ಹವಾಮಾನ ವೈಪರೀತ್ಯ: ಗೇರು ಫಸಲು ಕುಸಿತ, ಕೃಷಿಕರು ಕಂಗಾಲು

Team Udayavani, Apr 1, 2017, 3:13 PM IST

geru.jpg

ಕಾಸರಗೋಡು: ಕೇರಳ ರಾಜ್ಯದಲ್ಲೇ ಅತ್ಯುತ್ತಮ ಗುಣಮಟ್ಟದ ಹಾಗು ಭಾರೀ ಬೇಡಿಕೆಯ ಗೇರು ಬೆಳೆಯುವ ಕಾಸರಗೋಡು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಗೇರು ಫಸಲು ಗಣನೀಯ ಕುಸಿದಿದ್ದು, ಇದರಿಂದ ಗೇರು ಕೃಷಿಕರು ಆತಂಕಕ್ಕೀಡಾಗಿದ್ದಾರೆ.

ಫಸಲು ಕುಸಿತದ ಜತೆಯಲ್ಲಿ ಗೇರು ಧಾರಣೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಕಾರಣ ದಿಂದ ಕೃಷಿಕರು ಕಂಗಾಲಾಗುತ್ತಿದ್ದಾರೆ. ಗೇರು ಸೀಸನ್‌ ಆರಂಭವಾಗುತ್ತಿದ್ದಂತೆ ಗೋಡಂಬಿಗೆ ಉತ್ತಮ ಧಾರಣೆಯಿತ್ತು. ಆದರೆ ದಿನದಿಂದ ದಿನಕ್ಕೆ ಗೇರು ಧಾರಣೆ ಕುಸಿಯುತ್ತಾ ಇದೀಗ ಸಾಮಾನ್ಯ ಧಾರಣೆಗೆ ಬಂದು ತಲುಪಿದೆ. 

ಉತ್ತಮ ಧಾರಣೆಯಿದ್ದಾಗ ಗೇರು ಕೃಷಿಕರಲ್ಲಿ ಮಂದಹಾಸ ಬೆಳಗಿದ್ದರೂ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಗೇರು ಫಸಲು ಗಣನೀಯ ಪ್ರಮಾಣದಲ್ಲಿ ಕುಸಿದು ದಿನ ಕಳೆದ ಹಾಗೆ ಕೃಷಿಕರ ಮೊಗದಲ್ಲಿ ಮಂದಹಾಸ ಕಣ್ಮರೆಯಾಗುತ್ತಿದೆ.

