ಜಲ ಸಾಕ್ಷರರಾಗದಿದ್ದಲ್ಲಿ ಉಳಿವಿಲ್ಲ: ಆನಂದ್
ಸಂಚಾರಿ ನ್ಯಾಯಾಲಯ
Team Udayavani, Mar 31, 2019, 3:15 PM IST
ಸಂಚಾರಿ ಜನತ ನ್ಯಾಯಾಲಯಕ್ಕೆ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ಹಸುರು ನಿಶಾನೆ ತೋರಿ ಚಾಲನೆ ನೀಡಿದರು.
ಬೆಳ್ತಂಗಡಿ : ಮಳೆ ಪ್ರಮಾಣ ಈ ವರ್ಷ ಸಾಕಷ್ಟು ಹೆಚ್ಚಿದ್ದರೂ ಮಾರ್ಚ್ ಅಂತ್ಯದಲ್ಲೇ ಬರಗಾಲದ ಛಾಯೆ ಆವರಿಸಿದ್ದು, ಜನರು ಜಲಸಾಕ್ಷರರಾಗದಿದ್ದಲ್ಲಿ ಪ್ರಕೃತಿಗೆ ಉಳಿವಿಲ್ಲ ಎಂದು ಬೆಳ್ತಂಗಡಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಕೆ.ಎಂ. ಆನಂದ್ ಹೇಳಿದರು.
ಬೆಳ್ತಂಗಡಿ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ಸಂಚಾರಿ ಜನತ ನ್ಯಾಯಾಲಯದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಸೇವಿಯರ್ ಪಾಲೇಲಿ ಸಂಚಾರಿ ಜನತ ನ್ಯಾಯಾಲಯದ ಅಭಿಯಾನಕ್ಕೆ ಹಸುರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ, ತಾಲೂಕಿನ ಎಲ್ಲ ಜನರು ಸಂಚಾರಿ ಜನತಾ ನ್ಯಾಯಾಲಯದ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸಿದರು. ನೀರಿನ ಮಹತ್ವ ಹಾಗೂ ಜಲ ಸಂರಕ್ಷಣೆಗ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ನ್ಯಾಯವಾದಿ ಶಿವಯ್ಯ ಎಸ್.ಎಲ್. ಮಾಹಿತಿ ನೀಡಿದರು.
ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಮನೋಹರ್ ಕುಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಸರಕಾರಿ ಸಹಾಯಕ ಅಭಿಯೋಜಕ ಕಿರಣ್ ಕುಮಾರ್ ಜಿ.ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ. ಭಾಗವಹಿಸಿದ್ದರು.
ಹನಿ ನೀರೂ ಅತ್ಯಮೂಲ್ಯ
ಜೀವಜಲ ಉಳಿವಿನಿಡೆಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಬೇಕಾಗಿದ್ದು, ಹನಿ ನೀರೂ ಅತ್ಯಮೂಲ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ದಿನ ಬಂದಿದೆ. ನೀರಿನ ಕ್ಷಾಮವನ್ನು ತಡೆಗಟ್ಟುವಲ್ಲಿ ಮಹತ್ತರ ಜವಾಬ್ದಾರಿ ವಹಿಸಬೇಕು.
– ಕೆ.ಎಂ. ಆನಂದ್
ಬೆಳ್ತಂಗಡಿ ಪ್ರಧಾನ ಸಿವಿಲ್ ಮತ್ತು
ಜೆ.ಎಂ.ಎಫ್.ಸಿ. ನ್ಯಾಯಾಧೀಶರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.