಕೊಳ್ಳಲಿ.ಬಿಜೆಪಿ ಈ ಮಟ್ಟಿಗೆ ಬಂತಲ್ಲಾ, ಬ್ಲ್ಯಾಕ್ ಮೇಲರ್ಸ್‌ಗೆ ಹೆದರಿಕೊಂಡು ಸರ್ಕಾರ ನಡೆಸುತ್ತಿದೆ ಎನ್ನುವುದು ಸಂತೋಷ’, ಎಂದು ರಮೇಶ ಜಾರಕಿಹೊಳಿಗೆ ಪರೋಕ್ಷವಾಗಿ ‘ಬ್ಲ್ಯಾಕ್ ಮೇಲರ್’ ಎಂದರು.
ಕಳೆದ ಬಾರಿ ಕಾಂಗ್ರೆಸ್ ಪಕ್ಷದಲ್ಲಿದ್ದೇ ಕಾಂಗ್ರೆಸ್ ಅಭ್ಯರ್ಥಿ ರಮೇಶ ಸೋಲಿಸಿದರೂ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ,
ಅದು ಆ ಕಾಲ, ನನ್ನ ಕಾಲದಲ್ಲಿ ಯಾರಾದರೂ ಹಾಗೇ ಮಾಡಿ ನೋಡಲಿ ಆಮೇಲೆ ತೋರಿಸುತ್ತೇನೆ ಎಂದರು.
ಹೆಬ್ಬಾಳ್ಕರ್ ಬಗ್ಗೆ ರಮೇಶ್ ಜಾರಕಿಹೊಳಿ ಥೂ.. ಥೂ.. ಅಂತಾ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ. ಬಿಜೆಪಿಯಲ್ಲಿ ಶೇಕಡಾ ಐವತ್ತರಷ್ಟು ಮಹಿಳಾ ಸದಸ್ಯರಿದ್ದಾರೆ.ಬಿಜೆಪಿ ಸಂಸ್ಕೃತಿ, ಸಂಸ್ಕಾರ ಇರುವ ಪಕ್ಷ ಅಂತಾ ಹೇಳಿಕೊಳ್ತಾರೆ. ಶೋಭಕ್ಕ, ಯಡಿಯೂರಪ್ಪ, ಬೊಮ್ಮಾಯಿ, ಕಟೀಲರು ಇದಕ್ಕೆ ಉತ್ತರ ಕೊಡಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.