ಯಾರಿಗೆ ಒಲಿಯಲಿದೆ CM ಪಟ್ಟ ?

ಬಿಜೆಪಿಯಲ್ಲಿ ವಿಪಕ್ಷ ನಾಯಕ ಸ್ಥಾನ ಯಾರಿಗೆ ಒಲಿಯಬಹುದೆಂಬ ಪ್ರಶ್ನೆ !

Team Udayavani, May 14, 2023, 7:47 AM IST

SIDDU DK SHI

ಬೆಂಗಳೂರು: ಕಾಂಗ್ರೆಸ್‌ನನಿಚ್ಚಳ ಗೆಲುವಿನ ಬಳಿಕ ಈಗ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಯೂ ಆರಂಭವಾಗಿದೆ. ಹಾಗೆಯೇ ಬಿಜೆಪಿಯಲ್ಲಿ ಬಹುತೇಕ ಅತಿರಥ ಮಹಾರಥರು ಸೋತಿದ್ದು, ವಿಪಕ್ಷ ನಾಯಕನ ಸ್ಥಾನ ಯಾರಿಗೆ ಎಂಬ ಚರ್ಚೆ ಕೂಡ ಪ್ರಾರಂಭವಾಗಿದೆ.

ಸದ್ಯ ಕಾಂಗ್ರೆಸ್‌ನಲ್ಲಿ ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇದ್ದಾರೆ. ಪಕ್ಷಕ್ಕಾಗಿ ತನು, ಮನ, ಧನ ಧಾರೆ ಎರೆದ ಡಿಕೆಶಿ ಸಹಜವಾಗಿಯೇ ಈ ರೇಸ್‌ನಲ್ಲಿ ಮುಂದಿದ್ದಾರೆ. ಆದರೆ ಕುರುಬ ಹಾಗೂ ಮುಸ್ಲಿಂ ಮತ ಗಟ್ಟಿಯಾಗಿ ಕಾಂಗ್ರೆಸ್‌ ಪಾಳಯಕ್ಕೆ ಒಲಿಯುವಂತೆ ನೋಡಿಕೊಳ್ಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಯೋಗದಾನ ಗೆಲುವಿನಲ್ಲಿ ಹೆಚ್ಚಿದೆ.

ಪಕ್ಷ ಅತ್ಯಂತ ಕಷ್ಟದಲ್ಲಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಿರಿಯರೆಲ್ಲರೂ ಕಾಂಗ್ರೆಸ್‌ ಸಾರಥ್ಯ ವಹಿಸಲು ಹಿಂದಡಿ ಇಟ್ಟಾಗ, ಪರಿ ಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಕಟ್ಟಿದವರು ಶಿವಕುಮಾರ್‌. ನಿರಂತರ 2 ವರ್ಷಗಳ ಕಾಲ ಹಗಲಿರುಳು ಪಟ್ಟ ಶ್ರಮ ಅವರಿಗೆ ವರದಾನವಾಗ ಬಹುದು. ಈ ವಿಚಾರವನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಷ್ಟು ಸುಲಭವಾಗಿ ನಿರ್ಲಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಮುಂದಿನ 1 ವರ್ಷದಲ್ಲಿ ಎದು ರಾಗುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕಾಂಗ್ರೆಸ್‌ ವರಿಷ್ಠರು ತುಸು ಎಚ್ಚರಿಕೆಯ ಹೆಜ್ಜೆ ಇಡಬಹುದು. ಇಬ್ಬರು ನಾಯಕರ ಮಧ್ಯೆ ಅಧಿಕಾರ ಹಂಚಿಕೆ ಸೂತ್ರವನ್ನು ಮುಂದಿಟ್ಟು ಪರಿಸ್ಥಿತಿ ನಿಭಾಯಿಸುವ ಸಾಧ್ಯತೆಯೂ ಇದೆ.

ಅಂಥ ಸಂದರ್ಭ ಬಂದಾಗ ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಶಿವಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತರನ್ನಾಗಿಸಬಹುದು. ಆದರೆ ಒಮ್ಮೆ ಸಿದ್ದರಾಮಯ್ಯ ಕೈಗೆ ಅಧಿಕಾರ ಸಿಕ್ಕರೆ ಅದನ್ನು ತಪ್ಪಿಸುವುದು ಕಷ್ಟ ಎಂದು ಶಿವಕುಮಾರ್‌ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದರೆ ಆಗ ಪರಿಸ್ಥಿತಿ ಜಟಿಲವಾಗಬಹುದು. ಅಂಥ ಸಂದರ್ಭದಲ್ಲಿ ಹೈಕಮಾಂಡ್‌ “ಪರ್ಯಾಯ ಮುಖ’ ವನ್ನು ಮುಂದೆ ತರಬಹುದು. ಅಂಥ ಸಾಧ್ಯತೆಗಳು ಕ್ಷೀಣವಾಗಿವೆಯಾದರೂ ಉಭಯ ಬಣಕ್ಕೆ ಸಮ್ಮತವಾಗುವ ರೀತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸಹಮತದ ಅಭ್ಯರ್ಥಿಯಾಗಿ ಸಿಎಂ ರೇಸ್‌ನಲ್ಲಿ ಮುಂಚೂಣಿಗೆ ಬಂದರೂ ಆಶ್ಚರ್ಯವಿಲ್ಲ. ಖರ್ಗೆ ಪಟ್ಟಾಭಿಷೇಕಕ್ಕೆ ಶಿವಕುಮಾರ್‌ ಬಣದಿಂದ ತೀವ್ರ ವಿರೋಧ ಬರಲಾರದು. ಸಿಎಂ ಯಾರು ಎಂಬ ಪ್ರಶ್ನೆಗೆ 2 ದಿನಗಳಲ್ಲಿ ಉತ್ತರ ಸಿಗಲಿದೆ.

