ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಮಲ್ಲಿಗೆ ಸಮರ್ಪಣೆ
Team Udayavani, Mar 28, 2019, 12:19 PM IST
ಶಯನೋತ್ಸವದಲ್ಲಿ ಸಿಂಹರೂಢಳಾಗಿ ಶ್ರೀ ದುರ್ಗಾಪರಮೇಶ್ವರೀ ದೇವಿ.
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ನಡೆದ ಹಗಲು ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀದೇವಿ ಶಯನೋತ್ಸವಕ್ಕೆ ಭಕ್ತರು ಚೆಂಡು ಮಲ್ಲಿಗೆ ಹೂವನ್ನು ಸಮರ್ಪಿಸಿ ತಮ್ಮ ಸೇವೆಯನ್ನು ಸಲ್ಲಿಸಿದರು.
ಸುಮಾರು 70 ಸಾವಿರಕ್ಕೂ ಅಧಿಕ ಭಕ್ತರು ಹೂವಿನ ಸೇವೆ ನೆರವೇರಿಸಿದರು. ಈ ಸೇವೆಯು ಪ್ರತಿಯೊಬ್ಬ ಭಕ್ತರ ನೆಮ್ಮದಿಗಾಗಿ ದೇವಿಗೆ ಹೂ ಸಮರ್ಪಿಸುವುದು ಅನಾದಿಕಾದಿಂದಲೂ ವಾಡಿಕೆಯ ರೂಪದಲ್ಲಿ ನಡೆದು ಬಂದಿದೆ. ಮಾಗಣೆಯ 32 ಗ್ರಾಮಗಳಿಗೂ ವ್ಯಾಪ್ತಿಯ ಜನರು ಜಾತಿ ಮತಗಳ ಅಂತರವಿಲ್ಲದೆ ಸೇವೆಸಲ್ಲಿಸುವುದು ವಿಶೇಷ.
ತಡರಾತ್ರಿಯವರೆಗೂ ಸ್ವೀಕರಿಸಿದ ಮಲ್ಲಿಗೆ ಹೂವನ್ನು ದೇವಿಯ ಗರ್ಭ ಗುಡಿಯೊಳಗೆ ಹರಡಿ ಬಿಡಿಸಲಾಗು ವುದು. ಅನಂತರ ಕವಾಟ ಬಂಧನ ಶಯನೋತ್ಸವ ನಡೆಯುತ್ತದೆ. ಬುಧವಾರ ರಥೋತ್ಸವದಂದು ಬೆಳಿಗ್ಗೆ ಕವಾಟೋದ್ಘಾಟನೆ ಕಾರ್ಯಕ್ರಮ ವಿಶೇಷ ಪೂಜೆಯೊಂದಿಗೆ ನಡೆದು ಸ್ವೀಕರಿಸಿದ ಮಲ್ಲಿಗೆಯನ್ನು ಪ್ರಸಾದ ರೂಪದಲ್ಲಿ ಸಮರ್ಪಿಸಿದವರಿಗೆ ಅಲ್ಲದೆ ಇತರ ಭಕ್ತರಿಗೂ ವಿತರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.