ಪತಿಯ ಮೊಬೈಲ್ ನಲ್ಲಿ ಪತ್ನಿಯ ಬೇಹುಗಾರಿಕೆ: ಪತ್ನಿಗೆ ಒಂದು ಲಕ್ಷ ರೂ. ದಂಡ ವಿಧಿಸಿದ ಕೋರ್ಟ್!
ಶುಲ್ಕ ಮತ್ತು ಖರ್ಚು ಸೇರಿ ಒಂದು ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ಪತ್ನಿಗೆ ಕೋರ್ಟ್ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
Team Udayavani, May 28, 2021, 1:02 PM IST
ದುಬೈ: ಖಾಸಗೀತನ ಎಂಬುದು ಈಗ ಪತಿ, ಪತ್ನಿಯ ನಡುವೆಯೂ ಬಂದು ಬಿಟ್ಟಿದೆ. ಹೌದು ಪತ್ನಿ ಫೋನ್ ಶೋಧಿಸುವುದು, ಕಾಲ್ ರೆಕಾರ್ಡ್ ಪರಿಶೀಲಿಸುವುದು, ಪತಿಯ ಫೋನ್ ಪರಿಶೀಲಿಸುವ ಪತ್ನಿ ಹೀಗೆ ಹಲವಾರು ವಿಧದ ಪ್ರಸಂಗ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಪತಿಯ ಫೋನ್ ನಲ್ಲಿ ಗೂಢಚರ್ಯೆ ನಡೆಸಿ, ಖಾಸಗಿತನ ಉಲ್ಲಂಘಿಸಿದ ಪತ್ನಿಗೆ ದುಬೈನ ಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಎಲ್ಲರ ಕುತೂಹಲ ಡೊಮಿನಿಕಾ ದೇಶದ ಬಗ್ಗೆ…ಭಾರತಕ್ಕೆ ಚೋಕ್ಸಿಯನ್ನು ಗಡಿಪಾರು ಮಾಡಲು ಸಾಧ್ಯವೇ?
ಏನಿದು ಪ್ರಕರಣ:
ಪತಿಗೆ ಕಳಂಕ ತರುವ ನಿಟ್ಟಿನಲ್ಲಿ ಪತ್ನಿ ಆತನ ಮೊಬೈಲ್ ಫೋನ್ ನಿಂದ ಫೋಟೋ ಮತ್ತು ರೆಕಾರ್ಡಿಂಗ್ ಗಳನ್ನು ಆತನ ಕುಟುಂಬಕ್ಕೆ ಕಳುಹಿಸಿದ್ದಳು. ಇದರಿಂದ ಪತಿಯ ಖಾಸಗೀತನ ಮತ್ತು ಗೌಪ್ಯತೆಗೆ ಧಕ್ಕೆ ತಂದಿರುವುದಾಗಿ ಆರೋಪಿಸಿದ ದುಬೈನ ರಾಸ್ ಅಲ್ ಖೈಮಾದಲ್ಲಿರುವ ಸಿವಿಲ್ ಕೋರ್ಟ್ ಆಕೆಗೆ 5,400 ದಿರಾಮ್ (ಭಾರತದ ಒಂದು ಲಕ್ಷ ರೂಪಾಯಿ) ದಂಡ ಪಾವತಿಸುವಂತೆ ಆದೇಶ ನೀಡಿದೆ.
ತನ್ನ ಅನುಮತಿ ಇಲ್ಲದೇ ವರ್ಚಸ್ಸಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ಪತಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿ ಪತ್ನಿ ವಿರುದ್ಧ ಪರಿಹಾರಕ್ಕಾಗಿ ದಾವೆ ಹೂಡಿರುವುದಾಗಿ ವರದಿ ತಿಳಿಸಿದೆ. ಈ ಪ್ರಕರಣದಿಂದಾಗಿ ಕೆಲಸಕ್ಕೆ ಗೈರುಹಾಜರಾಗಿದ್ದಲ್ಲದೇ, ಸಂಬಳವೂ ಕೈಗೆ ಸಿಗದಂತಾಗಿದೆ. ಅಷ್ಟೇ ಅಲ್ಲ ಇದರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸುವಂತಾಗಿದೆ ಎಂದು ಪತಿ ಕೋರ್ಟ್ ನಲ್ಲಿ ವಾದಿಸಿದ್ದರು.
ಪತ್ನಿಯ ವಕೀಲರ ಹಾಗೂ ಪತಿಯ ವಕೀಲರ ವಾದವನ್ನು ಆಲಿಸಿದ ಕೋರ್ಟ್, ಪ್ರಕರಣದಿಂದಾಗಿ ಸಂಬಳ ಕಳೆದುಕೊಳ್ಳುವಂತಾಗಿದೆ ಎಂಬ ವಾದವನ್ನು ತಿರಸ್ಕರಿಸಿದೆ. ಆದರೆ ಫೋನ್ ಗೂಢಚರ್ಯೆ ಮಾಡಿದ ಆರೋಪ ಸಾಬೀತಾಗಿದ್ದು, ಕಾನೂನು ಶುಲ್ಕ ಮತ್ತು ಖರ್ಚು ಸೇರಿ ಒಂದು ಲಕ್ಷ ರೂಪಾಯಿ ದಂಡವನ್ನು ಪಾವತಿಸುವಂತೆ ಪತ್ನಿಗೆ ಕೋರ್ಟ್ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.