ವಿಪಕ್ಷ ನಾಯಕ ಯಾರು?

ಬಿಜೆಪಿಯಲ್ಲಿ ವಿಪಕ್ಷ ನಾಯಕ ಸ್ಥಾನ ಯಾರಿಗೆ ಒಲಿಯಬಹುದೆಂಬುದು ಈಗಿನ ಪ್ರಶ್ನೆ. ಈ ಸ್ಥಾನ ಬಸವರಾಜ ಬೊಮ್ಮಾಯಿ ಅವರಿಗೆ ಒಲಿಯಬಹುದೆಂಬುದು ಒಂದು ಲೆಕ್ಕಾಚಾರ. ಸದನದಲ್ಲಿ ಕಾಂಗ್ರೆಸನ್ನು ಎದುರಿಸಬೇಕಾದರೆ ಸಂಸದೀಯ ಪಟ್ಟುಗಳು ಕರಗತವಾಗಿರುವ ವ್ಯಕ್ತಿ ಬೇಕು. ಆಗ ಬೊಮ್ಮಾಯಿ ಆಯ್ಕೆ ಅನಿವಾರ್ಯವಾಗಬಹುದು.

ಆದರೆ ಪಕ್ಷದ ಹೀನಾಯ ಸೋಲಿಗೆ ಬೊಮ್ಮಾಯಿ ಆಡಳಿತ ವೈಖರಿಯೇ ಕಾರಣ ಎಂಬ ಟೀಕೆ ಬಲವಾಗಿರುವುದರಿಂದ ಪಕ್ಷ ನಿಷ್ಠರು ಹಾಗೂ ಮೂಲ ಬಿಜೆಪಿಯ ಮುಖಕ್ಕೆ ಮನ್ನಣೆ ಹಾಕಬೇಕಾಗಬಹುದು. ಅಂಥ ಸಂದರ್ಭ ಬಂದಾಗ ಬಸನಗೌಡ ಪಾಟೀಲ್‌ ಯತ್ನಾಳ್‌ ಅಥವಾ ಸುನಿಲ್‌ ಕುಮಾರ್‌ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿಯ ಆಯ್ಕೆಯಾಗಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಬಿಜೆಪಿಯ ಮುಂದೆ ಸದ್ಯಕ್ಕೆ ಬೇರೆ ಆಯ್ಕೆಗಳು ಕಡಿಮೆ.

ಟಾಪ್ ನ್ಯೂಸ್

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

Mangaluru: ಶೋಷಣೆ ಎಲ್ಲ ರಂಗದಲ್ಲೂ ಇದೆ: ಡಾ| ಗುರುಕಿರಣ್‌

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

Desi Swara: ಸೌಪರ್ಣಿಕಾ ನದಿ ತೀರದಲ್ಲಿ- ಏಕಾಂತದಿ ತೆರೆದ ನೆನೆಪಿನ ಗುಚ್ಛಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

parappana agrahara prison

Bengaluru: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್‌ ಫೋನ್‌ ಅಂಗಡಿ!

Alert Cop Averts Mishap After Bmtc Bus Driver  got chest pain

Bengaluru; ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

Mudigere: 30 ಅಡಿ ಎತ್ತರದಿಂದ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Mudigere: 30 ಅಡಿ ಎತ್ತರದಿಂದ ಪಂಚಾಯತ್ ಆವರಣಕ್ಕೆ ಬಿದ್ದ ಕಾರು… ಮೂವರ ಸ್ಥಿತಿ ಗಂಭೀರ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Desi Swara: ಮೊಂತಿ ಆಚರಣೆ- ವರ್ಷದ ಮೊದಲ ಸುಗ್ಗಿ ಸಂಭ್ರಮ

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Parvin Dabas: ಬಾಲಿವುಡ್ ನಟ ಪರ್ವಿನ್ ದಾಬಾಸ್ ಕಾರು ಅಪಘಾತ… ಐಸಿಯುನಲ್ಲಿ ಚಿಕಿತ್ಸೆ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Upendra: ‘ಭಗವಂತನೇ ಈ ಸಿನಿಮಾ ಮಾಡ್ಸಿದಾನೆ..’: ‘ಉಪೇಂದ್ರ’ ನೋಡಿ ಉಪೇಂದ್ರ ಭಾವುಕ

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.