ಕಪಿಲ್‌ದೇವ್, ಸಚಿನ್ ತೆಂಡುಲ್ಕರ್, ಕೊಹ್ಲಿಗೆ “ವಿಸ್ಡನ್ ದಶಕದ ಗೌರವ’
Team Udayavani, Apr 15, 2021, 10:59 PM IST
ಲಂಡನ್: ಭಾರತಕ್ಕೆ ಪ್ರಥಮ ಏಕದಿನ ವಿಶ್ವಕಪ್ ತಂದಿತ್ತ ನಾಯಕ ಕಪಿಲ್‌ದೇವ್, ಲೆಜೆಂಡ್ರಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಮತ್ತು ಟೀಮ್ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಅವರು ಲಂಡನ್ನಿನ ಪ್ರತಿಷ್ಠಿತ “ವಿಸ್ಡನ್’ ಪತ್ರಿಕೆಯ “ದಶಕದ ಏಕದಿನ ಕ್ರಿಕೆಟಿಗ’ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸತತ ಎರಡನೇ ಸಲ “ವರ್ಷದ ಕ್ರಿಕೆಟಿಗ’ (ಲೀಡಿಂಗ್ ಕ್ರಿಕೆಟರ್) ಗೌರವಕ್ಕೆ ಪಾತ್ರರಾಗಿದ್ದಾರೆ.
ಏಕದಿನ ಕ್ರಿಕೆಟಿನ 50ನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ವಿಸ್ಡನ್, 1971ರಿಂದ ಮೊದಲ್ಗೊಂಡು 2021ರ ವರೆಗಿನ 5 ದಶಕಗಳಿಗೆ ಒಬ್ಬರಂತೆ ಕ್ರಿಕೆಟ್ ಸಾಧಕರನ್ನು ಗುರುತಿಸಿ ಗೌರವಿಸಿದೆ. ಇದರಂತೆ 1970ರ ದಶಕದಲ್ಲಿ ವಿವಿಯನ್ ರಿಚರ್ಡ್ಸ್, 1980ರ ದಶಕದಲ್ಲಿ ಕಪಿಲ್‌ದೇವ್, 1990ರ ದಶಕದಲ್ಲಿ ಸಚಿನ್ ತೆಂಡುಲ್ಕರ್, 2000ದ ದಶಕದಲ್ಲಿ ಮುತ್ತಯ್ಯ ಮುರಳೀಧರನ್ ಹಾಗೂ 2010ರ ದಶಕದ ಗೌರವ ವಿರಾಟ್ ಕೊಹ್ಲಿ ಅವರಿಗೆ ಒಲಿದಿದೆ.
ಇದನ್ನೂ ಓದಿ :ಭಾರತ ಮೂಲದ ಸಂಸದನಿಂದ ಅಮೆರಿಕ ಸಂಸತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಠರಾವು
2021ರ ವಿಸ್ಡನ್ ಶ್ರೇಷ್ಠರು
ಇದೇ ವೇಳೆ 2021ನೇ ಸಾಲಿನ ವಿಸ್ಡನ್ ಗೌರವಕ್ಕೆ ಪಾತ್ರರಾದ ಐವರು ಕ್ರಿಕೆಟಿಗರ ಹೆಸರನ್ನೂ ಪ್ರಕಟಿಸಲಾಗಿದೆ. ಇವರೆಂದರೆ ಡಾಮ್ ಸಿಬ್ಲಿ, ಜಾಕ್ ಕ್ರಾಲಿ, ಜಾಸನ್ ಹೋಲ್ಡರ್, ಮೊಹಮ್ಮದ್ ರಿಜ್ವಾನ್ ಮತ್ತು ಡ್ಯಾರನ್ ಸ್ಟೀವನ್ಸ್.
ಕೈರನ್ ಪೊಲಾರ್ಡ್ ಟಿ20 ಲೀಡಿಂಗ್ ಕ್ರಿಕೆಟರ್ ಹಾಗೂ ಆಸ್ಟ್ರೇಲಿಯದ ಬೆತ್ ಮೂನಿ ಲೀಡಿಂಗ್ ವುಮೆನ್ಸ್ ಕ್ರಿಕೆಟರ್ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.