ಇಂದಿನಿಂದ ಚೊಚ್ಚಲ ಡಬ್ಲ್ಯುಪಿಎಲ್ : 5 ತಂಡ, 22 ಪಂದ್ಯ
Team Udayavani, Mar 4, 2023, 8:00 AM IST
ಮುಂಬಯಿ: ಪುರುಷರ ಐಪಿಎಲ್ ಆರಂಭವಾಗಿ ಒಂದೂವರೆ ದಶಕವೇ ಉರುಳಿತು, ವನಿತಾ ಐಪಿಎಲ್ ಯಾವಾಗ ಎಂಬ ಅದೆಷ್ಟೋ ಕಾಲದ ಪ್ರಶ್ನೆಗೆ ಶನಿವಾರದಿಂದ ಉತ್ತರ ಲಭಿಸಲಿದೆ. ಬಿಸಿಸಿಐ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದು, 5 ತಂಡಗಳ ನಡುವೆ ಐಪಿಎಲ್ ಮಾದರಿಯಲ್ಲೇ ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆರಂಭವಾಗಲಿದೆ. ವಿಶ್ವದ ತಾರಾ ಆಟಗಾರ್ತಿಯರೆಲ್ಲ ಒಟ್ಟುಗೂಡುವ ಕಾರಣದಿಂದ ಈ ಟೂರ್ನಿ ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇಷ್ಟು ಕಾಲ ವನಿತಾ ಕ್ರಿಕೆಟ್ ಲೀಗ್ ಎಂದರೆ ಕೇವಲ ಆಸ್ಟ್ರೇಲಿಯದ ಬಿಗ್ ಬಾಶ್ ಲೀಗ್ ಮಾತ್ರ ನೆನಪಾಗುತ್ತಿತ್ತು. ಈ ನಡುವೆ ಐಪಿಎಲ್ ನಡುವೆ ಬಿಸಿಸಿಐ 3 ತಂಡಗಳ ನಡುವಿನ ವನಿತಾ ಕಿರು ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸುತ್ತಿತ್ತಾದರೂ ಇದು ಕೇವಲ ಲೆಕ್ಕದ ಭರ್ತಿಯದ್ದಾಗಿತ್ತು. ಅಲ್ಲದೇ ಇದರಲ್ಲಿ ವಿದೇಶಿ ಕ್ರಿಕೆಟಿಗರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತಿತ್ತು. ಕೇವಲ 7 ಪಂದ್ಯಗಳಲ್ಲಿ ಇಡೀ ಪಂದ್ಯಾವಳಿಯೇ ಮುಗಿದು ಹೋಗುತ್ತಿತ್ತು. ಇಲ್ಲಿನ ಕೊರತೆಯನ್ನೆಲ್ಲ ಡಬ್ಲ್ಯುಪಿಎಲ್ ನಿವಾರಿಸುವುದರಲ್ಲಿ ಅನುಮಾನವಿಲ್ಲ.
ಇದು ಒಟ್ಟು 22 ಪಂದ್ಯಗಳ ಮುಖಾಮುಖಿ. 87 ಆಟಗಾರ್ತಿಯರು ಕಣದಲ್ಲಿದ್ದಾರೆ. ಆತಿಥ್ಯ ಮುಂಬಯಿಗಷ್ಟೇ ಮೀಸಲು. ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂ ಮತ್ತು ಡಾ| ಡಿ.ವೈ. ಪಾಟೀಲ್ ಸ್ಟೇಡಿಯಂಗಳಲ್ಲಿ ಪಂದ್ಯಗಳು ಸಾಗುತ್ತವೆ. ಪ್ರತಿಯೊಂದು ತಂಡ ಎದುರಾಳಿ ತಂಡದ ವಿರುದ್ಧ ಎರಡು ಲೀಗ್ ಪಂದ್ಯಗಳನ್ನು ಆಡಲಿದೆ. ಅಗ್ರಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. 2-3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಸುತ್ತಿನಲ್ಲಿ ಆಡಲಿವೆ. ಗೆದ್ದ ತಂಡಕ್ಕೆ ಫೈನಲ್ ಟಿಕೆಟ್ ಲಭಿಸಲಿದೆ. ಮಾ. 26ರಂದು ಪ್ರಶಸ್ತಿ ಕದನ ಏರ್ಪಡಲಿದೆ. ಶನಿವಾರದ ಉದ್ಘಾಟನ ಪಂದ್ಯದಲ್ಲಿ ಮುಂಬೈ-ಗುಜರಾತ್ ಎದುರಾಗಲಿವೆ.