ಕೃಷಿಕರಲ್ಲಿ ಆತಂಕ  
ಕಳೆದ ವರ್ಷಕ್ಕೆ ತುಲನೆ ಮಾಡಿದರೆ ಈ ವರ್ಷ ಗೇರು ಬೀಜಕ್ಕೆ ಉತ್ತಮ ಧಾರಣೆಯಿದೆ. ಆದರೆ ಗೇರು ಧಾರಣೆ ಇದೆ ಎಂದು ಕೃಷಿಕರು ಸಂತೋಷಪಡುವಂತಿಲ್ಲ. ಹವಾಮಾನ ವೈಪರೀತ್ಯದಿಂದ ಗೇರು ಫಸಲು ಕಡಿಮೆಯಾಗಿ ಕೃಷಿಕರ ಮೊಗದಲ್ಲಿ ಮಂದಹಾಸ ಕರಟುತ್ತಿದೆ. ಪ್ರಸ್ತುತ ವರ್ಷ ಗೇರು ಸೀಸನ್‌ ಆರಂಭದಲ್ಲಿ ಕಿಲೋ ಒಂದಕ್ಕೆ 150ರಿಂದ 165 ರೂ. ತನಕ ಗೇರು ಧಾರಣೆಯಿತ್ತು. ಆದರೆ ದಿನ ಕಳೆದಂತೆ ಇದೀಗ 125ರಿಂದ 130 ರೂ.ಗೆ ಇಳಿದಿದೆ. ಕಳೆದ ವರ್ಷ ಗೇರು  100 ರಿಂದ 125 ರೂ. ತನಕ ಧಾರಣೆ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಧಾರಣೆ  ಹೆಚ್ಚಿದ್ದರೂ ಗೇರು ಇಳುವರಿ ಕುಂಠಿತವಾಗಿದೆ. 2007 ರಲ್ಲಿ ಗೋಡಂಬಿ ಧಾರಣೆ ಗಣನೀಯವಾಗಿ ಕಡಿಮೆಯಾಗಿತ್ತು. ಆ ವರ್ಷ 35ರಿಂದ 38 ರೂ. ವರೆಗೆ ಇತ್ತು. 2006ರಲ್ಲಿ ಕಿಲೋ ಒಂದಕ್ಕೆ  45ರಿಂದ 47 ರೂ. ತನಕವಿತ್ತು. 2008ರಲ್ಲಿ ಗೋಡಂಬಿ ಧಾರಣೆ 50ರಿಂದ 53 ರೂ.  ಇದ್ದರೆ  2009ರಲ್ಲಿ ಗೋಡಂಬಿ ಧಾರಣೆ 62 ರೂ., 2010ರಲ್ಲಿ 70 ರೂ., 2011 ಹಾಗೂ 2012ರಲ್ಲಿ 75ರಿಂದ 78 ರೂ. ವರೆಗೆ ಧಾರಣೆ ಇತ್ತು. 2013ರಲ್ಲಿ ಕಿಲೋ ಒಂದಕ್ಕೆ 80 ರೂ. ಲಭಿಸಿದ್ದರೆ. 2014ರಲ್ಲಿ 87 ರೂ. ತನಕ ಹೆಚ್ಚಳಗೊಂಡಿತ್ತು.  ಆದರೆ 2015ರಲ್ಲಿ ಹಿಂದಿನ ಎಲ್ಲ ಧಾರಣೆ ಮೀರಿ 92 ರೂ. ತನಕ ಹೆಚ್ಚಳವಾಗಿತ್ತು.

ಆ ವರ್ಷವೂ ಹವಾಮಾನ ವೈಪರೀತ್ಯ ಮತ್ತು ರೋಗ ಬಾಧೆಯಿಂದ ಗೇರು ಇಳುವರಿ ಕುಸಿದಿತ್ತು. ಇದೀಗ ದಿನದಿಂದ ದಿನಕ್ಕೆ ಗೇರು ಧಾರಣೆ ಕುಸಿಯುತ್ತಿರುವುದು ಹಾಗು ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿರುವುದರಿಂದ ಮಂದಹಾಸ ಬರಬೇಕಾಗಿದ್ದ ಕೃಷಿಕರ ಮೊಗದಲ್ಲಿ ಸೂತಕದ ಛಾಯೆ ಕಂಡು ಬಂದಿದೆ. ಬಿರು ಬಿಸಿಲು, ಪದೇ ಪದೇ ಮೋಡ ಕವಿದ ವಾತಾವರಣದಿಂದ ಗೇರು ಹೂ ಸಂಪೂರ್ಣ ಕರಟಿ ಹೋಗಿದೆ. ಇದರಿಂದಾಗಿ ನಿರೀಕ್ಷೆಯನ್ನೆಲ್ಲಾ ಹುಸಿಗೊಳಿಸಿ ಗೇರು ಫಸಲು ಕುಸಿಯಿತು. ಕೃಷಿಕರ ಮಂದಹಾಸ ಮಂಕಾಯಿತು.

