ಸೋಲಿಲ್ಲದ ಸರದಾರರು ಸಾಕು, ಯುವಕರು ರಾಜಕೀಯಕ್ಕೆ ಬರಬೇಕು : ಭಾಸ್ಕರ್ ರಾವ್
Team Udayavani, Apr 21, 2022, 4:43 PM IST
ಬೆಂಗಳೂರು : ಯುವಕರು, ಶಿಕ್ಷಿತರು ರಾಜಕೀಯಕ್ಕೆ ಬರಬೇಕು. ಸೋಲಿಲ್ಲದ ಸರದಾರರು ಅನ್ನಿಸಿಕೊಂಡವರು ಇನ್ನು ಸಾಕು ಎಂದು ಮಾಜಿ ಪೊಲೀಸ್ ಆಯುಕ್ತ, ಆಪ್ ಮುಖಂಡ ಭಾಸ್ಕರ್ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಸೋಲಿಲ್ಲದ ಸರದಾರರು ಹಲವು ಭಾರಿ ಗೆದ್ದು ಬರುತ್ತಾರೆ. ಗೆದ್ದವರೆಲ್ಲರೂ ಭ್ರಷ್ಟಾಚಾರದಲ್ಲೇ ಮುಳುಗಿದ್ದಾರೆ.ಡಾಲರ್ಸ್ ಕಾಲೋನಿಯಲ್ಲಿ ದೊಡ್ಡ ದೊಡ್ಡ ಬಂಗಲೆಗಳನ್ನ ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕ ಭಾಗದ ಸೋಲಿಲ್ಲದ ಸರದಾರರ ಕ್ಷೇತ್ರಗಳನ್ನ ನೋಡಿ,ಅಲ್ಲಿ ಜನರ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ.ಯಾವುದೇ ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ.ಭ್ರಷ್ಟಾಚಾರ, ಸೋರಿಕೆಯಿಂದ ಹಣದ ಸಮಸ್ಯೆ ಸೃಷ್ಟಿಯಾಗಿದೆ.ಕಾಂಗ್ರೆಸ್, ಬಿಜೆಪಿ ಪೊಳ್ಳು ಭರವಸೆ ನೀಡುತ್ತಿವೆ.ರೈತರ ಬಜೆಟ್ ಮಂಡಿಸುವುದಾಗಿ ಹೇಳಿದ್ದ ಬಿಜೆಪಿ ಏನೂ ಮಾಡಲೇ ಇಲ್ಲ.ಭಯವೇ ನಮಗೆ ದೊಡ್ಡ ಶತ್ರು. ಭಯ ಬಿಟ್ಟು ರಾಜಕೀಯಕ್ಕೆ ಯುವಕರು ಬರಬೇಕಿದೆ ಎಂದು ಕರೆ ನೀಡಿದರು.
ಆಮ್ ಆದ್ಮಿ ಪಕ್ಷಕ್ಕೆ ಹಣ, ತೋಳು, ಜಾತಿ, ಧರ್ಮದ ಬಲವಿಲ್ಲ.ನಮ್ಮ ಪಕ್ಷಕ್ಕೆ ಜನಸಾಮಾನ್ಯರ ಬಲವಿದೆ.ಎಲ್ಲಾ ವರ್ಗದವರು ನೇರವಾಗಿ ರಾಜಕಾರಣದಲ್ಲಿ ಭಾಗವಹಿಸಬೇಕು.ಇಷ್ಟುದಿನ ಕೆಲವರು ಗೆದ್ದು ಬಂದು ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ.ಸರ್ದಾರ್ ಗಳಾಗಿ ಮೆರೆಯುತ್ತಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ ಮಾಡಿ ಮೊಮ್ಮಕ್ಕಳಿಗೆ ಸಂಪತ್ತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.