5 ತಂಡಗಳೆಂದರೆ, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ ಬೆಂಗಳೂರು, ಗುಜರಾತ್ ಜೈಂಟ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್. ಕ್ರಮವಾಗಿ ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ಬೆತ್ ಮೂನಿ, ಮೆಗ್ ಲ್ಯಾನಿಂಗ್, ಅಲಿಸ್ಸಾ ಹೀಲಿ ನಾಯಕಿಯರಾಗಿದ್ದಾರೆ. ನಾಯಕಿಯರಲ್ಲಿ ಆಸ್ಟ್ರೇಲಿಯದ ಗರಿಷ್ಠ ಮೂವರಿದ್ದಾರೆ. ಉಳಿದಿಬ್ಬರು ಭಾರತೀಯರು.
ಮೇಲ್ನೋಟಕ್ಕೆ ಆರ್‌ಸಿಬಿ ಬಲಿಷ್ಠ
ತಂಡದ ಬಲಾಬಲದ ಬಗ್ಗೆ ಈಗಲೇ ಏನೂ ಹೇಳುವಂತಿಲ್ಲ. ಮೇಲ್ನೋಟಕ್ಕೆ ಸ್ಮತಿ ಮಂಧನಾ ನೇತೃತ್ವದ ಆರ್‌ಸಿಬಿ ಬಲಿಷ್ಠವಾಗಿ ಗೋಚರಿಸುತ್ತಿದೆ. ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಹೀತರ್ ನೈಟ್, ಮೆಗಾನ್ ಶಟ್, ರೇಣುಕಾ ಸಿಂಗ್ ಮೊದಲಾದ ಘಟಾನುಘಟಿ ಕ್ರಿಕೆಟಿಗರೆಲ್ಲ ಒಂದೆಡೆ ಸೇರಿದ್ದಾರೆ. ಈವರೆಗೆ ಪುರುಷರಿಗೆ ಒಲಿಯದ ಟ್ರೋಫಿಯನ್ನು ವನಿತೆಯರಾದರೂ ತಂದುಕೊಡಲಿ ಎಂಬುದು ಆರ್‌ಸಿಬಿ ಅಭಿಮಾನಿಗಳ ಹಾರೈಕೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಕೂಡ ಬಲಿಷ್ಠವಾಗಿದೆ. ನಥಾಲಿ ಸ್ಕಿವರ್ ಬ್ರಂಟ್, ಪೂಜಾ ವಸ್ತ್ರಾಕರ್, ಅಮೇಲಿಯಾ ಕೆರ್, ಯಾಸ್ತಿಕಾ ಭಾಟಿಯಾ ಅವರೆಲ್ಲ ಇಲ್ಲಿನ ಸ್ಟಾರ್ ಆಟಗಾರ್ತಿಯರು.
ಮೆಗ್ ಲ್ಯಾನಿಂಗ್, ಶಫಾಲಿ ವರ್ಮ, ಅಲೈಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಶಿಖಾ ಪಾಂಡೆ, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ರಾಧಾ ಯಾದವ್, ತನಿಯಾ ಭಾಟಿಯಾ ಅವರನ್ನೊಳಗೊಂಡ ಡೆಲ್ಲಿ ಕೂಡ ಬಲಾಡ್ಯವಾಗಿ ಗೋಚರಿಸುತ್ತಿದೆ.
ಬೆತ್ ಮೂನಿ, ಆ್ಯಶ್ಲಿ ಗಾರ್ಡನರ್, ಸ್ನೇಹ್ ರಾಣಾ, ಜಾರ್ಜಿಯಾ ವೇರ್‌ಹ್ಯಾಮ್, ಅನ್ನಾಬೆಲ್ ಸದರ್‌ಲ್ಯಾಂಡ್, ಸೋಫಿಯಾ ಡಂಕ್ಲಿ, ಡಿಯಾಂಡ್ರಾ ಡಾಟಿನ್ ಅವರನ್ನು ಹೊಂದಿರುವ ಗುಜರಾತ್ ಕೂಡ ಜೈಂಟ್ ತಂಡವೇ ಆಗಿದೆ.
ಅಲಿಸ್ಸಾ ಹೀಲಿ, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮ, ಸೋಫಿ ಎಕ್ಲ್‌ಸ್ಟೋನ್, ಟಹ್ಲಿಯಾ ಮೆಗ್ರಾತ್ ಅವರನ್ನು ಹರಾಜಿನಲ್ಲಿ ಪಡೆದಿರುವ ಯುಪಿ ವಾರಿಯರ್ ತಾನು ಯಾರಿಗೇನು ಕಡಿಮೆ ಎಂದು ಕೇಳುತ್ತಿದೆ. ಒಟ್ಟಾರೆ ರೋಚಕ ಕ್ರಿಕೆಟ್ ಹಣಾಹಣಿಗೊಂದು ವೇದಿಕೆ ಸಜ್ಜಾಗಿದೆ.
ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್
ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮ, ಅಲೈಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಶಿಖಾ ಪಾಂಡೆ, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ರಾಧಾ ಯಾದವ್, ಮಿನ್ನು ಮಣಿ, ತನಿಯಾ ಭಾಟಿಯಾ, ಪೂನಂ ಯಾದವ್, ಸ್ನೇಹಾ ದೀಪ್ತಿ, ಅರುಂಧತಿ ರೆಡ್ಡಿ, ತಿತಾಸ್ ಸಾಧು, ಜಾಸಿಯಾ ಅಖ್ತರ್, ತಾರಾ ನೋರಿಸ್, ಅಪರ್ಣಾ ಮೊಂಡಲ್, ಮರಿಜಾನ್ ಕಾಪ್.
ಗುಜರಾತ್ ಜೈಂಟ್ಸ್
ಬೆತ್ ಮೂನಿ (ನಾಯಕಿ), ಆ್ಯಶ್ಲಿ ಗಾರ್ಡನರ್, ಸ್ನೇಹ್ ರಾಣಾ, ಜಾರ್ಜಿಯಾ ವೇರ್‌ಹ್ಯಾಮ್, ಅನ್ನಾಬೆಲ್ ಸದರ್‌ಲ್ಯಾಂಡ್, ಸೋಫಿಯಾ ಡಂಕ್ಲಿ, ಡಿಯಾಂಡ್ರಾ ಡಾಟಿನ್, ಹರ್ಲಿ ಗಾಲಾ, ಸುಷ್ಮಾ ವರ್ಮ, ತನುಜಾ ಕನ್ವರ್, ಹಲೀìನ್ ದೇವಲ್, ಅಶ್ವನಿ ಕುಮಾರಿ, ಎಸ್. ಮೇಘನಾ, ಮಾನ್ಸಿ ಜೋಶಿ, ಡಿ. ಹೇಮಲತಾ, ಮೋನಿಕಾ ಪಟೇಲ್, ಪರುಣಿಕಾ ಸಿಸೋಡಿಯಾ, ಶಬಿ°ಮ್ ಶಕೀಲ್.
ಮುಂಬೈ ಇಂಡಿಯನ್ಸ್
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಯಾಸ್ತಿಕಾ ಭಾಟಿಯಾ, ಅಮನ್‌ಜೋತ್ ಕೌರ್, ಹ್ಯಾಲಿ ಮ್ಯಾಥ್ಯೂಸ್, ಹೀತರ್ ಗ್ರಹಾಂ, ಐಸ್ಸಿ ವೋಂಗ್, ಕ್ಲೋ ಟ್ರಯಾನ್, ಪ್ರಿಯಾಂಕಾ ಬಾಲಾ, ಧಾರಾ ಗುಜ್ಜರ್, ಶೇಖ್ ಇಶಾಖ್, ಹುಮೈರಾ ಖಾಜಿ, ಸೋನಂ ಯಾದವ್, ಜಿಂತಿಮಣಿ ಕಲಿಟಾ, ನೀಲಂ ಬಿಷ್ಟ್, ನಥಾಲಿ ಸ್ಕಿವರ್ ಬ್ರಂಟ್, ಪೂಜಾ ವಸ್ತ್ರಾಕರ್, ಅಮೇಲಿಯಾ ಕೆರ್.
ರಾಯಲ್ ಚಾಲೆಂಜರ್ ಬೆಂಗಳೂರು
ಸ್ಮತಿ ಮಂಧನಾ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್, ಹೀತರ್ ನೈಟ್, ಮೆಗಾನ್ ಶಟ್, ಕನಿಕಾ ಅಹುಜಾ, ಎರಿನ್ ಬರ್ನ್ಸ್, ಡೇನ್ ವಾನ್ ನೀಕರ್ಕ್, ಪ್ರೀತಿ ಬೋಸ್, ಕೋಮಲ್ ಜಂಜಾದ್, ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರೇಯಾಂಕಾ ಪಾಟೀಲ್, ಆಶಾ ಶೋಭನಾ, ಪೂನಂ ಕೆಮ್ನಾರ್, ಸಹನಾ ಪವಾರ್, ರೇಣುಕಾ ಸಿಂಗ್.
ಯುಪಿ ವಾರಿಯರ್
ಅಲಿಸ್ಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮ, ಗ್ರೇಸ್ ಹ್ಯಾರಿಸ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಕಿರಣ್ ನವ್ಗಿರೆ, ಲಾರೆನ್ ಬೆಲ್, ಪಾರ್ಶವಿ ಚೋಪ್ರಾ, ಎಸ್. ಯಶಶ್ರೀ, ಲಕ್ಷ್ಮೀ ಯಾದವ್, ಸಿಮ್ರಾನ್ ಶೇಖ್, ಸೋಫಿ ಎಕ್ಲ್‌ಸ್ಟೋನ್, ಟಹ್ಲಿಯಾ ಮೆಗ್ರಾತ್, ದೇವಿಕಾ ವೈದ್ಯ, ಶಬಿ°ಮ್ ಇಸ್ಮಾಯಿಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Bantwal: ಬಿ.ಸಿ.ರೋಡ್‌ನ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.