ಬೆಂಕಿ ಹಚ್ಚಿ ಕಾರ್ಮಿಕನ ಕೊಲೆ: ಉಪ್ಪಿನಂಗಡಿಯಲ್ಲಿದ್ದ ಕಾರ್ಮಿಕ ಜಗನ್
Team Udayavani, Jul 12, 2023, 5:12 AM IST
ಉಪ್ಪಿನಂಗಡಿ: ಮಂಗಳೂರಿನ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಎಂಬಲ್ಲಿ ತೌಷಿಫ್ ಹುಸೇನ್ ಎಂಬಾತನಿಂದ ಬೆಂಕಿ ಹಚ್ಚಲ್ಪಟ್ಟು ಕೊಲೆಗೀಡಾದ ಜಗ್ಗು ಆಲಿಯಾಸ್ ಜಗನ್ 2020ನೇ ಇಸವಿಯ ಲಾಕ್‌ಡೌನ್ ಸಮಯದಲ್ಲಿ ಉಪ್ಪಿನಂಗಡಿಯಲ್ಲಿದ್ದು, ಎಲ್ಲರ ಪ್ರೀತಿಪಾತ್ರನಾಗಿದ್ದ.
ಲಾಕ್ ಡೌನ್ ಘೋಷಣೆಯಾಗದ ಸಮಯ ಅದೊಂದು ದಿನ ಉಪ್ಪಿನಂಗಡಿ ಸನಿಹದ 34 ನೇ ನೆಕ್ಕಿಲಾಡಿಯಲ್ಲಿ ವಾರದ ಸಂತೆ ನಡೆಯುತ್ತಿದ್ದ ಸ್ಥಳದಲ್ಲಿ ಹಸಿವಿನಿಂದ ಆಹಾರವನ್ನು ಯಾಚಿಸುತ್ತಿದ್ದ ಈ ಯುವಕನ ಬಗ್ಗೆ ಕರುಣೆ ತೋರಿ ಸಂತೆಗೆ ಹೋಗಿದ್ದ ಉಪ್ಪಿನಂಗಡಿಯ ತರಕಾರಿ ವ್ಯಾಪಾರಿ ಬಶೀರ್ ಅವರು ಆಹಾರ ನೀಡಿ, ತರಕಾರಿ ಲೋಡ್ ಮಾಡಲು ತಿಳಿಸಿದ್ದರು.
ಉತ್ತಮವಾಗಿ ಕೆಲಸ ಮಾಡಿದ ಈತನನ್ನು ಬಳಿಕ ತನ್ನ ತರಕಾರಿ ಅಂಗಡಿಗೆ ಕರೆ ತಂದಿದ್ದರು. ಬಳಿಕ ಲಾಕ್ ಡೌನ್ ಘೋಷಣೆಯಾಗಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೂ, ಅಂಗಡಿಗಳು ತೆರೆಯಲ್ಪಟ್ಟ ಸಮಯದಲ್ಲಿ ಕೆಲಸ ಮಾಡುತ್ತಾ, ಯಾರದರೂ ತಿಂಡಿ ಕೊಟ್ಟರೆ ತಿನ್ನುತ್ತಿದ್ದ ಈತ ಹಣಕ್ಕಾಗಿ ಏನನ್ನೂ ಮಾಡುತ್ತಿರಲಿಲ್ಲ. ಮೇಲ್ನೋಟಕ್ಕೆ ಆದಿವಾಸಿ ಜನಾಂಗದವರಂತೆ ಕಾಣುತ್ತಿದ್ದ ಆತನಿಗೆ ಹಣದ ಬಗ್ಗೆ ಅರಿವೂ ಇರಲಿಲ್ಲ. ಹೊಟ್ಟೆ ತುಂಬಾ ಊಟ, ಧರಿಸಲು ಚೆಂದದ ಡ್ರೆಸ್ ಬಯಸುತ್ತಿದ್ದ. ಮಾತು ತೀರಾ ಕಡಿಮೆ. ತನ್ನ ಹೆಸರನ್ನು ಜಗನ್ ಎಂದು ತಿಳಿಸಿ, ವಿಳಾಸವನ್ನು ಅಸ್ಸಾಂ ರಾಜ್ಯದ ಸುಂದರ್‌ಗಢ್ ಎಂದು ಅರೆ ಬರೆಯಾಗಿ ತಿಳಿಸುತ್ತಿದ್ದ. ಆತ ನೀಡುತ್ತಿದ್ದ ಮಾಹಿತಿಯನ್ನು ಶೋಧಿಸಿದಾಗ ಸುಂದರ್‌ಗಢ್ ಎಂಬುವುದು ಒಡಿಶಾದಲ್ಲಿ ಇದ್ದಂತಿತ್ತು.
ಅದೊಂದು ದಿನ ತರಕಾರಿ ವ್ಯಾಪಾರಿ ಬಶೀರ್ ಜತೆಗೂಡಿ ಮಂಗಳೂರಿಗೆ ಹೋದಾತ ವಾಹನಕ್ಕೆ ತರಕಾರಿ ಲೋಡ್ ಮಾಡಿ ಊರಿಗೆ ಹೊರಡಲು ಅನುವಾದಾಗ ನಾಪತ್ತೆಯಾಗಿದ್ದ. ಬಳಿಕ ಆತ ಹುಸೇನ್ ಅಂಗಡಿಯಲ್ಲಿ ಸೇರಿರಬೇಕೆಂದು ಭಾವಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.