Udupi: ಅವ್ಯವಸ್ಥೆಗಳ ತಾಣ ಉಡುಪಿ ರೈಲು ನಿಲ್ದಾಣ

ಕರಾವಳಿಯ ಪ್ರಮುಖ ರೈಲ್ವೇ ಸ್ಟೇಷನ್‌ನಲ್ಲೇ ಸೌಲಭ್ಯಗಳ ಕೊರತೆ ಪ್ರಯಾಣಿರಿಗೆ ಭಾರೀ ಸಂಕಷ್ಟ

Team Udayavani, Jul 30, 2024, 4:56 PM IST

Screenshot (32)

ಉಡುಪಿ: ಕಳೆದ ಹತ್ತು ವರ್ಷಗಳಲ್ಲಿ ದೇಶದ ರೈಲ್ವೇ ವಲಯದಲ್ಲಿ ಕ್ರಾಂತಿಕಾರಿ ಬದ ಲಾವಣೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಲವು ಮಂತ್ರಿಗಳು ದೂರದೃಷ್ಟಿಯ ಯೋಜನೆಗಳ ಮೂಲಕ ರೈಲು ವ್ಯವಸ್ಥೆಯನ್ನು ಜನಪರವಾಗಿಸಿ ದ್ದಾರೆ. ರೈಲು ನಿಲ್ದಾಣಗಳ ಆಧುನೀಕರಣ, ಹೊಸ ಮಾದರಿಯ ವೇಗದ ರೈಲುಗಳ ಆರಂಭ, ಸಮಯ ಪಾಲನೆ, ಸ್ವತ್ಛತೆ ಎಲ್ಲದರಲ್ಲೂ ರೈಲ್ವೇ ಗಮನ ಸೆಳೆಯುತ್ತಿದೆ. ಬೇರೆ ಕಡೆ ಏನೇ ಆದರೂ ಕೃಷ್ಣ ನಗರಿ ಉಡುಪಿಯಲ್ಲಿರುವ ಇಂದ್ರಾಳಿ ರೈಲು ನಿಲ್ದಾಣ ಮಾತ್ರ ಸ್ವಲ್ಪವೂ ಕದಲದೆ ಕುಳಿತಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಹೇಳಿ ಕೇಳಿ ಉಡುಪಿ ರೈಲು ನಿಲ್ದಾಣ ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶ. ಕೊಂಕಣ ರೈಲ್ವೇ ನಿಗಮಕ್ಕೆ ಒಳಪಟ್ಟ ನಿಲ್ದಾಣಕ್ಕೆ 31 ವರ್ಷಗಳ ಇತಿಹಾಸವಿದೆ. ಕೃಷ್ಣ ಮಠ ಸೇರಿದಂತೆ ಕರಾವಳಿಯ ನಾನಾ ದೇಗುಲಗಳಿಗೆ ಬರುವವರಿಗೆ ಉಡುಪಿ ರೈಲು ನಿಲ್ದಾಣವೇ ಇಳಿದಾಣ. ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗೆ ಹೆಸರಾದ ಮಣಿಪಾಲಕ್ಕೆ ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಮತ್ತು ಇತರರು ರೈಲಿನ ಮೂಲಕ ಬರುತ್ತಾರೆ. ಅವರು ರೈಲು ಹತ್ತುವುದು ಮತ್ತು ಇಳಿ ಯುವುದು ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ.

ಎಲ್ಲಕ್ಕಿಂತ ಹೆಚ್ಚಾಗಿ ಉಡುಪಿ ಭಾಗದ ಪ್ರತಿ ಮನೆಗೂ ಮುಂಬಯಿ ಜತೆಗೆ ಸಂಪರ್ಕ ವಿದೆ. ಇಲ್ಲಿನ ಸಾವಿರಾರು ಮಂದಿ ಮುಂಬಯಿಯಲ್ಲಿ ಉದ್ಯಮ, ವ್ಯವಹಾರ ನಡೆಸು ತ್ತಿದ್ದಾರೆ. ಅವರೆಲ್ಲರ ಓಡಾಟಕ್ಕೆ ರೈಲೇ ಜೀವನಾಡಿ, ಇಂದ್ರಾಳಿ ನಿಲ್ದಾಣವೇ ಪ್ರಮುಖ ಕೊಂಡಿ.

