ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
223 ದಿನಗಳ ಕಾಲ ನಿರಂತರ ನಡಿಗೆ
Team Udayavani, Jan 13, 2025, 2:05 AM IST
ಕಾಸರಗೋಡು: ವಿಶ್ವದಲ್ಲಿ ಶಾಂತಿ ನೆಲೆಸಲೆಂಬ ಪ್ರಾರ್ಥನೆಯೊಂದಿಗೆ ಸ್ವಾಮಿ ಅಯ್ಯಪ್ಪನ ಇಬ್ಬರು ಭಕ್ತರು ಉತ್ತರ ಭಾರತದ ಬದರೀನಾಥದಿಂದ ಶಬರಿಮಲೆ ವರೆಗೆ 223 ದಿನಗಳ ಕಾಲ 8000 ಕಿ.ಮೀ ಪಾದಯಾತ್ರೆ ನಡೆಸಿದ್ದಾರೆ. ಶನಿವಾರ ಅವರು ಶಬರಿಮಲೆ ತಲುಪಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
ಕಾಸರಗೋಡು ಜಿಲ್ಲೆಯ ಸನತ್‌ಕುಮಾರ್ ನಾಯಕ್ ಹಾಗೂ ಸಂಪತ್ ಕುಮಾರ್ ಶೆಟ್ಟಿ 2024ರ ಮೇ 26ರಂದು ಬದರೀನಾಥಕ್ಕೆ ತೆರಳಿದ್ದರು. ಜೂ.3ರಿಂದ ಅವರು ಪಾದಯಾತ್ರೆ ಆರಂಭಿಸಿದ್ದರು. ಈ ವೇಳೆ ಸನತ್ ಹಾಗೂ ಸಂಪತ್ ಆದಿ ಶಂಕರಾಚಾರ್ಯರು ಸ್ಥಾಪಿಸಿದ 4 ಮಠಗಳು ಸಹಿತ ಹಲವು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಕೆಲವೆಡೆ ದೇಗುಲ ಪ್ರಸಾದ ಸೇವಿಸಿ, ಇನ್ನು ಕೆಲವೆಡೆ ತಾವೇ ಆಹಾರ ತಯಾರಿಸಿಕೊಂಡಿದ್ದಾರೆ. ಅಯೋಧ್ಯೆ, ಉಜ್ಜೆ„ನಿ, ದ್ವಾರಕ, ಪುರಿ, ರಾಮೇಶ್ವರಂ, ಅಚ್ಚಂ ಕೋವಿಲ್, ಎರಮೇಲಿ ಮೂಲಕ ಅವರು ಅಯ್ಯಪ್ಪನ ಸನ್ನಿಧಾನ ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.