King Cobra: ನಿದ್ರೆಯಲ್ಲಿದ್ದ ಮಹಿಳೆಯ ಕಾಲಿಗೆ ಸುತ್ತಿಕೊಂಡ ಕಾಳಿಂಗ ಸರ್ಪ… ಮುಂದೇನಾಯ್ತು?

ಕಾಲಿಗೆ ಏನೋ ಸುತ್ತಿಹಾಕಿಕೊಂಡಂತಿದೆ ಎಂದು ಅನುಭವಕ್ಕೆ ಬಂದಾಗ ದಿಢೀರನೆ ಎಚ್ಚರಗೊಂಡಿದ್ದರು

Team Udayavani, Aug 29, 2023, 1:38 PM IST

King Cobra: ನಿದ್ರೆಯಲ್ಲಿದ್ದ ಮಹಿಳೆಯ ಕಾಲಿಗೆ ಸುತ್ತಿಕೊಂಡ ಕಾಳಿಂಗ ಸರ್ಪ… ಮುಂದೇನಾಯ್ತು?

ಲಕ್ನೋ: ಹಾವುಗಳೆಂದರೆ ಯಾರಿಗೆ ತಾನೇ ಭಯ ತರಿಸೋದಿಲ್ಲ…ಅದರಲ್ಲೂ ವಿಷಪೂರಿತ ಹಾವಾದರೆ ಭಯ ಇನ್ನಷ್ಟು ಜಾಸ್ತಿ…ಆದರೆ ಉತ್ತರಪ್ರದೇಶದ ಮಹೋಬಾದಲ್ಲಿ ಮಹಿಳೆಯೊಬ್ಬರು ದಿಢೀರನೆ ಎಚ್ಚರವಾಗಿ ನೋಡಿದಾಗ ಕಾಲಿಗೆ ಕಾಳಿಂಗ ಸರ್ಪ ಸುತ್ತಿಕೊಂಡಿದ್ದನ್ನು ಕಂಡು ದಂಗು ಬಡಿದು ಹೋಗಿದ್ದರು. ಕೊನೆಗೆ ಆಕೆ ಗಟ್ಟಿ ಧೈರ್ಯ ಮಾಡಿ ಸುಮಾರು ಮೂರು ಗಂಟೆಗಳ ಕಾಲ ಅಲುಗಾಡದೇ ದೇವರ ಪ್ರಾರ್ಥನೆಯಲ್ಲಿ ತೊಡಗಿದ್ದು, ಅಂತೂ ಹಾವು ಆಕೆಗೆ ಯಾವ ತೊಂದರೆಯನ್ನು ಮಾಡದೆ ಹೊರಟು ಹೋದ ಘಟನೆ ನಡೆದಿದೆ.

ಇದನ್ನೂ ಓದಿ:Aamir Khan: 2 ವರ್ಷದ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಆಮಿರ್‌ ಖಾನ್‌; ಯಾವ ಸಿನಿಮಾ?

ಉತ್ತರಪ್ರದೇಶದ ದಹ್ರಾ ಗ್ರಾಮದ ತನ್ನ ತಾಯಿಯ ಮನೆಯಲ್ಲಿದ್ದ ಮಿಥ್ಲೇಶ್‌ ಯಾದವ್‌ ಎಂಬಾಕೆಗೆ ತನ್ನ ಒಂದು ಕಾಲಿಗೆ ಏನೋ ಸುತ್ತಿಹಾಕಿಕೊಂಡಂತಿದೆ ಎಂದು ಅನುಭವಕ್ಕೆ ಬಂದಾಗ ದಿಢೀರನೆ ಎಚ್ಚರಗೊಂಡಿದ್ದರು. ಆಗ ತನ್ನ ಒಂದು ಕಾಲಿಗೆ ಕಾಳಿಂಗ ಸರ್ಪ ಸುತ್ತಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದ ಆಕೆ ತನ್ನ ಕೈಗಳನ್ನು ಜೋಡಿಸಿ ತನಗೆ ಏನು ಹಾನಿ ಮಾಡದೇ ಹೊರಟು ಹೋಗುವಂತೆ ಪ್ರಾರ್ಥನೆಯಲ್ಲಿ ತೊಡಗಿಕೊಂಡಿದ್ದಳು ಎಂದು ವರದಿ ತಿಳಿಸಿದೆ.

