ಪ್ರಾ. ಆರೋಗ್ಯ ಕೇಂದ್ರಗಳಲ್ಲೀಗ ಯೋಗ ತರಗತಿ : ಕರಾವಳಿಯ 100ಕ್ಕೂ ಹೆಚ್ಚು ಕಡೆ ಆರಂಭ
Team Udayavani, Jan 29, 2021, 6:55 AM IST
ಕುಂದಾಪುರ: ವಿಶ್ವ ಯೋಗ ದಿನಾಚರಣೆಯ ಬಳಿಕ ಯೋಗಾಭ್ಯಾಸ ಜಾಗತಿಕವಾಗಿ ಮಾತ್ರವಲ್ಲ, ಭಾರತದಲ್ಲೂ ಪ್ರಾಮುಖ್ಯ ಪಡೆಯಲಾರಂಭಿಸಿದೆ. ಅಧಿಕ ರಕ್ತದೊತ್ತಡ, ಮಧು ಮೇಹ, ಕ್ಯಾನ್ಸರ್ ಮತ್ತಿತರ ಅಸಾಂಕ್ರಾಮಿಕ ಕಾಯಿಲೆಗಳನ್ನು ತಡೆಯುವುದಕ್ಕಾಗಿ ಉಚಿತ ಯೋಗಾಭ್ಯಾಸವನ್ನು ರಾಜ್ಯದ ಎಲ್ಲ ಪ್ರಾಥ ಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳಲ್ಲಿ ಆರಂಭಿಸಿರುವುದು ಈ ನಿಟ್ಟಿನಲ್ಲಿ ಹೊಸ ಹೆಜ್ಜೆ.
ನಗರಗಳು ಮಾತ್ರವಲ್ಲದೆ ಈಗ ಅಸಾಂಕ್ರಾಮಿಕ ಕಾಯಿಲೆಗಳು ಹಳ್ಳಿ ಭಾಗದಲ್ಲಿಯೂ ಹೆಚ್ಚುತ್ತಿವೆ. ಇದನ್ನು ತಡೆಯಲು ಈ ಹೆಜ್ಜೆ ಇರಿಸಲಾಗಿದ್ದು, ಉಡುಪಿ- ದ.ಕ.ದ ನೂರಕ್ಕೂ ಹೆಚ್ಚು ಪಿಎಚ್‌ಸಿಗಳಲ್ಲಿ ಈಗಾಗಲೇ ನಡೆಯುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಂಗವಾಗಿ ಆಯುಷ್ಮಾನ್ ಭಾರತದಡಿ ಪಿಎಚ್‌ಸಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಉಚಿತ ಯೋಗ ತರಗತಿ ಇದರ ಭಾಗವೂ ಹೌದು. ಕುಂದಾ ಪುರದ ಶಂಕರನಾರಾಯಣ, ಸಿದ್ದಾಪುರ ಮತ್ತಿತರ ಕಡೆ ಉತ್ತಮ ಸ್ಪಂದನೆ ಸಿಕ್ಕಿದೆ.
ಮಾಸಿಕ 20 ಶಿಬಿರ
ದಿನವೂ ಬೆಳಗ್ಗೆ ಯಾ ಸಂಜೆ 1 ತಾಸು ತರಗತಿ ನಡೆ ಯುತ್ತಿದೆ. ಪರಿಣತರೇ ಸಂಪ ನ್ಮೂಲ ವ್ಯಕ್ತಿಗಳು. ಒಬ್ಬರಿಗೆ 2 ಕಡೆ ತರಬೇತಿ ನೀಡಲು ಅವ ಕಾಶವಿದ್ದು, ತಲಾ 5 ಸಾವಿರ ರೂ.ಗಳಂತೆ ಗೌರವಧನ ಇದೆ.
100ಕ್ಕೂ ಅಧಿಕ ಆಸ್ಪತ್ರೆಗಳಲ್ಲಿ ಆರಂಭ
ಉಡುಪಿಯ ಸುಮಾರು 80 ಪಿಎಚ್‌ಸಿ ಗಳಲ್ಲಿ 39 ಕಡೆ (27 ಶಿಕ್ಷಕರು) ಯೋಗ ತರ ಬೇತಿ ಆರಂಭಿಸಿದ್ದಾರೆ. ದಕ್ಷಿಣ ಕನ್ನಡದ ಎಲ್ಲ 76 ಪಿಎಚ್‌ಸಿಗಳಲ್ಲಿಯೂ ಯೋಗ ತರಬೇತಿ ಆರಂಭಿಸಲಾಗಿದೆ. ರಾಜ್ಯದಲ್ಲಿ 2,359 ಪಿಎಚ್‌ಸಿಗಳಿದ್ದು, ಹಂತ ಹಂತವಾಗಿ ಜಾರಿಯಾಗಲಿದೆ.
ಉದ್ದೇಶವೇನು?
ಅಸಾಂಕ್ರಾಮಿಕ ರೋಗಗಳು ಇಂದು ನಗರ ಪ್ರದೇಶಗಳಿಗೆ ಸೀಮಿತವಾಗಿ ಉಳಿದಿಲ್ಲ. ಹಳ್ಳಿಗಳಲ್ಲೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರಿಗೂ ಸುಲಭವಾಗಿ ಯೋಗ ತರಬೇತಿ ಸಿಗಬೇಕಿದೆ. ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಖನ್ನತೆ ಕಡಿಮೆ ಮಾಡಿ, ದೈಹಿಕ ಮತ್ತು ಮಾನಸಿಕ ಲವಲವಿಕೆ ಹೆಚ್ಚಿಸುವುದು ಉದ್ದೇಶ. ತಿಂಗಳಿಗೆ ಕನಿಷ್ಠ 20 ಶಿಬಿರ ನಡೆಸಲಾಗುತ್ತಿದ್ದು, ಪಿಎಚ್‌ಸಿ ವ್ಯಾಪ್ತಿಯ ಜನರು ಪಾಲ್ಗೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.