5 ರಾಷ್ಟ್ರಗಳಿಗೆ ಮಾತ್ರ ಏಕೆ ವಿಟೊ?
Team Udayavani, Apr 28, 2023, 8:36 AM IST
ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ 193 ಸದಸ್ಯ ರಾಷ್ಟ್ರಗಳಿವೆ. ಆದರೆ ವಿಟೊ ಅಧಿಕಾರವಿರುವುದು ಕೇವಲ 5 ರಾಷ್ಟ್ರಗಳಿಗೆ. ಇದು ಪ್ರತಿಯೊಬ್ಬರಿಗೂ ಸಮಾನತೆ ನೀಡಬೇಕೆಂಬ ಪೂರ್ಣ ಆಶಯಕ್ಕೆ ವಿರುದ್ಧವಾಗಿದೆ ಎಂದು ಭಾರತ ಹರಿಹಾಯ್ದಿದೆ. ಅಲ್ಲದೇ ವಿಟೊ ಅಧಿಕಾರ ಹೊಂದಿರುವ ರಾಷ್ಟ್ರಗಳು, ತಮ್ಮ ಹಕ್ಕನ್ನು ರಾಜಕೀಯ ಉದ್ದೇಶಗಳಿಂದ ಚಲಾವಣೆ ಮಾಡುತ್ತಿವೆಯೇ ಹೊರತು, ನೈತಿಕ ಹೊಣೆಗಾರಿಕೆ ತೋರಿಸುತ್ತಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಮಿಷನ್‌ನ ಕೌನ್ಸೆಲರ್ ಪ್ರತೀಕ್ ಮಾಥುರ್ ಹೇಳಿದ್ದಾರೆ.
ಕಳೆದ 75 ವರ್ಷಗಳಲ್ಲಿ ವಿಟೊ ಹೊಂದಿರುವ ದೇಶಗಳು ತಮ್ಮ ಉದ್ದೇಶಿತ ರಾಜಕೀಯ ಹಿತಾಸಕ್ತಿ ಸಾಧಿಸುವುದಕ್ಕೆ ಮಾತ್ರ ವಿಟೊವನ್ನು ಬಳಸುತ್ತಿವೆ. ಎಲ್ಲಿಯವರೆಗೆ ಈ ವ್ಯವಸ್ಥೆಯಿರುತ್ತದೋ, ಅಲ್ಲಿಯವರೆಗೆ ಈ ರಾಷ್ಟ್ರಗಳು ಹೀಗೆಯೇ ಮಾಡುತ್ತಿರುತ್ತವೆ ಎಂದು ಮಾಥುರ್ ಕಿಡಿಕಾರಿದ್ದಾರೆ. 15 ದೇಶಗಳ ಭದ್ರತಾ ಸಮಿತಿಯಲ್ಲಿ ಅಮೆರಿಕ, ರಷ್ಯಾ, ಚೀನ, ಫ್ರಾನ್ಸ್, ಬ್ರಿಟನ್‌ಗಳಿಗೆ ಮಾತ್ರ ವಿಟೊ ಅವಕಾಶವಿದೆ. ಉಳಿದ 10 ರಾಷ್ಟ್ರಗಳನ್ನು ಕೇವಲ 2 ವರ್ಷಗಳ ಅವಧಿಗೆ ಮಾತ್ರ ಆರಿಸಲಾಗುತ್ತದೆ. ಈ ರಾಷ್ಟ್ರಗಳಿಗೆ ವಿಟೊ ಅಧಿಕಾರವಿಲ್ಲ.
ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ
ಪ್ರತೀಕ್ ಮಾಥುರ್ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಮಾಡಿದ ನಾಟಕವನ್ನು ಕಟುವಾಗಿ ಟೀಕಿಸಿದ್ದಾರೆ. ಯಾರೆಷ್ಟೇ ಲಾಬಿ, ಅಪಪ್ರಚಾರ, ಸುಳ್ಳು ಮಾಹಿತಿ ನೀಡಿದರೂ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಜಮ್ಮು-ಕಾಶ್ಮೀರ ಪಾಕಿಸ್ಥಾನಕ್ಕೆ ಸೇರಬೇಕೆಂದು ಆ ದೇಶದ ವಿಶ್ವಸಂಸ್ಥೆ ಪ್ರತಿನಿಧಿ ಮುನೀರ್ ಅಕ್ರಮ್ ಹೇಳಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯೆ ನೀಡಲಾಗಿದೆ. ವಿಶ್ವಸಂಸ್ಥೆಯಲ್ಲಿ ಯಾವುದೇ ವಿಷಯ ಚರ್ಚೆಯಲ್ಲಿರಲಿ, ಪಾಕಿಸ್ಥಾನ ಜಮ್ಮು-ಕಾಶ್ಮೀರದ ವಿಚಾರವನ್ನು ಸತತವಾಗಿ ಪ್ರಸ್ತಾವ ಮಾಡುತ್ತದೆ. ಈ ನಾಟಕವನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.