ಅತಿಯಾಗಿ ಮೊಬೈಲ್ ಬಳಸದಂತೆ ಪತಿ,ಮನೆಯವರು ಬುದ್ದಿವಾದ ಹೇಳಿದ್ದಕ್ಕೆ ಮಹಿಳೆ ಆತ್ಮಹತ್ಯೆ
Team Udayavani, Apr 14, 2023, 5:11 AM IST
ಪುಂಜಾಲಕಟ್ಟೆ : ಮೊಬೈಲ್ ಅತಿ ಬಳಕೆಯ ಬಗ್ಗೆ ಪತ್ನಿಗೆ ಪತಿ ಹಾಗೂ ಆಕೆಯ ಮನೆಯವರು ಬುದ್ದಿವಾದ ಹೇಳಿದ್ದಕ್ಕೆ ಖನ್ನತೆಗೊಳಗಾಗಿ ಮಹಿಳೆಯೋರ್ವರು ಆತ್ಮಹತ್ಯೆಗೈದ ಘಟನೆ ಎ.12ರಂದು ಸಂಜೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ನಯನಾಡು, ಬೆಂಚಿನಡ್ಕ ಎಂಬಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ ಹರಿಪ್ರಸಾದ್ ಅವರ ಪತ್ನಿ ಜಯಲಕ್ಷ್ಮಿ ದೇವಾಡಿಗ(35)ಅವರು ಆತ್ಮಹತ್ಯೆ ಗೈದವರಾಗಿದ್ದಾರೆ.
ಹರಿಪ್ರಸಾದ್ ಅವರು ಜಯಲಕ್ಷ್ಮಿ ಅವರನ್ನು 15 ವರ್ಷಗಳ ಹಿಂದೆ ವಿವಾಹವಾಗಿದ್ದು, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಜಯಲಕ್ಷ್ಮಿ ಅವರು ಮೊಬೈಲ್‌ನಲ್ಲಿ ಜಾಸ್ತಿ ಹೊತ್ತು ಯಾರಲ್ಲಿಯೋ ಮಾತನಾಡುವುದು, ಮೆಸೇಜ್ ಮಾಡುವುದನ್ನು ಗಮನಿಸಿ ಹರಿಪ್ರಸಾದ್ ಅವರು ಬುದ್ದಿವಾದ ಹೇಳಿದ್ದು ಆ ಬಳಿಕ ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿ ತನ್ನ ತಪ್ಪಿನ ಅರಿವಾಗಿ ಬಳಿಕ ಖನ್ನತೆಯಲ್ಲಿರುವುದನ್ನು ಗಮನಿಸಿ ಹರಿಪ್ರಸಾದ್ ಸಮಾಧಾನ ಮಾಡಿ ಬಳಿಕ ಜಯಲಕ್ಷ್ಮಿ ಅವರ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ಅವರು ಕೂಡಾ ಆಕೆಗೆ ಸಮಾದಾನ ಹೇಳಿದ್ದರು. ಆದರೆ ಬುಧವಾರ ಸಂಜೆ ತನ್ನ ಗಂಡ ಪೇಟೆಗೆ ಹೋಗಿರುವುದನ್ನು ಗಮನಿಸಿ ತನ್ನ ಮನೆಯ ಕೊಟ್ಟಿಗೆಯಲ್ಲಿರುವ ಕೊಠಡಿಯೊಳಗೆ ಕೊಠಡಿಯ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ದಯಾನಂದ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.