ಯಕ್ಷಗಾನ ಕಲಾರಂಗ ಉಡುಪಿ: ವಿದ್ಯಾಪೋಷಕ್‍ನ 24ನೇ ಮನೆ ಹಸ್ತಾಂತರ
Team Udayavani, Mar 20, 2022, 6:22 PM IST
ಉಡುಪಿ : ಯಕ್ಷಗಾನ ಕಲಾರಂಗ ಉಡುಪಿಯ ವಿದ್ಯಾಪೋಷಕ್ ಫಲಾನುಭವಿ ಅಕ್ಷಯ್ ಕುಮಾರ್ ಗೆ ನಾಗೂರಿನಲ್ಲಿ ನಿರ್ಮಿಸಿಕೊಟ್ಟ ಮನೆ ‘ಸಾಯಿಮಯಿ’ಯ ಹಸ್ತಾಂತರ ಕಾರ್ಯಕ್ರಮ ಮಾರ್ಚ್ 20 ರಂದು ಜರಗಿತು.
ಪ್ರಾಯೋಜಕರಾದ ಮಂಗಳೂರಿನ ಖ್ಯಾತ ವೈದ್ಯ ಡಾ. ಜೆ.ಎನ್.ಭಟ್, ಇವರು ಜ್ಯೋತಿಬೆಳಗಿಸಿ ಉದ್ಘಾಟಿಸಿ, ಈ ಮನೆಯಲ್ಲಿ ನೆಮ್ಮದಿಯಿಂದ ಬದುಕಿ, ದೊಡ್ಡ ಸಾಧನೆ ಮಾಡಿ, ಉಳಿದವರಿಗೆ ಆಸರೆಯಾಗಬೇಕೆಂದು ಅಕ್ಷಯ್ ಗೆ ಕಿವಿಮಾತು ಹೇಳಿದರು.
ಅಕ್ಷಯ್ ಯಕ್ಷಗಾನ ಹಿಮ್ಮೇಳವಾದಕ ಹೆರಂಜಾಲು ಬಾಲಕೃಷ್ಣ ಗಾಣಿಗ ಅವರ ಪುತ್ರನಾಗಿದ್ದು, ಕಲಾರಂಗದ ಯಕ್ಷಗಾನ ಕಲಾವಿದರಿಗೆ ಹಲವು ರೀತಿಯ ನೆರವಿನಲ್ಲಿ ಮನೆ ನಿರ್ಮಾಣವೂ ಒಂದಾಗಿದ್ದು ದಾಖಲೆಯ 24ನೇ ಮನೆ ಹಸ್ತಾಂತರ ಕಾರ್ಯಕ್ರಮ ಇದಾಗಿದೆ.
ಮುಖ್ಯ ಭ್ಯಾಗತರಾಗಿ ಆಗಮಿಸಿದ ಸಂಸ್ಥೆಯ ದಾನಿ ಪಿ.ಗೋಕುಲನಾಥ ಪ್ರಭು ಮಾತನಾಡಿ, ತಮ್ಮ ಮಾತೃಶ್ರೀಯವರ 100ನೇ ವರ್ಷದ ಪ್ರಯುಕ್ತ ಒಂದು ಮನೆಯನ್ನು ಸಂಸ್ಥೆಯ ಮೂಲಕ ನಿರ್ಮಿಸಿ ಕೊಡಬೇಕೆಂದು ಸಂಕಲ್ಪಿಸಿರುವುದಾಗಿ ತಿಳಿಸಿದರು. ಪ್ರೊ. ಎಂ.ಎಲ್ ಸಾಮಗ ಡಾ. ಜೆ.ಎನ್.ಭಟ್ ಇವರನ್ನು ಪರಿಚಯಿಸಿದರು.
ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ಖ್ಯಾತ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಮತ್ತು ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.
ಸಂಸ್ಥೆಯ ಕೆಲಸಕ್ಕೆ ಸಮಾಜದ ದಾನಿಗಳು ಮುಕ್ತ ಹಸ್ತದಿಂದ ಸಹಾಯ ಮಾಡುತ್ತಿರುವುದನ್ನು ನೆನಪಿಸಿಕೊಂಡು ಪಿ.ಗೋಕುಲನಾಥ ಪ್ರಭು,ಡಾ.ಜೆ.ಎನ್.ಭಟ್ ರಂತಹ ದಾನಿಗಳು ಸಂಸ್ಥೆಯ ಆಸ್ತಿ ಎಂದು ಮುರಲಿ ಕಡೆಕಾರ್ ಹೇಳಿದರು.
ಜತೆಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Mangaluru: ಎಂಜಿನಿಯರಿಂಗ್ ವಿದ್ಯಾರ್ಥಿನಿ ನಾಪತ್ತೆ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ; 21 ಲ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.