ಕರಾವಳಿಯವರೇ ಆದ ಜಾರ್ಜ್‌ ಫೆರ್ನಾಂಡಿಸ್‌ ಅವರ ಪ್ರಯತ್ನದ ಫ‌ಲವಾಗಿ ಮಂಗ ಳೂರಿನಿಂದ ಮುಂಬಯಿಗೆ ಕೊಂಕಣ ರೈಲು ಆರಂಭ ವಾಗಿತ್ತು. ಈ ಮಾರ್ಗದಲ್ಲಿ ಮೊದಲ ರೈಲು ಓಡಿದ್ದೇ ಮಂಗಳೂರು ಮತ್ತು ಉಡುಪಿ ಮಧ್ಯೆ. ಅದೂ ಇದೇ ಇಂದ್ರಾಳಿ ನಿಲ್ದಾಣದಿಂದ. ಇಷ್ಟು ದೊಡ್ಡ ಹಿನ್ನೆಲೆ ಇರುವ ಇಂದ್ರಾಳಿ ರೈಲ್ವೇ ಸ್ಟೇಷನ್‌ ಕಾಲಕ್ಕೆ ತಕ್ಕಂತೆ ಬದಲಾಗದೆ ಹಿಂದೆ ಬಿದ್ದಿದೆ.

ಒಂದು ದಿನದಲ್ಲಿ ಕನಿಷ್ಠ 5,000ಕ್ಕೂ ಅಧಿಕ ಪ್ರಯಾಣಿಕರು ಹತ್ತಿಳಿಯುವ ಈ ನಿಲ್ದಾಣದ ಮೂಲ ಸೌಕರ್ಯ ವ್ಯವಸ್ಥೆಯನ್ನು ಗಮನಿಸಿದರೆ ನಿಜಕ್ಕೂ ಬೇಸರವಾ ಗುತ್ತದೆ. ಸ್ವತ್ಛತೆ ಇಲ್ಲದಿರುವುದು, ಮಳೆಗೆ ರಕ್ಷಣೆ ಇಲ್ಲ, ಪ್ಲ್ರಾಟ್‌  ಫಾರ್ಮ್ ಬದಲಿಸಲು ಸರಿಯಾದ ಸೌಕರ್ಯವಿಲ್ಲ, ರಕ್ಷಣೆಯ ಸುಳಿವಿಲ್ಲ.

ದಿನಕ್ಕೆ 75 ರೈಲು ಸಂಚಾರ, 5,000 ಜನರ ಓಡಾಟ

ಇಂದ್ರಾಳಿ ರೈಲು ನಿಲ್ದಾಣದ ಮೂಲಕ ದಿನಕ್ಕೆ 75 ಪ್ರಯಾಣಿಕ ರೈಲುಗಳು ಓಡಾಡುತ್ತವೆ. ಗೂಡ್ಸ್‌ ರೈಲು ಪ್ರತ್ಯೇಕ.
ಒಂದೊಂದು ರೈಲಿನಲ್ಲಿ 75 ಜನ ಹತ್ತಿಳಿಯುತ್ತಾರೆ ಎಂಬ ಲೆಕ್ಕ ಹಿಡಿದರೂ ಕನಿಷ್ಠ ದಿನಕ್ಕೆ 5,000 ಜನ ಓಡಾಡುತ್ತಾರೆ.
ಕರಾವಳಿ ಹಾಗೂ ಮುಂಬಯಿಯನ್ನು ಸಂಪರ್ಕಿಸುವ ಕೊಂಕಣ ರೈಲ್ವೇಯ ಮಹತ್ವದ ನಿಲ್ದಾಣವಿದು.
ರತ್ನಗಿರಿ ಮತ್ತು ಮಡಗಾಂವ್‌ ಹೊರತುಪಡಿಸಿ ಅತೀ ಹೆಚ್ಚು ಪ್ರಯಾಣಿಕರು ಮತ್ತು ವಾಣಿಜ್ಯ ವಹಿವಾಟು ಇರುವ ನಿಲ್ದಾಣ.
ಉಡುಪಿ, ಮಣಿಪಾಲದಂಥ ಧಾರ್ಮಿಕ, ಶೈಕ್ಷಣಿಕ ಕೇಂದ್ರಕ್ಕೆ ದೇಶಾದ್ಯಂತದಿಂದ ಜನರು, ವಿದ್ಯಾರ್ಥಿಗಳ ಸಂಪರ್ಕ

ಉದ್ಘಾಟನೆ ದಿನ ಮಾತ್ರ ಸೇವೆ ನೀಡಿದ ಎಸ್ಕಲೇಟರ್‌!

