Wimbledon-2023: 16 ವರ್ಷದ ಮಿರ್ರಾ ಆ್ಯಂಡ್ರೀವಾ ಗೆಲುವಿನ ಓಟ
Team Udayavani, Jul 10, 2023, 5:37 AM IST
ಲಂಡನ್: ಇದೇ ಮೊದಲ ಸಲ ಸೀನಿಯರ್ ಗ್ರಾಸ್‌ಕೋರ್ಟ್ ಗ್ರ್ಯಾನ್‌ಸ್ಲಾಮ್ ಪಂದ್ಯಾ ವಳಿಯಲ್ಲಿ ಆಡುತ್ತಿರುವ ರಷ್ಯಾದ ಮಿರ್ರಾ ಆ್ಯಂಡ್ರೀವಾ ಗೆಲುವಿನ ಓಟ ಮುಂದುವರಿಸಿ ವಿಂಬಲ್ಡನ್ ಟೂರ್ನಿಯ 4ನೇ ಸುತ್ತು ತಲುಪಿ ದ್ದಾರೆ. ರವಿವಾರದ ವನಿತಾ ಸಿಂಗಲ್ಸ್ ನಲ್ಲಿ ತಮ್ಮದೇ ನಾಡಿನ ಅನಸ್ತಾಸಿಯಾ ಪೊಟಪೋವಾ ಆವರನ್ನು 6-2, 7-5ರಿಂದ ಪರಾಭವಗೊಳಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 102ನೇ ಸ್ಥಾನದಲ್ಲಿರುವ ಆ್ಯಂಡ್ರೀವಾ ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆ ದಿದ್ದರು. ಕಳೆದ ಫ್ರೆಂಚ್ ಓಪನ್‌ನಲ್ಲಿ ಗ್ರ್ಯಾನ್‌ಸ್ಲಾಮ್ ಪದಾರ್ಪಣೆ ಮಾಡಿದ್ದ ಅವರು, ಅಲ್ಲಿ 3ನೇ ಸುತ್ತಿನ ತನಕ ಮುನ್ನಡೆದಿದ್ದರು. ಆಗಲೇ ಎಲ್ಲ ರನ್ನು ಮೋಡಿಗೈದಿದ್ದರು. ವಿಂಬ ಲ್ಡನ್‌ನಲ್ಲೀಗ ಒಂದು ಮೆಟ್ಟಿಲು ಮೇಲೇ
ರಿದ್ದಾರೆ. ಮುಂದಿನ ಎದುರಾಳಿ ಅಮೆರಿಕಸ ಮ್ಯಾಡಿಸನ್ ಕೀಸ್.
“ಆಲ್ ಜೆಕ್’ ಮೇಲಾಟವೊಂದ ರಲ್ಲಿ ಮಾರ್ಕೆಟಾ ವೋಂಡ್ರೂಸೋವಾ 2-6, 6-4, 6-3ರಿಂದ ಮಾರೀ ಬೌಜ್ಕೋವಾ ಪರಾಭವಗೊಳಿಸಿ ಕ್ವಾರ್ಟರ್ ಫೈನಲ್ ತಲುಪಿದರು.
ಕ್ವಾರ್ಟರ್ ಫೈನಲ್ ತಲುಪಿದ ಮತ್ತಿಬ್ಬರೆಂದರೆ ಅಮೆರಿಕದ ಜೆಸ್ಸಿಕಾ ಪೆಗುಲಾ ಮತ್ತು ಕಜಕಸ್ಥಾನದ ಎಲೆನಾ ರಿಬಾಕಿನಾ. ಪೆಗುಲಾ ಅವರು 6-1, 6-3ರಿಂದ ಉಕ್ರೇನಿನ ಲೆಸಿಯಾ ಸುರೆಂಕೊ ಅವರಿಗೆ ಸೋಲುಣಿಸಿದರು. ರಿಬಾಕಿನಾ 6-1, 6-1 ಅಂತರದಿಂದ ಆತಿಥೇಯ ದೇಶದ ಕ್ಯಾಥಿ ಬೌಲ್ಟರ್ ಅವರಿಗೆ ಆಘಾತ ನೀಡಿದರು.
