ಜನರಲ್ ಆಸ್ಪತ್ರೆ ಎಸಿ ನಿಷ್ಕ್ರಿಯ: ಸಮಸ್ಯೆಯಲ್ಲಿ ರೋಗಿಗಳು
Team Udayavani, Dec 12, 2018, 1:30 AM IST
ಕಾಸರಗೋಡು: ಬಡರೋಗಿಗಳು ಆಶ್ರಯಿಸುವ ಕಾಸರಗೋಡು ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ನ ಎರಡು ಎಸಿ ಯಂತ್ರಗಳು ಕಳೆದ ಒಂದು ತಿಂಗಳಿನಿಂದ ಸಂಪೂರ್ಣವಾಗಿ ಹಾಳಾಗಿದ್ದು, ಇದರಿಂದ ಚಿಕಿತ್ಸೆಗಾಗಿ ಬರುವ ಬಡರೋಗಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎರಡು ಎ.ಸಿ. ಯಂತ್ರಗಳು ಕೆಟ್ಟು ಹೋಗಿ ತಿಂಗಳುಗಳು ಕಳೆದು ಹೋದರೂ ಇದುವರೆಗೆ ದುರಸ್ತಿಗೊಳಿಸದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
2013 ನವೆಂಬರ್ 30ರಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಪ್ರಾರಂಭಗೊಂಡಿತ್ತು. ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಈ ಡಯಾಲಿಸಿಸ್ ಸೆಂಟರ್‌ನಲ್ಲಿ ಒಟ್ಟು ಎಂಟು ಮೆಷಿನ್‌ಗಳಿವೆ. ಬೆಳಗ್ಗೆ 8.30ರಿಂದ ಸಂಜೆ 6ರ ತನಕ ಈ ಸೆಂಟರ್ ಕಾರ್ಯಾಚರಿಸುತ್ತಿದೆ. ಪ್ರತಿದಿನ ಇಪ್ಪತ್ತರಷ್ಟು ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಆದರೂ ನೌಕರರ ಹಾಗೂ ಯಂತ್ರಗಳ ಅಭಾವದಿಂದಾಗಿ ಎಲ್ಲಾ ರೋಗಿಗಳಿಗೂ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.
ಓರ್ವ ರೋಗಿಗೆ ಡಯಾಲಿಸಿಸ್ ಪೂರ್ಣಗೊಳಿಸಲು ಕನಿಷ್ಠ ನಾಲ್ಕು ಗಂಟೆ ಯಾದರೂ ಬೇಕಾಗುತ್ತದೆ. ಈ ಮಧ್ಯೆ ಅತೀ ಸೂಕ್ಷ್ಮವಾಗಿ ನಿರ್ವಹಿಸಬೇಕಾದ ಡಯಾಲಿಸಿಸ್ ಸೆಂಟರ್‌ನ ಎಸಿ ಯಂತ್ರಗಳು ಹಾಳಾಗಿವೆ. ಬೇಸಗೆ ಕಾಲದಲ್ಲಿ ಸೆಂಟರ್‌ನ ಚಟುವಟಿಕೆಗಳನ್ನು ನಿಲುಗಡೆಗೊಳಿಸಬೇಕಾಗಿದೆ ಎಂಬ ಆತಂಕ ಇದೀಗ ಆಸ್ಪತ್ರೆ ಅಧಿಕಾರಿಗಳಲ್ಲಿ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.