ಅನಧಿಕೃತ ಶಾಲೆಗಳು: ಜಿಲ್ಲೆಯಲ್ಲಿ 96 ವಿದ್ಯಾಲಯಗಳಿಗೆ ಬೀಗ!
Team Udayavani, Mar 26, 2018, 8:50 AM IST
ಕೇರಳದಲ್ಲಿ ಒಟ್ಟು 1,585 ಅನಧಿಕೃತ ಶಾಲೆಗಳಿಗೆ ನೊಟೀಸ್ ಕಳುಹಿಸಲಾಗಿದೆ. ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚುವುದರಿಂದ ತಲೆದೋರುವ ಸಮಸ್ಯೆಗಳ ಕುರಿತು ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಮುಚ್ಚುಗಡೆಗೊಳ್ಳುವ ಶಾಲೆಗಳಿಂದಾಗಿ 3 ಲಕ್ಷದಷ್ಟು ವಿದ್ಯಾರ್ಥಿಗಳ ಹಾಗೂ 2,500ದಷ್ಟು ಅಧ್ಯಾಪಕರ ಮರು ವಿನ್ಯಾಸದ ಬಗ್ಗೆಯೂ ಸಮಾಲೋಚಿಸಲಾಗಿದೆ.
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೇರಳ ರಾಜ್ಯ ಸರಕಾರ, ಸಿಬಿಎಸ್‌ಇ, ಐಸಿಎಸ್‌ಇ ಇವುಗಳ ಅಂಗೀಕಾರ ಇಲ್ಲದೆ ಕಾರ್ಯಾಚರಿಸುತ್ತಿರುವ 96 ಶಾಲೆಗಳ ಅನುಮತಿ ರದ್ದುಗೊಳಿಸಿ ಶಿಕ್ಷಣ ಇಲಾಖೆ ನೊಟೀಸು ಜಾರಿ ಮಾಡಿದೆ. ಕಳೆದ ವರ್ಷ ಇದೇ ರೀತಿ ಅನುಮತಿ ಇಲ್ಲದ 16 ಶಾಲೆಗಳನ್ನು ಜಿಲ್ಲೆಯಲ್ಲಿ ಮುಚ್ಚಲಾಗಿತ್ತು.
ಅಂಗೀಕಾರಗೊಳ್ಳದ ಖಾಸಗಿ ಶಾಲೆಗಳ ಅನುಮತಿ ರದ್ದುಗೊಳಿಸಲು ಶಿಕ್ಷಣ ಇಲಾಖೆಯು ನೊಟೀಸ್ ನೀಡಿದಾಗ ಕೆಲವು ಶಾಲಾ ಆಡಳಿತ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿ ನೊಟೀಸ್‌ಗೆ ತಡೆ ತಂದ ಕಾರಣ 2018ರ ಮಾರ್ಚ್ 31ರ ವರೆಗೆ ಅಂತಹ ಶಾಲೆಗಳನ್ನು ಕಾರ್ಯಾಚರಿಸಲು ನ್ಯಾಯಾಲಯವು ಅನುಮತಿ ಕೊಟ್ಟಿತ್ತು.
ಜಿಲ್ಲೆಯಲ್ಲಿ ಅತ್ಯಧಿಕ ಎಂಬಂತೆ ಕಾಸರಗೋಡು ಶಿಕ್ಷಣ ಉಪಜಿಲ್ಲೆಯಲ್ಲಿ 31ರಷ್ಟು ಅನುಮತಿ ಇಲ್ಲದ ಶಾಲೆಗಳು ಕಾರ್ಯಾಚರಿಸುತ್ತಿವೆ. ಚಿತ್ತಾರಿಕ್ಕಲ್ ಉಪಜಿಲ್ಲೆಯಲ್ಲಿ ಕೇವಲ 5 ಮಾತ್ರ ಅನುಮತಿ ಇಲ್ಲದ ಶಾಲೆಗಳಿವೆ. ಅಲ್ಲದೆ ಮಂಜೇಶ್ವರ ಉಪಜಿಲ್ಲೆಯಲ್ಲಿ 14, ಬೇಕಲದಲ್ಲಿ 11, ಹೊಸದುರ್ಗದಲ್ಲಿ 20, ಚೆರ್ವತ್ತೂರಿನಲ್ಲಿ 8, ಕುಂಬಳೆ ಉಪಜಿಲ್ಲಾ ವ್ಯಾಪ್ತಿಯಲ್ಲಿ 7 ಇಂತಹ ಶಾಲೆಗಳಿವೆ. ಇವುಗಳಲ್ಲಿ ಎಲ್‌ಪಿಯಿಂದ ಹಿಡಿದು ಹೈಸ್ಕೂಲು ತನಕದ ತರಗತಿಗಳು ಕಾರ್ಯವೆಸಗುತ್ತಿವೆ. ಹೆಚ್ಚಿನ ಶಾಲೆಗಳು ಕಿರಿಯ ಪ್ರಾಥಮಿಕ ಶಾಲೆಗಳಾಗಿವೆ. ಇವಲ್ಲದೆ ಎಲ್‌ಕೆಜಿ, ಯುಕೆಜಿ ವಿಭಾಗಗಳ ಶಾಲೆಗಳು ಕೂಡ ಒಳಗೊಂಡಿವೆ. ಸಿಬಿಎಸ್‌ಇ ಅಂಗೀಕಾರದೊಂದಿಗೆ ಕಾರ್ಯಾಚರಿಸುತ್ತಿರುವ 24ರಷ್ಟು ಎಲ್‌ಪಿ, ಯುಪಿ ಶಾಲೆಗಳು ಜಿಲ್ಲೆಯಲ್ಲಿವೆ.