“ತನ್ನ ಇಬ್ಬರು ಮಕ್ಕಳ ಜೊತೆ ನಿದ್ರಿಸುತ್ತಿದ್ದೆ. ಬೆಳಗ್ಗೆ ನನಗೆ ದಿಢೀರನೆ ಎಚ್ಚರವಾದಾಗ ನನ್ನ ಒಂದು ಕಾಲಿಗೆ ಕಾಳಿಂಗ ಸರ್ಪ ಸುತ್ತಿ ಹಾಕಿಕೊಂಡಿದ್ದನ್ನು ನೋಡಿದೆ. ಆಗ ನಾನು ಕೆಲವು ಗಂಟೆಗಳ ಕಾಲ ಮಕ್ಕಳನ್ನು ದೂರ ಕರೆದೊಯ್ಯುವಂತೆ ತಾಯಿಗೆ ಹೇಳಿರುವುದಾಗಿ” ಮಿಥ್ಲೇಶ್‌ ಇಂಡಿಯಾ ಟುಡೇ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಮೂರು ಗಂಟೆಗಳ ಕಾಲ ಅಲುಗಾಡದೇ ಕುಳಿತಿದ್ದ ವೇಳೆ ನಿಮ್ಮ ಮನಸ್ಸಿನ ಸ್ಥಿತಿ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಆಕೆ, ನನಗೆ ಬೇರೆ ದಾರಿ ಇಲ್ಲವಾಗಿತ್ತು..ನಾನು ಭಗವಾನ್‌ ಶಿವನನ್ನು ಪ್ರಾರ್ಥಿಸುತ್ತಿದ್ದೆ. ಹಾವು ಯಾವುದೇ ತೊಂದರೆ ಮಾಡದೇ ನನ್ನ ಕಾಲಿನ ಹಿಡಿತ ಬಿಟ್ಟು ಹೋಗಲಿ ಎಂದು ಬೇಡಿಕೊಳ್ಳತೊಡಗಿದ್ದೆ. ಒಂದು ವೇಳೆ ನಾನು ಹಾವಿನ ಕಡಿತಕ್ಕೊಳಗಾಗಿ ಸಾವನ್ನಪ್ಪಿದರೆ, ನನ್ನ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಭಯ ಕಾಡಲು ಶುರುವಾಗಿತ್ತು. ನನ್ನ ಜೊತೆ ಕುಟುಂಬದ ಸದಸ್ಯರು ಕೂಡಾ ದೇವರನ್ನು ಪ್ರಾರ್ಥಿಸತೊಡಗಿದ್ದರು. ನೆರೆ ಹೊರೆಯವರು ಕೂಡಾ ಬಂದು ಮನೆಯೊಳಗೆ ಪೂಜೆಯನ್ನು ಮಾಡಿ, ಪ್ರಾರ್ಥನೆ ಸಲ್ಲಿಸಿದ್ದರು ಎಂದು ಮಿಥ್ಲೇಶ್‌ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಗಾಬರಿಯ ನಡುವೆ ಕುಟುಂಬ ಸದಸ್ಯರು ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯ ಉರಗ ತಜ್ಞರ ನೆರವನ್ನು ಪಡೆದು, ಕಾಳಿಂಗ ಸರ್ಪ ಆಕೆಯ ಕಾಲಿನ ಹಿಡಿತ ಬಿಟ್ಟು ಮನೆಯೊಳಗೆ ಸೇರಿಕೊಂಡ ಕೂಡಲೇ ಅದನ್ನು ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಟ್ಟಿರುವುದಾಗಿ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

4

BBಕ11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು

Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು

Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ

Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ

Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್‌ ಪೇದೆ.!

Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್‌ ಪೇದೆ.!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

BBಕ11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.