ಬಿಲ್ ಬಾಕಿ: ಅರಣ್ಯ ಇಲಾಖೆ ವಿದ್ಯುತ್ ಸಂಪರ್ಕ ಕಡಿತ
ಮೂರು ವರ್ಷಗಳಿಂದ 45,800 ರೂ. ಬಾಕಿ
Team Udayavani, Apr 1, 2019, 12:14 PM IST
ಅರಣ್ಯ ಇಲಾಖೆ ಕಚೇರಿ
ಉಪ್ಪಿನಂಗಡಿ : ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿಯ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ 60 ಗಂಟೆಗಳ ಕಾಲ ನಿರಂತರ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೆಸ್ಕಾಂ ಬಿಸಿ ಮುಟ್ಟಿಸಿದೆ.
ಮೂರು ವರ್ಷಗಳಿಂದಲೂ ವಿದ್ಯುತ್ ಬಿಲ್ ಬಾಕಿ ಇರಿಸುತ್ತಲೇ ಬಂದಿದ್ದು, 45,800 ರೂ. ಆಗಿತುಈ ಹಿನ್ನೆಲೆಯಲ್ಲಿ ಮೆಸ್ಕಾಂ ಹಲವು ಬಾರಿ ನೋಟಿಸ್ ನೀಡಿದರೂ ಪಾವತಿಸದ ಹಿನ್ನೆಲೆಯಲ್ಲಿ ಕೊನೆಯ ನೋಟಿಸ್ ನೀಡಿದ ಮೆಸ್ಕಾಂ, ಶುಕ್ರವಾರ ಮುಂಜಾನೆಯೇ ವಿದ್ಯುತ್ ಕಡಿತಗೊಳಿಸಿತು. ಇದರಿಂದಾಗಿ ಅರಣ್ಯ ಇಲಾಖೆ ಕಚೇರಿಯ ಕಂಪ್ಯೂಟರ್ಗಳು ಸ್ತಬ್ಧವಾದವು. ಬಿಸಿಲಿನ ಕಾಲದಲ್ಲಿ ಫ್ಯಾನ್ ಗಳೂ ತಿರುಗದತಾಯಿತು. ತುರ್ತು ದಾಖಲೆಗಳಿಗಾಗಿ ಸೈಬರ್ ಕೇಂದ್ರದ ಮೊರೆಹೋದರು. ಈ ಹಿಂದೆ ಮೆಸ್ಕಾಂ ನಿಗದಿಪಡಿಸಿದ್ದ ಹೆಚ್ಚುವರಿ ಬಿಲ್ ಬರುತ್ತಿದ್ದು, ಅದನ್ನು ಪಾವತಿಸುವುದು ಅರಣ್ಯ ಇಲಾಖೆಗೆ ಹೊರೆಯಾಗುತ್ತಿದೆ.
ಅನಿವಾರ್ಯವಾಯಿತು
ಅರಣ್ಯ ಇಲಾಖೆ ಕಚೇರಿಗೆ ಮೂರು ನೋಟಿಸ್ ನೀಡಲಾಗಿತ್ತು. ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದರ ಬೆನ್ನಲ್ಲೇ ಶುಕ್ರವಾರ ಖುದ್ದು ವಲಯ ಅರಣ್ಯಾಧಿಕಾರಿ ಕಚೇರಿ ಎಂಬುದು ಸರಕಾರದ ಅಂಗ ಎಂಬ ಇರಾದೆಯಲ್ಲಿ ಮನವರಿಕೆ ಮಾಡಲು ತೆರಲಿದ್ದೆ. ಆದರೆ ಕಚೇರಿಯಲ್ಲಿ ಯಾರೊಬ್ಬರೂ ನಮ್ಮನ್ನು ಮಾತನಾಡಿಸುವ ಪ್ರಯತ್ನ ಮಾಡಿಲ್ಲ. ಆದರೂ ಸಿಬಂದಿ ಜತೆಗೆ ತೆರಳಿ, ಬಿಲ್ ಬಾಕಿ ಇದೆ. ಅರಣ್ಯಾಧಿಕಾರಿಯನ್ನು ಕಂಡು ಮಾತನಾಡುತ್ತೇನೆ ಎಂದರೂ ಯಾರೂ ಲೆಕ್ಕಿಸದ ಕಾರಣ, ಸಂಪರ್ಕ ಕಡಿತಗೊಳಿಸಬೇಕಾದ ಅನಿವಾರ್ಯತೆ ಒದಗಿಬಂತು ಎಂದು ಮೆಸ್ಕಾಂ ಸಹಾಯಕ ಎಂಜಿನಿಯರ್ ರಾಜೇಶ್ ವಿವರಿಸಿದರು.
ಸರಿಯಾಗಿ ಸ್ಪಂದನೆ ಮಾಡಿಲ್ಲ
ಬಿಲ್ ಬಾಕಿ ಇರಿಸಿರುವ ಕುರಿತು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿಸಿ, ಹಿಂಬರಹದ ಮೂಲಕ ಪತ್ರ ನೀಡುವಂತೆ ಸೂಚಿಸಿದ್ದೆ. ಆದರೆ ಇದಕ್ಕೆ ಸರಿಯಾದ ಸ್ಪಂದನೆ ಈ ತನಕ ಬಂದಿಲ್ಲ. ಬಿಲ್ಲು ಬಾಕಿ ಇರಿಸಿ ಸಂಪರ್ಕ ಒದಗಿಸಿದರೆ ಮೆಸ್ಕಾಂ ಅಧಿಕಾರಿಗಳು ಪ್ರಶ್ನಿಸುವ ಸಾಧ್ಯತೆ ಇದ್ದು, ಈ ಕ್ರಮ ಜರುಗಿಸಲಾಗಿದೆ.
– ಶಿಲ್ಪಾ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.