ಕಿಞ್ಞಣ್ಣ ರೈ 106ನೇ ಜನ್ಮದಿನಾಚರಣೆ : ಕಯ್ಯಾರರ ಕುಟುಂಬಕ್ಕೆ ಕೋವಿಡ್ ಕಿಟ್ ವಿತರಣೆ
Team Udayavani, Jun 8, 2021, 4:20 PM IST
ಬದಿಯಡ್ಕ : ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಕಲ್ಕೂರ ಪ್ರತಿಷ್ಠಾನ ಮಂಗಳೂರು ಹಾಗೂ ಕೈಯಾರರ ಕುಟುಂಬದ ಸಂಯುಕ್ತಾಶ್ರಯದಲ್ಲಿ ಕೈಯಾರರ ಕವಿತಾ ಕುಟೀರದಲ್ಲಿ ದಿವಂಗತ ಡಾಕ್ಟರ್ ನಾಡೋಜ ಕೈಯಾರ ರವರ 106ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಗೂಗಲ್ ಮೀಟ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡದ ಕಲಿ, ಮಹಾಕವಿ, ಕಾಸರಗೋಡಿನ ಗಟ್ಟಿದನಿ, ಶತಾಯಿಷಿ ಕಯ್ಯಾರ ಕಿಞ್ಞಣ್ಣ ರೈ ಯವರು ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಮಾತ್ರವಲ್ಲದೆ ಭೂಮಿಯ ಒಡಲಲ್ಲೂ ನಲ್ಮೆಯ ಬೀಜ ಬಿತ್ತಿ ಪರಿಶ್ರಮದಿಂದಲೇ ಪ್ರತಿಫಲದ ಬೆಳಕ ಕಂಡವರು. ರೈತನಾಗಿ, ಸಾಹಿತಿಯಾಗಿ, ಪಂಚಾಯತ್ ಅಧ್ಯಕ್ಷರಾಗಿ, ಭಾಷೆಯ ಮೇಲಿನ ಅತೀವ ಪ್ರೀತಿ ಹಾಗೂ ಭಕ್ತಿಯಿಂದ ಭಾಷೆಯ ಉಳಿವಿಗಾಗಿ ಹೋರಾಡಿದ ಧೀಮಂತ ಹೋರಾಟಗಾರ ಎಂದು ಹೇಳಿದರು. ಮಾತ್ರವಲ್ಲದೆ ಪ್ರತಿ ಕನ್ನಡ ಶಾಲೆಗಳ ಶಿಕ್ಷಕರೂ ಕಯ್ಯಾರರನ್ನು ಮಕ್ಕಳಿಗೆ ಪರಿಚಯಿಸಿ ಅವರು ನಡೆದ ಹಾದಿಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಗೂಗಲ್ ಮೀಟ್ ಮೂಲಕ ಮಾತನಾಡಿ ಕಯ್ಯಾರರು ದೇಶ ಕಂಡ ಮಹಾನ್ ಚೇತನ ಅವರ ಹುಟ್ಟುಹಬ್ಬ ಆಚರಿಸುವುದು ಮತ್ತು ಅವರ ದಾಖಲಾತಿಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಅಲ್ಲದೆ ಅವರು ಪತ್ರಕರ್ತರಾಗಿದ್ದುಕೊಂಡು ಅವರ ಕೆಲಸಗಳು ನಮ್ಮಂತ ಪತ್ರಕರ್ತರಿಗೆ ಹೆಮ್ಮೆ ತರುವಂತದ್ದು ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷರಾದ ಎ ಆರ್ ಸುಬ್ಬಯ್ಯ ಕಟ್ಟೆ ಅಧ್ಯಕ್ಷತೆ ವಹಿಸಿದರು. ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ಪ್ರೊಫೆಸರ್ ಶ್ರೀನಾಥ್ ಕೈಯಾರರ ಜೀವನಗಾಥೆಯನ್ನು ನೆನಪಿಸಿದರು. ಕೈಯಾರರ ನೂರ ಆರನೇಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾಹಿನ್ ಕೇಳೋಟ್ ( ಬದಿಯಡ್ಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು) ಕುಂಬ್ಡಾಜೆ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಗೋಸಡ ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗ ಯಕ್ಷಗುರು ಜಯರಾಮ್ ಪಾಟಾಳಿ ಪಡುಮಲೆ.ಮಮ್ಮುಞ ಪಚ್ಚಂಬಲ್ಲ ಮುಂತಾದವರು ಶುಭಾಶಂಸನೆಗೈದರು ಕೋರೋನ ಈ ಕಾಲದಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ವಸಂತ ಬಾರಡ್ಕ ಜೋತ್ಸ್ನಾ ಕಡಂದೇಲು ಚಿತ್ತರಂಜನ್ ಪ್ರದೀಪ್ ಕಡಂಬಾರ್ ಮುಂತಾದವರು ಕಯ್ಯಾರರ ಆಯ್ದ ಕವನಗಳನ್ನು ಹಾಡಿದರು
ಕಾರ್ಯಕ್ರಮದಲ್ಲಿ ಕಯ್ಯಾರರ ಪುತ್ರ ಪ್ರಸನ್ನಕುಮಾರ ಸ್ವಾಗತಿಸಿ ಕೃಷ್ಣ ಪ್ರದೀಪ ಆರತಿರೈ ಧನ್ಯವಾದ ಸಮರ್ಪಿಸಿದರು.ನಿರಂಜನ ರೈ ಪೆರಡಾಲ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕೈಯಾರರ ಕುಟುಂಬದವರಿಂದ ಕೋವಿಡ್ ಕಿಟ್ ವಿತರಿಸಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.