ಬಾಲ ಹಕ್ಕು ಆಯೋಗದ ನಿರ್ದೇಶನದ ಪ್ರಕಾರ ಕೇರಳ ಸರಕಾರ, ಸಿಬಿಎಸ್‌ಇ, ಐಸಿಎಸ್‌ಇ ಇವುಗಳ ಅನುಮತಿ ಇಲ್ಲದ ಶಾಲೆಗಳನ್ನು ಮುಚ್ಚುಗಡೆಗೊಳಿಸಲು ಆದೇಶ ಹೊರಡಿಸಲಾಗಿದ್ದು, ಅದರಂತೆ ಶಿಕ್ಷಣ ಇಲಾಖೆಯು ಮುಂದಡಿಯಿರಿಸಿದೆ. ಜಿಲ್ಲೆಯಲ್ಲಿ 96 ಶಾಲೆಗಳನ್ನು ಮುಚ್ಚುವ ಮೂಲಕ ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಲಿದೆ.
2017-18ನೇ ಶೈಕ್ಷಣಿಕ ವರ್ಷದಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಯಜ್ಞದ ಅಂಗವಾಗಿ ಹಿಂದಿನ ವರ್ಷಕ್ಕಿಂತ 12,198 ಮಂದಿ ಮಕ್ಕಳು ಒಂದನೇ ತರಗತಿಗೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2ರಿಂದ 9ನೇ ತರಗತಿ ವರೆಗೆ ಕೆಳಗಿನ ತರಗತಿಯಿಂದ ತೇರ್ಗಡೆ ಹೊಂದಿದವರಲ್ಲದೆ 1,45,208 ಮಂದಿ ಮಕ್ಕಳು ಅಧಿಕವಾಗಿ ಸೇರಿದ್ದಾರೆ.
ಸರಕಾರಿ ಶಾಲೆಗಳತ್ತ ಹೆಚ್ಚುತ್ತಿರುವ ಆಕರ್ಷಣೆ
ಕೇರಳದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅನುಮತಿ ಇಲ್ಲದ ವಿದ್ಯಾಲಯಗಳು ಮುಚ್ಚುವ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ತರಗತಿಗಳಿಗೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಂಜೇಶ್ವರ ಮತ್ತು ಕಾಸರಗೋಡು ಉಪಜಿಲ್ಲೆಗಳಲ್ಲಿ ಅನುಮತಿ ಇಲ್ಲದೆ ಕಾರ್ಯಾಚರಿಸುತ್ತಿರುವ ಹಾಗೂ ಮುಚ್ಚುವ ಭೀತಿಯಲ್ಲಿರುವ ಖಾಸಗಿ ಶಾಲೆಗಳ ಮಕ್ಕಳನ್ನು ಸೆಳೆಯಲು ಅನುದಾನಿತ ಶಾಲೆಗಳು ಪೈಪೋಟಿ ನಡೆಸುತ್ತಿವೆ. ಅಲ್ಲದೆ ಅಂಗೀಕಾರವಿರುವ ಇತರ ಖಾಸಗಿ ಶಾಲೆಗಳು ಕೂಡ ಈ ಮಕ್ಕಳನ್ನು ತಮ್ಮತ್ತ ಆಕರ್ಷಿಸಲು ತಂತ್ರಗಾರಿಕೆಯಲ್ಲಿ ತೊಡಗಿವೆ. ಆದರೆ ಅನುಮತಿ ಇಲ್ಲದ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಿರುವ ಹೆತ್ತವರು ಅಥವಾ ಪೋಷಕರು ಭವಿಷ್ಯದ ದೃಷ್ಟಿಯಿಂದ ಸರಕಾರಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳನ್ನು ದಾಖಲಿಸಲು ಹೆಚ್ಚು ಕಾಳಜಿ ತೋರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.