ಮನೆ ಮನೆ ಸೋಲಾರ್: 1.46 ಲಕ್ಷಕ್ಕೂ ಅಧಿಕ ಅರ್ಜಿ
Team Udayavani, Jan 31, 2019, 1:00 AM IST
ಕಾಸರಗೋಡು: ಕೇರಳ ರಾಜ್ಯ ಸರಕಾರದ ಸೌರ ಯೋಜನೆ ಪ್ರಕಾರ ಮನೆಗಳ ಮೇಲೆ ಸೌರ ವಿದ್ಯುತ್ ಪ್ಯಾನಲ್‌ಗಳನ್ನು ಅಳವಡಿಸುವುದಕ್ಕಾಗಿ ನೋಂದಾವಣೆ ನಡೆಸಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಅದರಂತೆ ಜ. 25ರ ವರೆಗೆ 1,46,348 ಮಂದಿಗೆ ಮನೆ ಮನೆ ಸೋಲಾರ್ ಯೋಜನೆಗಾಗಿ ಆನ್‌ಲೈನ್ ಮೂಲಕ ನೋಂದಣಿ ನಡೆಸಿದ್ದಾರೆ.
ಪರಂಪರಾಗತ ವಿದ್ಯುತ್ ನೀತಿಯಂತೆ ಸೌರ ವಿದ್ಯುತ್ ಸ್ಥಾಪನಾ ಸಾಮರ್ಥ್ಯವನ್ನು ಈಗಿರುವ 110 ಮೆಗಾವ್ಯಾಟ್ನಿಂದ 1,000 ಮೆ.ವ್ಯಾಟ್‌ಗೆ ಏರಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 500 ಮೆಗಾವ್ಯಾಟ್ ವಿದ್ಯುತ್‌ನ್ನು ಮನೆಗಳ ಮೇಲ್ಛಾವಣಿಯಲ್ಲಿ ಅಳವಡಿ ಸುವ ಪ್ಯಾನಲ್‌ಗಳ ಮೂಲಕ ಉತ್ಪಾದಿಸಲು ನಿರ್ಧರಿ ಸಲಾಗಿದೆ. ಇದಕ್ಕೆ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸುವ ಅಂತಿಮ ದಿನಾಂಕ ಜನವರಿ 31 ಆಗಿದೆ.
ಮೂರು ಸ್ಕೀಮ್‌ಗಳಾಗಿ ಮನೆಗಳ ಮೇಲ್ಛಾವಣಿ ಯಲ್ಲಿ ಸೌರ ವಿದ್ಯುತ್ ಪ್ಯಾನಲ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು. ಒಂದನೇ ಸ್ಕೀಂ
ಫಲಾನುಭವಿಯ ಮೇಲ್ಛಾವಣಿಯಲ್ಲಿ ಅಥವಾ ಫಲಾನುಭವಿ ನೀಡುವ ಸ್ಥಳದಲ್ಲಿ ಕೆಎಸ್‌ಇಬಿ ಹಾಗೂ ಅನರ್ಟ್ ಸಂಸ್ಥೆಯು ಸೇರಿಕೊಂಡು ಸೋಲಾರ್ ಪ್ಲಾಂಟ್ನ್ನು ಉಚಿತವಾಗಿ ನಿರ್ಮಿಸಿ ನೀಡಲಿವೆ. ಇದರಿಂದ ಲಭಿಸುವ ವಿದ್ಯುತ್‌ನ ಶೇಕಡಾ 10ರಷ್ಟು ಫಲಾನುಭವಿಗಳಿಗೆ ವಿದ್ಯುತ್ ರೂಪದಲ್ಲಿ ಅಥವಾ ಹಣದ ರೂಪದಲ್ಲಿ ನೀಡುವುದು ಒಂದನೇ ಸ್ಕೀಮ್ ಆಗಿದೆ.
ಎರಡನೇ ಸ್ಕೀಂ
ಒಂದು ಸ್ಕೀಮ್‌ನ ಪ್ಲಾಂಟ್‌ನಲ್ಲಿ ಉತ್ಪಾದನೆ ಹಾಗೂ ಉತ್ಪಾದಿಸಿದ ಎಲ್ಲ ವಿದ್ಯುತ್‌ನ್ನು ಒಂದು ನಿರ್ದಿಷ್ಟ ದರದಲ್ಲಿ 25 ವರ್ಷಗಳ ಕಾಲ ಫಲಾನು ಭವಿಗೆ ನೀಡುವುದು ಎರಡನೇ ಸ್ಕೀಮ್ ಆಗಿದೆ.
ಮೂರನೇ ಸ್ಕೀಂ
ಮೂರನೇ ಸ್ಕೀಮ್‌ನಲ್ಲಿ ಫಲಾನುಭವಿಯ ಬಂಡವಾಳದಲ್ಲಿ ಮೇಲ್ಛಾವಣಿಯಲ್ಲಿ ಕೆಎಸ್‌ಇಬಿ ಹಾಗೂ ಅನರ್ಟ್ ಸಂಸ್ಥೆಯು ಸೇರಿ ಸೋಲಾರ್ ಪ್ಲಾಂಟ್ ನಿರ್ಮಿಸಿ ನೀಡಲಿವೆ. ಫಲಾನುಭವಿಯ ಅಗತ್ಯದ ವಿದ್ಯುತ್ ಬಳಕೆಗೆ ನೀಡಿಉಳಿದ ವಿದ್ಯುತ್‌ನ್ನು ನಿರ್ದಿಷ್ಟ ದರಕ್ಕೆ ಕೆಎಸ್‌ಇಬಿ ಖರೀದಿಸಲಿದೆ. ಫಲಾನುಭವಿ ಒಪ್ಪಿದಲ್ಲಿ ಪ್ಯಾನಲ್‌ಗಳ ಪರಿಪಾಲನೆಯನ್ನು ಕೆಎಸ್‌ಇಬಿ ನಿರ್ವಹಿಸಲಿದೆ.
2021ರಲ್ಲಿ ಪೂರ್ಣ
2021ರಲ್ಲಿ ಪೂರ್ತಿಗೊಳಿಸುವ ಉದ್ದೇಶದೊಂದಿಗೆ ಆರಂಭಿಸಿದ ಯೋಜನೆಯಲ್ಲಿ ಪ್ಯಾನಲ್‌ಗಳನ್ನು ಅಳವಡಿಸಲಿರುವ ಕಾಮಗಾರಿಗೆ ಗುತ್ತಿಗೆ ನೀಡಲಾಗುವುದು. ಇದಕ್ಕಿರುವ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂಬರುವ ಎಪ್ರಿಲ್‌ನಿಂದ ಪ್ಯಾನಲ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ಯೋಜನೆಯ ಪೂರ್ವಭಾವಿಯಾಗಿ ಅರ್ಜಿ ನೀಡುವ ಪ್ರತಿಯೊಬ್ಬ ಫಲಾನುಭವಿಯ ಮನೆ ಯನ್ನು ಸಂದರ್ಶಿಸಿ ಅಧ್ಯಯನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.