ಇನ್ನು ನಡೆಯಲಿದೆ ಮಹಿಳಾ ವಾರ್ಡ್ ಸಭೆ! ಇನ್ನಷ್ಟು ಸ್ತ್ರೀಸ್ನೇಹಿಯಾಗುವತ್ತ ಗ್ರಾ.ಪಂ.
Team Udayavani, Apr 17, 2021, 7:05 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಗ್ರಾಮ ಸಭೆಯ ಪೂರ್ವದಲ್ಲಿ ನಡೆಯುವ ವಾರ್ಡ್‌ಸಭೆ ಮಾದರಿಯಲ್ಲೇ ಇನ್ನು ಮಹಿಳಾ ವಾರ್ಡ್ ಸಭೆಯೂ ನಡೆಯಲಿದೆ.
ಸ್ತ್ರೀ ಸಶಕ್ತೀಕರಣ ಮತ್ತು ಸ್ಥಳೀಯ ಆಡಳಿತದಲ್ಲಿ ಅವರು ಸಕ್ರಿಯರಾಗುವಂತೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಿಳಾ ಗ್ರಾಮಸಭೆಗೆ ಹುರುಪು ತುಂಬುವ ಉದ್ದೇಶವೂ ಇದೆ.
ಅಂಗನವಾಡಿ ಕಾರ್ಯಕರ್ತೆಯರು ಈ ಸಭೆ ನಿರ್ವಹಿಸಲಿದ್ದಾರೆ. ಆಯಾ ವಾರ್ಡ್‌ಗೆ ಸಂಬಂಧ ಪಡುವ ಗ್ರಾ.ಪಂ.ಚುನಾಯಿತ ಸದಸ್ಯರ ಉಸ್ತುವಾರಿ ಇರಲಿದೆ.
ಸಭೆಯನ್ನು ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳ, ದುಡಿಯುವ ಮಹಿಳೆಯರಿಗೆ ಅನುಕೂಲಕರ ದಿನ, ಸಮಯದಲ್ಲಿ ನಡೆಸಬಹುದು. ಅನುಸೂಚಿತ ಜಾತಿ/ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾಕರು, ಅಂಗವಿಕಲ ಸ್ತ್ರೀಯರಿಗೆ ಭಾಗವಹಿಸಲು ಮತ್ತು ಚರ್ಚಿಸಲು ಸಮಾನ ಅವಕಾಶ ನೀಡಲಾಗುತ್ತದೆ.
ಸಭೆಯಲ್ಲಿ ಏನಿರುತ್ತದೆ?
– ಸ್ತ್ರೀಯರ ಹಕ್ಕುಗಳು, ಸರಕಾರದ ವಿವಿಧ ಯೋಜನೆ, ಸೌಲಭ್ಯಗಳ ಮಾಹಿತಿ.
– ಅವರ ವೈಯಕ್ತಿಕ, ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ಇದೆ.
– ಮಕ್ಕಳ ಶಿಕ್ಷಣ, ಶಾಲೆ, ಆರೋಗ್ಯ ಸೇವೆ, ರಕ್ಷಣೆ, ಆಹಾರ – ಪೌಷ್ಟಿಕತೆ, ನೀರು, ನೈರ್ಮಲ್ಯ, ಶುಚಿತ್ವ, ರಸ್ತೆ, ಅಂಗನವಾಡಿ, ವಸತಿ ಸೌಲಭ್ಯ, ಮಾನವ ಸಂಪದ ಇತ್ಯಾದಿ ಬೇಡಿಕೆ, ಸಮಸ್ಯೆ ಗಳ ಚರ್ಚೆಗೆ ಅವಕಾಶ.
– ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ಅಪೌಷ್ಟಿಕತೆ, ಬಾಲ್ಯ ವಿವಾಹ ಚರ್ಚೆ.
– ಮಹಿಳಾ ಗ್ರಾಮ ಸಭೆಯಲ್ಲಿ ಆಯಾ ವಾರ್ಡ್ ಪ್ರತಿನಿಧಿಸುವವರು ಯಾರೆಂಬುದು ವಾರ್ಡ್ ಸಭೆಯಲ್ಲಿ ನಿರ್ಧಾರ.
– ವಾರ್ಡ್ ಸಭೆಯ ಅಂಶಗಳು ಮಹಿಳಾ ಗ್ರಾಮಸಭೆಯಲ್ಲಿ ಮಂಡನೆ.
ಸಲಹಾ ಪೆಟ್ಟಿಗೆ
ಅಂಗನವಾಡಿ ಮತ್ತಿತರ ಸುರಕ್ಷಿತ ಸ್ಥಳಗಳಲ್ಲಿ ಸಲಹಾ ಪೆಟ್ಟಿಗೆ ಇಡಲಾಗುತ್ತದೆ. ಇಲ್ಲಿ ಬಂದ ಸಲಹೆಗಳನ್ನು ಕ್ರೋಡೀಕರಿಸಿ ಮಹಿಳಾ ಗ್ರಾಮಸಭೆಯಲ್ಲಿ ಮಂಡಿಸಲಾಗುತ್ತದೆ.
ಗ್ರಾ.ಪಂ. ಡೆಸ್ಕ್
ಮಹಿಳಾ ವಾರ್ಡ್ ಸಭೆ-ಗ್ರಾಮ ಸಭೆ ವೇಳೆ ವಿವಿಧ ಯೋಜನೆಗಳ ಮಾಹಿತಿ ಪಡೆಯಲು “ಗ್ರಾ.ಪಂ. ಡೆಸ್ಕ್’ ವ್ಯವಸ್ಥೆ ರೂಪಿಸಲಾಗುತ್ತಿದೆ. ಇದರ ಜವಾಬ್ದಾರಿ ಆಶಾ ಕಾರ್ಯಕರ್ತೆಯರದು.
ಗ್ರಾ.ಪಂ.ಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮಹಿಳಾ ವಾರ್ಡ್ ಸಭೆ ನಡೆಯಲಿದೆ. ಸಿದ್ಧಗೊಳ್ಳುವಂತೆ ಗ್ರಾ.ಪಂ.ಗಳಿಗೆ ತಿಳಿಸಿದೆ.
– ಡಾ| ಕುಮಾರ್, ಡಾ| ನವೀನ್ ಭಟ್, ದ.ಕ. ಮತ್ತು ಉಡುಪಿ ಜಿ.ಪಂ. ಸಿಇಒಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.