2016ರಲ್ಲಿ ಅಂದಿನ ಅಂದಿನ ರೈಲ್ವೇ ಸಚಿವ ಸುರೇಶ್‌ ಪ್ರಭು ಅವರು ಇಂದ್ರಾಳಿ ಸ್ಟೇಷನ್‌ನಲ್ಲಿ ಎಸ್ಕಲೇಟರ್‌ ಉದ್ಘಾಟನೆ ಮಾಡಿದ್ದರು. ಅದು ಕೆಲಸ ಮಾಡಿದ್ದು ಅದೊಂದು ದಿನ ಮಾತ್ರ! ವಾಹನಗಳು ರೈಲ್ವೇ ನಿಲ್ದಾಣದ ಒಳಭಾಗದವರೆಗೂ ಬರು ತ್ತವೆ. ಹಾಗಿರುವಾಗ ಎಸ್ಕಲೇಟರ್‌ ಯಾಕೆ ಬೇಕು ಎನ್ನುವುದು ಇನ್ನೂ ಯಾರಿಗೂ ತಿಳಿದಿಲ್ಲ. ಈಗ ಇಲ್ಲಿ ನೋ ಎಂಟ್ರಿ ಫ‌ಲಕ ಅಳವಡಿಕೆ ಮಾಡಲಾಗಿದೆ. ಇದಕ್ಕಾಗಿ ಮಾಡಿರುವ ಎಲ್ಲ ವ್ಯವಸ್ಥೆಗಳೂ ಈಗ ತುಕ್ಕುಹಿಡಿದಿದ್ದು, ಬೀದಿನಾಯಿಗಳ ವಾಸಸ್ಥಾನವಾಗಿ ಪರಿಣಮಿಸಿದೆ.

ಪ್ರಮುಖ ಸಮಸ್ಯೆಗಳು ಏನೇನು?

ಸ್ವತ್ಛತೆ ಎಂಬುದು ಇಲ್ಲಿ ಕಾಣುವುದಿಲ್ಲ.ಪ್ರಯಾಣಿಕರಿಗೆ ನರಕ ದರ್ಶನ.

ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳಿಲ್ಲ.

ಪ್ಲ್ರಾಟ್‌ಫಾರಂನ ಹಲವು ಕಡೆ ಶೆಲ್ಟರ್‌ಗಳೇ ಇಲ್ಲ.ಇರುವ ಕೆಲವು ಶೆಲ್ಟರ್‌ಗಳು ತೂತು ಬಿದ್ದಿವೆ.

ರೈಲು ಹತ್ತಲು ಹೋಗುವಾಗ, ರೈಲು ಇಳಿಯುವಾಗ ಮಳೆ ಬಂದರೆ ನೆನೆಯಬೇಕು.

ಒಂದು ಪ್ಲ್ರಾಟ್‌ ಫಾರಂನಿಂದ ಇನ್ನೊಂದಕ್ಕೆ ಹೋಗಲು ವ್ಯವಸ್ಥೆಗಳು ಸೂಕ್ತವಾಗಿಲ್ಲ.

ಸುರಕ್ಷತೆ ವಿಚಾರದಲ್ಲಿ ರೈಲು ನಿಲ್ದಾಣ ತುಂಬಾ ಹಿಂದೆ ಬಿದ್ದಿದೆ.

ಶೌಚಾಲಯಗಳು ಹೆಚ್ಚಿಲ್ಲ, ಇರುವುದು ಕೂಡಾ ಸ್ವತ್ಛವಿಲ್ಲ

ರೈಲು ನಿಲ್ದಾಣದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲ.

ಕುಡಿಯಲು ಒಂದೇ ಕಡೆ ಫಿಲ್ಟರ್‌ ನೀರಿದೆ. ಆದರೆ ಎರಡೂ ಲೋಟ ಮಾಯ!

ವರದಿ – ಪುನೀತ್‌ ಸಾಲ್ಯಾನ್‌

ಚಿತ್ರ – ಆಸ್ಟ್ರೋಮೋಹನ್‌

ಟಾಪ್ ನ್ಯೂಸ್

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

1-eewqe

‘Wrestling Champions Super League’: ಅನುಮತಿ ನೀಡಲು ನಕಾರ

1-gread

Manipur ಸಚಿವ ಖಶಿಮ್‌ ಮನೆ ಮೇಲೆ ಗ್ರೆನೇಡ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.