1.20 ಕೋ.ರೂ. ಕಾಳಧನ, 1.50 ಕಿಲೋ ಚಿನ್ನ ಸಹಿತ ಇಬ್ಬರ ಬಂಧನ
Team Udayavani, Oct 2, 2018, 10:42 AM IST
ಕಾಸರಗೋಡು: ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 1.20 ಕೋ.ರೂ. ಕಾಳಧನ ಮತ್ತು ಒಂದೂವರೆ ಕಿಲೋ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದೆ. ಕಾರು ಚಾಲಕ ತಳಂಗರೆ ಕುನ್ನಿಲ್ ನಿವಾಸಿ ಬಶೀರ್(60) ಮತ್ತು ಮಹಾರಾಷ್ಟ್ರ ಸಾಂಗ್ಲಿ ನಿವಾಸಿ ರಾಮಚಂದ್ರ ಪಾಟೀಲ್(27) ಬಂಧಿತರು. ಇನ್ನೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕಳ್ಳಸಾಗಾಟದ ಬಗ್ಗೆ ಕಸ್ಟಂಸ್ ವಿಭಾಗದ ಕಣ್ಣೂರು ಡಿವಿಷನಲ್ ಅಸಿಸ್ಟೆಂಟ್ ಕಮಿಷನರ್ ಪ್ರದೀಪ್ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಅವರ ನಿರ್ದೇಶ ಪ್ರಕಾರ ಕಾಸರಗೋಡು ಡಿವಿಷನ್ ಸೂಪರಿಂಟೆಂಡೆಂಟ್ ಪಿ.ಪಿ.ರಾಜೀವ್ ಮತ್ತು ಕಣ್ಣೂರು ಡಿವಿಷನ್ ಸೂಪರಿಂಟೆಂಡೆಂಟ್ ಸುಕುಮಾರನ್ ನೇತೃತ್ವದಲ್ಲಿ ಕಸ್ಟಂಸ್ ತಂಡ ಮಂಜೇಶ್ವರದಲ್ಲಿ ವಾಹನ ತಪಾಸಣೆ ನಡೆಸಿತ್ತು.
ತಪಾಸಣೆ ಸಂದರ್ಭ ಮಂಗಳೂರಿನಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಅದು ಪರಾರಿಯಾಗಲು ಮುಂದಾಯಿತು. ಕಸ್ಟಂಸ್ ತಂಡ ಅದನ್ನು ಬೆನ್ನಟ್ಟಿ ಉಪ್ಪಳದಿಂದ ವಶಕ್ಕೆ ಪಡೆಯಿತು. ಚಾಲಕ ತಳಂಗರೆಯ ಬಶೀರ್‌ನ ವಿಚಾರಣೆಯಿಂದ ಸಿಕ್ಕಿದ ಮಾಹಿತಿಯಂತೆ ಕಾಸರಗೋಡು ಕೋಟೆ ರಸ್ತೆಯ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿ ಅಲ್ಲಿ ಬಚ್ಚಿಡಲಾಗಿದ್ದ ಒಂದೂವರೆ ಕಿಲೋ ಚಿನ್ನದ ಬಿಲ್ಲೆಯನ್ನು ವಶಪಡಿಸಲಾಯಿತು. ಇಲ್ಲಿ ಸಾಂಗ್ಲಿ ನಿವಾಸಿ ರಾಮಚಂದ್ರ ಪಾಟೀಲ್ ಮತ್ತು ಕಾರ್ಮಿಕ ರವಿ ಇದ್ದರು. ಅವರಿಬ್ಬರನ್ನು ಕಸ್ಟಂಸ್ ತಂಡ ವಶಕ್ಕೆ ಪಡೆದಿದ್ದು, ಈ ಪೈಕಿ ರಾಮಚಂದ್ರ ಪಾಟೀಲ್‌ನನ್ನು ಬಂಧಿಸಲಾಗಿದೆ.
ಸೀಟಿನಲ್ಲಿ ಬಚ್ಚಿಡಲಾಗಿತ್ತು
ಕಾರನ್ನು ತೀವ್ರ ತಪಾಸಣೆ ಮಾಡಿದಾಗ ಅದರ ಹಿಂದಿನ ಸೀಟಿನ ಒರಗುವ ಭಾಗದೊಳಗೆ ಗುಪ್ತವಾಗಿ ನಿರ್ಮಿಸಲಾದ ಕವಾಟಿನೊಳಗೆ ಬಚ್ಚಿಡಲಾದ 1.20 ಕೋ.ರೂ. ಕಾಳಧನ ಪತ್ತೆಯಾಯಿತು. ವಶಪಡಿಸಿಕೊಂಡ ಚಿನ್ನದ ಮೌಲ್ಯ 50 ಲ.ರೂ. ಎಂದು ಅಂದಾಜಿಸಲಾಗಿದೆ.
ನಮಗೆ ಗೊತ್ತಿಲ್ಲ
ಆದರೆ ಕಾರಿನೊಳಗೆ ಬಚ್ಚಿಡಲಾಗಿದ್ದ ಕಾಳಧನದ ಬಗ್ಗೆ ತನಗೇನೂ ತಿಳಿದಿಲ್ಲವೆಂದೂ, 15,000 ರೂ. ಬಾಡಿಗೆ ನೀಡಿ ಆ ಕಾರನ್ನು ಮಂಗಳೂರಿನಿಂದ ಕಾಸರಗೋಡಿಗೆ ಸಾಗಿಸಲಷ್ಟೇ ತಮಗೆ ಓರ್ವರು ನಿರ್ದೇಶ ನೀಡಿದ್ದಾರೆಂದು ಬಶೀರ್ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ರಾಮಚಂದ್ರ ಪಾಟೀಲ್ ಚಿನ್ನ ಕಳ್ಳಸಾಗಾಟಗಾರರ ಕೆಲಸಗಾರ ಮಾತ್ರವೇ ಆಗಿರುವುದಾಗಿಯೂ ಸಂಶಯಿಸಲಾಗುತ್ತಿದೆ. ಚಿನ್ನ ಮತ್ತು ಹಣದ ಮಾಲಕ ಮುಂಬಯಿ ನಿವಾಸಿಯಾಗಿದ್ದಾನೆಂಬ ಮಾಹಿತಿ ಅಧಿಕಾರಿಗಳಿಗೆ ಲಭಿಸಿದ್ದು, ಈತನಿಗಾಗಿ ಶೋಧ ನಡೆಸುತ್ತಿದೆ. ಮುಂಬಯಿ, ಮಂಗಳೂರು ಮತ್ತು ಕಾಸರಗೋಡನ್ನು ಕೇಂದ್ರೀಕರಿಸಿ ಕಾರ್ಯವೆಸಗುವ ಚಿನ್ನ ಕಳ್ಳ ಸಾಗಾಟದ ದೊಡ್ಡಜಾಲ ಇದರ ಹಿಂದಿದೆ ಎನ್ನಲಾಗಿದೆ.
ಸೊತ್ತು ಕೊಚ್ಚಿ ಗೋದಾಮಿಗೆ
ಚಿನ್ನ ಮತ್ತು ಹಣವನ್ನು ಕಸ್ಟಂಸ್‌ನ ಕೊಚ್ಚಿ ಘಟಕದ ಗೋದಾಮಿಗೆ ಸಾಗಿಸಲಾಗುವುದು. ಈ ಕುರಿತಾದ ವರದಿಯನ್ನು ಕೋರ್ಟಿಗೆ ಹಾಜರು ಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.