ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಯಶ್ ಧುಲ್
97 ರನ್ ಮಾಡಿದ್ದಾಗ ಔಟಾದ ಧುಲ್ ಗೆ ವರವಾದ ನೋ ಬಾಲ್
Team Udayavani, Feb 17, 2022, 6:47 PM IST
ಗುವಾಹಟಿ : ಭಾರತ ಅಂಡರ್-19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.
ಎಲೈಟ್ ಗ್ರೂಪ್ ಎಚ್ ಸ್ಪರ್ಧೆಯಲ್ಲಿ ದೆಹಲಿಯ ಬ್ಯಾಟರ್ ಯಶ್ ಧುಲ್ ಗುರುವಾರ ಪ್ರಥಮ ದರ್ಜೆಯಲ್ಲಿ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮಿಳುನಾಡು ವಿರುದ್ಧ ಶತಕ ದಾಖಲಿಸಿದರು.
ಓಪನಿಂಗ್‌ಗೆ ಕಳುಹಿಸಲ್ಪಟ್ಟ ಧುಲ್ ಕೇವಲ 133 ಎಸೆತಗಳಲ್ಲಿ 16 ಬೌಂಡರಿಗಳ ಸಹಾಯದಿಂದ ಶತಕವನ್ನು ಸಿಡಿಸಿದರು. ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
97 ರನ್ ಮಾಡಿದ್ದಾಗ , ಧುಲ್ ಅವರನ್ನು ಎಂ ಮೊಹಮ್ಮದ್ ಔಟ್ ಮಾಡಿದರು ಆದರೆ ಚೆಂಡು ನೋ ಬಾಲ್ ಆಗಿ ಹೊರಹೊಮ್ಮಿತು ಮತ್ತು ಯುವ ದೆಹಲಿ ಬ್ಯಾಟರ್‌ಗೆ ವರವಾಗಿ ಪರಿಣಮಿಸಿತು.
ಇಂಗ್ಲೆಂಡ್ ಅನ್ನು ಸೋಲಿಸಿ ಧುಲ್ ಭಾರತವನ್ನು ಐದನೇ ಅಂಡರ್ 19 ವಿಶ್ವಕಪ್ ವಿಜಯದ ದಾಖಲೆಯ ಐದನೇ ಗೆಲುವಿಗೆ ಕಾರಣರಾಗಿದ್ದರು.
ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದ್ದು, ಇದೀಗ ಪ್ರಿ-ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಂತವು ಫೆಬ್ರವರಿ 10 ರಿಂದ ಮಾರ್ಚ್ 15 ರವರೆಗೆ ನಡೆಯಲಿದೆ ಎಂದು ದೃಢಪಡಿಸಲಾಗಿದೆ. ಐಪಿಎಲ್ ನಂತರದ ಹಂತವು ಮೇ 30 ರಿಂದ ಜೂನ್ 26 ರವರೆಗೆ ನಡೆಯಲಿದೆ. ಈ ಋತುವಿನ ರಣಜಿ ಟ್ರೋಫಿಯು 62 ದಿನಗಳಲ್ಲಿ 64 ಪಂದ್ಯಗಳನ್ನು ಆಡಲಾಗುತ್ತದೆ.
ಗುರುವಾರ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮುಂಬೈ ಪರ ಭಾರತೀಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಶತಕ ಸಿಡಿಸಿದ್ದಾರೆ. ರಹಾನೆ 212 ಎಸೆತಗಳಲ್ಲಿ 14 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ಶತಕವನ್ನು ಗಳಿಸಿದರು.
ಕರ್ನಾಟಕದ ಪರ ಡಬಲ್ ಶತಕ
ಕರ್ನಾಟಕ ಮತ್ತು ರೈಲ್ವೇಸ್ ನಡುವಿನ ಪಂದ್ಯದಲ್ಲಿ, ಕರ್ನಾಟಕ ನಾಯಕ ಮನೀಶ್ ಪಾಂಡೆ 83 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಒಳಗೊಂಡ 100 ರನ್ ಗಳಿಸಿದರು. ಅವರು ಅಂತಿಮವಾಗಿ 121 ಎಸೆತಗಳಲ್ಲಿ 156 ರನ್ ಗಳಿಸಿ ಔಟಾದರು. ಕರ್ನಾಟಕದ ಇನ್ನೊಬ್ಬ ಬ್ಯಾಟ್ಸ್‌ಮನ್ ಕೃಷ್ಣಮೂರ್ತಿ ಸಿದ್ಧಾರ್ಥ್ ಭರ್ಜರಿ ಶತಕ ಸಿಡಿಸಿ ಕ್ರೀಸ್ ನಲ್ಲಿದ್ದಾರೆ.221 ಎಸೆತಗಳಲ್ಲಿ 140 ರನ್ ಗಳಿಸಿ ಅವರು ತಾಳ್ಮೆಯ ಆಟವಾಡುತ್ತಿದ್ದಾರೆ.
ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿದೆ. ರೈಲ್ವೇಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ
Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್ ಸೇರಿ ನಾಲ್ವರು ಹೈಕೋರ್ಟ್‌ಗೆ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.