ಗೂಗಲ್ ಮ್ಯಾಪ್ ತಪ್ಪಿದ್ದರೆ ನೀವು ಸರಿಪಡಿಸಬಹುದು!
Team Udayavani, Mar 13, 2021, 7:30 AM IST
ಗೂಗಲ್ ಮ್ಯಾಪ್ ಇದೀಗ ಮತ್ತಷ್ಟು ಅಪ್‌ಟೇಡ್ ಆಗಿದೆ. ನಿಗದಿತವಾಗಿ ಭೇಟಿ ಮಾಡುವ ಸ್ಥಳೀಯ ಲೊಕೇಶನ್‌ಗಳ ರಿವ್ಯೂ, ಫೋಟೋಗಳನ್ನು ಸೇರಿಸಲು ಬಳಕೆದಾರರಿಗೆ ಗೂಗಲ್ ಅವಕಾಶ ನೀಡಿದೆ. ಈ ಮೂಲಕ ಗೂಗಲ್‌ನಲ್ಲಿ ಇಲ್ಲದ ಅಥವಾ ಗೂಗಲ್‌ನಲ್ಲಿ ಇದುವರೆಗೆ ಕಾಣಿಸದೇ ಇರುವ ರಸ್ತೆಗಳನ್ನು ಬಳಕೆದಾರರೇ ಗುರುತಿಸಿ ಮ್ಯಾಪ್‌ಗೆ ಸೇರಿಸಬ ಹುದಾಗಿದೆ. ಜತೆಗೆ ತಪ್ಪಾಗಿ ಕಾಣುವ ರಸ್ತೆಗಳ ನಕಾಶೆಯನ್ನು ಮರುಜೋಡಿಸಬಹುದು.
ವಿಶ್ವದ 80ಕ್ಕೂ ಹೆಚ್ಚು ದೇಶಗಳ ನಕಾಶೆಯನ್ನು ಹೊಂದಿರುವ ಗೂಗಲ್ ತನ್ನಲ್ಲಿನ ನಕಾಶೆಗಳನ್ನು ನೈಜತೆಯ ಸನಿಹಕ್ಕೆ ತರಲು ಮುಂದಾಗಿದ್ದು ಈ ಕಾರಣಂದಿಂದಾಗಿಯೇ ಇನ್ನಷ್ಟು ಎಡಿಟ್ ಮಾಡುವ ಸೌಲಭ್ಯಗಳನ್ನು ಒದಗಿಸಿದೆ. ಈಗ ಬಳಕೆದಾರರು ಅದರಲ್ಲಿರದ ರಸ್ತೆಗಳು ಮತ್ತು ಊರ ಹೆಸರುಗಳನ್ನು ಅಥವಾ ತಪ್ಪಾಗಿರುವ ಹೆಸರನ್ನು ತೆಗೆದು ಹಾಕಬಹುದು ಅಥವಾ ನಕಾಶೆ ಗಳಲ್ಲಿರುವ ಹೆಸರನ್ನು ಬದಲಾಯಿಸಬಹುದು.
ಪೂರ್ಣ ಮಾಹಿತಿ
ನಕಾಶೆಗಳಲ್ಲಿ ಇರುವ ರಸ್ತೆಗಳ ಬಗೆಗಿನ ಈಗಿನ ಸ್ಥಿತಿಗತಿಯ ಮಾಹಿತಿಯನ್ನು ಬಳಕೆ ದಾರರು ಅಪ್‌ಡೇಟ್ ಮಾಡಬಹುದಾಗಿದೆ. ಉದಾಹರಣೆಗೆ ರಸ್ತೆ ಎಷ್ಟು ಸಮಯದವರೆಗೆ ಮುಚ್ಚಲ್ಪಟ್ಟಿದೆ? ಮುಚ್ಚಲು ಕಾರಣವೇನು? ಈಗ ಹೊಸ ನಿರ್ದೇಶನ ಏನು? ಎಂಬುದನ್ನೂ ಮ್ಯಾಪ್‌ಗೆ ಅಪ್‌ಡೇಟ್ ಮಾಡಬಹುದು. ಬಳಕೆದಾರರು ನೀಡಿದ ಸಲಹೆಗಳು ಮತ್ತು ಸೇರಿಸಲಾದ ಅಂಶಗಳು ಸರಿಯಾಗಿವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ ಲಾವಣೆಗಳನ್ನು ಮಾಡಿದ ಬಳಕೆದಾರನ ಹೆಸರನ್ನು ಸಹ ಹೊಂದಿರಲಿದೆ.
ಈ ವಿಧಾನ ಹೇಗೆ?
ಡೆಸ್ಕ್ಟಾಪ್‌ನಲ್ಲಿ maps.google.comಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ಯಾವುದೇ ಮಾರ್ಗ ಕಾಣುತ್ತಿಲ್ಲವಾದರೆ, ಆಗ ಸೈಡ್ ಮೆನು ಬಟನ್ ಕ್ಲಿಕ್ ಮಾಡಬೇಕು. ಅಲ್ಲಿ edit the map here ಆಯ್ಕೆ ಕ್ಲಿಕ್ ಮಾಡಬೇಕು, ಬಳಿಕ missing road ಆರಿಸಿಕೊಳ್ಳಬೇಕು. ರಸ್ತೆ ಹಾದುಹೋಗಿರುವಂತೆ ಸ್ಕ್ರೀನ್ ಮೇಲೆ ಕಾಣುವ ಮ್ಯಾಪ್‌ನಲ್ಲಿ ಗುರುತು ಮಾಡಬೇಕು. ಹೀಗೆ ಜೋಡಿಸಿದ ಹೊಸ ರಸ್ತೆಗೆ ಹೆಸರನ್ನು ಕೂಡ ಸೂಚಿಸಬಹುದು. ರಸ್ತೆಗಳನ್ನು ಸೇರಿಸಿ ಅಥವಾ ತಪ್ಪಾಗಿ ಗುರುತಾಗಿರುವ ರಸ್ತೆಯನ್ನು ಸರಿಪಡಿಸಿ ಬಳಿಕ ಹೆಸರು ದಾಖಲಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.