ಉಕ್ರೇನ್ ವಿಚಾರದಲ್ಲಿ ಭಾರತದ ದಿವ್ಯ ತಾಟಸ್ಥ್ಯ ಏಕೆ?

ಪಾಕಿಸ್ತಾನಕ್ಕೆ ರಕ್ಷಣಾ ನೆರವು ನೀಡುವ ರಾಷ್ಟ್ರಗಳ ಪೈಕಿ ಉಕ್ರೇನ್ ಮುಂಚೂಣಿಯಲ್ಲಿ..

Team Udayavani, Feb 26, 2022, 12:01 PM IST

11errerere

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಳ್ಳಲು ಅಲ್ಬೇನಿಯಾ ಹಾಗೂ ಅಮೆರಿಕಾ ಸೇರಿ ಮಂಡಿಸಿದ ನಿರ್ಣಯದಿಂದ ಹೊರಗುಳಿಯುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಅಚ್ಚರಿ ಸೃಷ್ಟಿಸಿದೆ.

ರಷ್ಯಾ ವಿರುದ್ಧ ನಿರ್ಣಯ ತೆಗೆದುಕೊಳ್ಳುವಂತೆ ಅಮೆರಿಕಾ ಭಾರತದ ಮೇಲೆ ನಿರಂತರ‌ ಒತ್ತಡ ಹೇರಿದ್ದರೂ ಸಭೆಗೆ ಗೈರಾಗುವ ಮೂಲಕ ಭಾರತ ರಷ್ಯಾದ ಪರ ನಿಂತಂತಾಗಿದೆ. ಈ ಪ್ರಕರಣದಲ್ಲಿ ಭಾರತ ಇದುವರೆಗೂ ಬಹಿರಂಗ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ, ರಷ್ಯಾ ಪ್ರಧಾನಿ ಪುಟಿನ್ ಜತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಸಂಭಾಷಣೆ ನಡೆಸಿದ್ದರೂ ಅದು ಉಕ್ರೇನ್ ಪರ ಧ್ವನಿಯಾಗಿರಲಿಲ್ಲ ಎಂದೇ ಹೇಳಲಾಗುತ್ತಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಅಲ್ಲದೇ ಇದ್ದರೂ ತಾತ್ಕಾಲಿಕ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಶಕ್ತಿಶಾಲಿಯಾಗಿದೆ. ಈ ಕಾರಣಕ್ಕಾಗಿಯೇ ಉಕ್ರೇನ್ ವಿದೇಶಾಂಗ ಸಚಿವ ಡಿ ಮ್ಯಾತ್ರೋ ಕುಲೇಬಾ, ಟ್ವೀಟ್ ಮಾಡಿ ” ಭಾರತ ತನ್ನ ಬಾಂಧವ್ಯ ಹಾಗೂ ಎಲ್ಲ ಪ್ರಭಾವವನ್ನು ಬಳಸಿ ಯುದ್ಧ ನಿಲ್ಲಿಸುವಂತೆ ರಷ್ಯಾದ ಮೇಲೆ ಪ್ರಭಾವ ಬೀರಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ರಷ್ಯಾ ವಿರುದ್ಧ ನಿರ್ಣಯದಲ್ಲಿ ಭಾಗಿಯಾಗಬೇಕು” ಎಂದು ಒತ್ತಾಯಿಸಿದ್ದರು‌.

ಆದರೆ ರಷ್ಯಾ- ಉಕ್ರೇನ್, ರಷ್ಯಾ-ಚೀನಾ, ಭಾರತ- ಚೀನಾ, ಭಾರತ- ಪಾಕಿಸ್ತಾನ ಮಧ್ಯೆ ಇರುವ ದೀರ್ಘ ಕಾಲೀನ ಜಿಯೋಪಾಲಿಟಿಕಲ್ ಲೆಕ್ಕಾಚಾರಗಳೇ ಭಾರತ ಉಕ್ರೇನ್ ಪರ ವಾದಿಸದೇ ಇರುವುದಕ್ಕೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರಷ್ಯಾ ಜತೆಗಿನ ಭಾರತದ ಬಾಂಧವ್ಯದ ಲೆಕ್ಕಾಚಾರವೂ ಸೇರಿದಂತೆ ನ್ಯಾಟೋ ರಾಷ್ಟ್ರಗಳ‌ ಜತೆಗಿನ ಸಾಂಗತ್ಯವನ್ನು ಅಧರಿಸಿ ಉಕ್ರೇನ್ ಭಾರತದ ಪರವಾದ ನಿರ್ಣಯವನ್ನು ಎಂದೂ ತೆಗೆದುಕೊಂಡಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಲಾನುಕಾಲಕ್ಕೆ ಉಕ್ರೇನ್ ಪಾಕಿಸ್ತಾನದ ಪರವಾಗಿಯೇ‌ ನಿರ್ಧಾರ ತೆಗೆದುಕೊಂಡಿದೆ.

ಭಾರತದ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ಉಕ್ರೇನ್ ವಿರೋಧ ವ್ಯಕ್ತಪಡಿಸುವ ಜತೆಗೆ ಭಾರತಕ್ಕೆ ಕ್ಷಿಪಣಿ ತಂತ್ರಜ್ಞಾನ ಪೂರೈಕೆಗೆ ಅನ್ಯ ರಾಷ್ಟ್ರಗಳು ಸಹಕಾರ ನೀಡಬಾರದು ಎಂದು ವಾದಿಸಿತ್ತು. ವಾಜಪೇಯಿ ಕಾಲದಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿದಾಗ ಉಕ್ರೇನ್ ಕೂಡಾ ಆರ್ಥಿಕ ನಿರ್ಬಂಧ ವಿಧಿಸಿತ್ತು. ಸಾಲದಕ್ಕೆ ಪಾಕಿಸ್ತಾನಕ್ಕೆ ರಕ್ಷಣಾ ನೆರವು ನೀಡುವ ರಾಷ್ಟ್ರಗಳ ಪೈಕಿ ಉಕ್ರೇನ್ ಮುಂಚೂಣಿಯಲ್ಲಿದೆ. ಈ ಎಲ್ಲ ಕಾರಣಗಳಿಂದ ಭಾರತ ಉಕ್ರೇನ್ ವಿಚಾರದಲ್ಲಿ ದಿವ್ಯ ತಟಸ್ಥವಾಗಿದೆ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

Harmanpreet Singh: ಹಾರ್ಮೋನಿಯಂ ಹುಚ್ಚಿದ್ದ ಹಳ್ಳಿಯ ಹುಡುಗ ಇದೀಗ ಹಾಕಿ ಸೂಪರ್‌ ಸ್ಟಾರ್‌

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

India: ಭಾರತದ ಈ ಏಳು ರೈಲ್ವೆ ನಿಲ್ದಾಣಗಳ ಹೆಸರೇ ತುಂಬಾ ತಮಾಷೆಯಾಗಿದೆ… ಎಲ್ಲಿವೆ ಅವು!

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಬಾರಿ ಮದುವೆಯಾಗುತ್ತಾನಂತೆ! ಕಾರಣವೂ ವಿಚಿತ್ರ

smi irani

Smriti Irani ದೆಹಲಿ ಬಿಜೆಪಿಯಲ್ಲಿ ಸಕ್ರಿಯ: ”ಸಿಎಂ ಫೇಸ್” ಆಗಿ ಕೇಳಿ ಬರುತ್ತಿರುವ ಹೆಸರು!

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

International Day of Democracy: “ವಿಶ್ವ ಪ್ರಜಾಪ್ರಭುತ್ವ” ಆತ್ಮಾವಲೇೂಕನ ದಿನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.