ಡೆನ್ಮಾರ್ಕ್ ನಲ್ಲಿದೆ ಜಗತ್ತಿನ ಮೊದಲ “ಹ್ಯಾಪಿನೆಸ್ ಮ್ಯೂಸಿಯಂ’ :ಇಲ್ಲಿ ಏನೇನಿದೆ ಗೊತ್ತಾ?
Team Udayavani, Sep 14, 2020, 11:45 AM IST
ಕೊಪನ್‌ಹೇಗ್: ಜಗತ್ತಿನಲ್ಲೇ ಅತ್ಯಂತ ತೃಪ್ತಿಕರ ಹಾಗೂ ಸಂತೋಷ ದಾಯಕ ಜೀವನ ನಡೆಸುತ್ತಿರುವವರು ಡೆನ್ಮಾರ್ಕ್‌ನಲ್ಲಿದ್ದಾರೆ ಎಂದು ಆಗಾಗ ಸಮೀಕ್ಷೆಗಳು, ಸುದ್ದಿಗಳು ಹೊರಬರುತ್ತಲೇ ಇರುತ್ತವೆ. ತನ್ನ ದೇಶವಾಸಿಗಳ ಮಾನಸಿಕ ಆರೋಗ್ಯ ಕಾಪಾಡಲು ಡೆನ್ಮಾರ್ಕ್ ಆಡಳಿತ ದಶಕಗಳಿಂದ ಕೈಗೊಳ್ಳುತ್ತಾ ಬಂದಿರುವ ಕ್ರಮಗಳ ಫಲಿತಾಂಶವಿದು ಎನ್ನುತ್ತಾರೆ ಪರಿಣತರು. ಈಗ ಈ ರಾಷ್ಟ್ರ ತನ್ನ ರಾಜಧಾನಿ ಕೊಪನ್‌ಹೇಗ್‌ನಲ್ಲಿ “ಹ್ಯಾಪಿನೆಸ್ ಮ್ಯೂಸಿಯಂ’ (ಸಂತೋಷದ ಮ್ಯೂಸಿಯಂ) ತೆರೆಯುವ ಮೂಲಕ ಮತ್ತೂಮ್ಮೆ ಜಗತ್ತಿನ ಗಮನ ಸೆಳೆಯುತ್ತಿದೆ.
ಈ ರೀತಿಯ ಮ್ಯೂಸಿಯಂ ಸ್ಥಾಪನೆ ಜಗತ್ತಿನಲ್ಲೇ ಇದೇ ಮೊದಲಾದ್ದರಿಂದ, ಅಲ್ಲಿ ಏನೇನಿರಲಿದೆ ಎನ್ನುವ ಕುತೂ ಹಲ ಎಲ್ಲರಿಗೂ ಇತ್ತು. ಈ ಮ್ಯೂಸಿಯಂ ಸ್ಥಾಪಿಸಿರುವ ಹ್ಯಾಪಿನೆಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, ಇದರಲ್ಲಿ 8 ಕೊಠಡಿಗಳು ಇರಲಿದ್ದು, ಭೇಟಿ ನೀಡುವವರ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವಂಥ ಧ್ವನಿಮುದ್ರಿಕೆಗಳು, ವೀಡಿಯೋಗಳು ಪ್ಲೇ ಆಗುತ್ತಿರುತ್ತವೆ. ಅಲ್ಲದೇ, ಜನರ ಬುದ್ಧಿಮತ್ತೆಗೆ ಸವಾಲು ಒಡ್ಡುವಂಥ ಆಟಗಳೂ ಈ ಕೊಠಡಿ ಗಳಲ್ಲಿ ಇವೆಯಂತೆ. ಒಂದು ಕೊಠಡಿಯಲ್ಲಿ ಮೊನಾಲಿಸಾಳ ಚಿತ್ರವಿದ್ದು, ಆಕೆಯ ಮುಖದ ಯಾವ ಭಾಗದಲ್ಲಿ ಮಂದ ಹಾಸವಿದೆ ಎನ್ನುವುದನ್ನು ಕನ್ನಡಿ ಮೂಲಕ ಪತ್ತೆಹಚ್ಚಬೇಕು. ಮತ್ತೂಂದು ಕೊಠಡಿಯನ್ನು ಸಂತೋಷದ ಇತಿಹಾಸ, ವಿಜ್ಞಾನವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಯಂತೆ. ಇದರೊಟ್ಟಿಗೆ ಹಲವು ರಸಪ್ರಶ್ನೆಗಳನ್ನು ಕೇಳುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಿತ ತರಹೇವಾರಿ ಪರಿಕರ ಗಳಿವೆ ಎನ್ನುತ್ತಾರೆ ಮ್ಯೂಸಿಯಂನ ಸ್ಥಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.