ಡಿಮಿಟ್ರೋವ್ ಮುನ್ನಡೆ
ಪುರುಷರ ಸಿಂಗಲ್ಸ್ ನಲ್ಲಿ ಬಲ್ಗೇರಿಯಾದ ಗ್ರಿಗರ್ ಡಿಮಿ ಟ್ರೋವ್ ಅಮೆರಿಕದ 10ನೇ ಶ್ರೇಯಾಂಕದ ಫ್ರಾನ್ಸೆಸ್ ಥಿಯಾಫೊ ಅವರನ್ನು 6-2, 6-3, 6-2ರಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದರು. ಇಲ್ಲಿ ಅವರು ಡೆನ್ಮಾರ್ಕ್‌ನ
ಹೋಲ್ಜರ್ ರುನೆ ವಿರುದ್ಧ ಆಡಲಿ ದ್ದಾರೆ. ರುನೆ ಸ್ಪೇನ್‌ನ ಅಲೆಕ್ಸಾಂಡ್ರೊ ಡೇವಿಡೋವಿಕ್ ಫೋಕಿನ ಅವರನ್ನು 5 ಸೆಟ್‌ಗಳ ಕಠಿನ ಹೋರಾಟದಲ್ಲಿ 6-3, 4-6, 3-6, 6-4, 7-6 (10-8)ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಡಿಮಿಟ್ರೋವ್ ಕಳೆದ ವಾರವಷ್ಟೇ ಸ್ಟಟ್‌ಗಾರ್ಟ್ ಓಪನ್‌ನಲ್ಲಿ ಮೊದಲ ಗ್ರಾಸ್‌ಕೋರ್ಟ್ ಪ್ರಶಸ್ತಿ ಗೆದ್ದು ವಿಂಬಲ್ಡನ್‌ಗೆ ಆಗಮಿಸಿದ್ದರು.
ದ್ವಿತೀಯ ಸುತ್ತಿಗೆ ಮಾನಸ್ ಧಾಮನೆ
ಭಾರತದ 15 ವರ್ಷದ ಮಾನಸ್ ಧಾಮ್ನೆ ವಿಂಬಲ್ಡನ್ ಬಾಲಕರ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ಸುತ್ತಿಗೆ ಏರಿದ್ದಾರೆ. ಅವರು ಆಸ್ಟ್ರೇಲಿಯದ ಹೇಡನ್ ಜೋನ್ಸ್ ವಿರುದ್ಧ 6-2, 6-4 ಅಂತರದ ಗೆಲುವು ಸಾಧಿಸಿದರು.
ಇಟಲಿಯ ಪಿಯಾಟ್ಟಿ ಟೆನಿಸ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಧಾಮ್ನೆ ಅರ್ಹತಾ ಸುತ್ತಿನಲ್ಲಿ ಸರ್ಬಿಯಾದ ವುಕ್ ರಜೆನೋವಿಕ್ ಮತ್ತು ಟರ್ಕಿಯ ಅಟಾಕನ್ ಕರಹಾನ್ ಅವರಿಗೆ ಸೋಲುಣಿಸಿದ್ದರು.
ಇದು ಧಾಮ್ನೆ ಆಡುತ್ತಿರುವ 2ನೇ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ. ಆಸ್ಟ್ರೇಲಿಯನ್ ಓಪನ್‌ನಲ್ಲಿ ದ್ವಿತೀಯ ಸುತ್ತಿನಲ್ಲಿ ಗಾಯಾಳಾಗಿ ನಿವೃತ್ತರಾಗಿದ್ದರು.
“ಡಬಲ್’ ಸೋಲು
ಪುರುಷರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಡಬಲ್ ಸೋಲು ಎದುರಾಗಿದೆ. ಯುಕಿ ಭಾಂಬ್ರಿ-ಸಾಕೇತ್ ಮೈನೆನಿ ಮೊದಲ ಸುತ್ತಿನಲ್ಲೇ ಎಡವಿದರು. ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ-ಗ್ಯಾಬ್ರಿಯೇಲಾ ಡಾಬ್ರೋವ್‌ಸ್ಕಿ ದ್ವಿತೀಯ ಸುತ್ತಿನಲ್ಲಿ ಮುಗ್ಗರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.