ಕುಟುಂಬಶ್ರೀ ಸದಸ್ಯರಿಗೆ ಉದ್ಯೋಗ 
ಕಾಸರಗೋಡು ಗೇರು ಬೀಜಕ್ಕೆ ಉತ್ತಮ ಬೇಡಿಕೆ ಇದೆ. ಇಲ್ಲಿನ ಗೇರು ಅತ್ಯುತ್ತಮ ಗುಣಮಟ್ಟದ್ದು ಎಂಬ ಖ್ಯಾತಿಯನ್ನು ಪಡೆದಿದೆ. ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಗೇರು ಕೃಷಿಕರಿಗೆ ಆದಾಯ ತರುತ್ತಿದ್ದರೂ ಗೇರು ಸಂಸ್ಕರಣೆ ನಡೆಸುವ ಉದ್ದಿಮೆಗಳು ಸಾಕಷ್ಟು ಲಾಭ ಪಡೆಯುತ್ತವೆ. ಕೇರಳ ಸರಕಾರದ ತೋಟಗಾರಿಕಾ ನಿಗಮ ಮತ್ತು ಕುಟುಂಬಶ್ರೀ ಗೇರು ಕೃಷಿಯಿಂದ ಹೆಚ್ಚಿನ ಲಾಭ ಪಡೆಯುತ್ತವೆ.

ಜಿಲ್ಲೆಯ ವಿವಿಧೆಡೆ ಕುಟುಂಬಶ್ರೀ ಗೇರು ಸಂಸ್ಕರಣ ಘಟಕವನ್ನು ಆರಂಭಿಸಿದ್ದು, ಹಲವಾರು ಮಂದಿಗೆ ಉದ್ಯೋಗವನ್ನು ಕಲ್ಪಿಸಿದೆ. ಗೇರು ಸಂಸ್ಕರಣೆಯಿಂದ ಹಲವು ಕುಟುಂಬಗಳು ಆರ್ಥಿಕವಾಗಿ ಮುಂದೆ ಸಾಗಲು ಸಹಾಯಕವಾಗಿದೆ. ಹಲವು ಕುಟುಂಬಗಳಿಗೆ ಕುಟುಂಬಶ್ರೀ ಆಧಾರವಾಗಿ ನಿಂತಿದೆ.

ಮೂರು ಎಸ್ಟೇಟ್‌ 
ಕಾಸರಗೋಡು ಜಿಲ್ಲೆಯಲ್ಲಿ ತೋಟಗಾರಿಕಾ ನಿಗಮದ ಕೈಕೆಳಗೆ ಮೂರು ಗೇರು ಎಸ್ಟೇಟ್‌ಗಳಿವೆ. ಕಾಸರಗೋಡು, ರಾಜಪುರಂ ಮತ್ತು ಚೀಮೇನಿ ಎಸ್ಟೇಟ್‌ಗಳಲ್ಲಿ ಗೇರು ತೋಟ ಗಳಿದ್ದು, ಈ ತೋಟಗಳಲ್ಲಿ ರೋಗಬಾಧೆ ಮತ್ತು ಹವಾಮಾನ ವೈಪರೀತ್ಯದಿಂದ ಗೇರು ಫಸಲು ಕಡಿಮೆಯಾಗಿದೆ. 

ಇದರಿಂದಾಗಿ ಈ ಬಾರಿ ತೋಟಗಾರಿಕಾ ನಿಗಮಕ್ಕೆ ಬರುವ ವರಮಾನ ಕಡಿಮೆಯಾಗುವ ಸಾಧ್ಯತೆ ಬಲಗೊಂಡಿದೆ.
ಗೇರು  ಫಸಲು   ಕುಸಿತದಿಂದ ಕುಟುಂಬಶ್ರೀಯ ಗೇರು ಸಂಸ್ಕರಣ ಘಟಕಗಳಿಗೆ ವರ್ಷಪೂರ್ತಿ ಗೇರು ಲಭಿಸುವ ಸಾಧ್ಯತೆ ಕಡಿಮೆಯಾಗಿದ್ದು, ಹಲವು ಸಂಸ್ಕರಣ ಘಟಕಗಳಿಗೆ ಕೆಲವು ತಿಂಗಳಾ ದರೂ ಕೆಲಸವಿಲ್ಲದ ದಿನಗಳು ಎದುರಾಗಲಿವೆ ಎಂಬ ಆತಂಕ ಸೃಷ್ಟಿಯಾಗಿದೆ.

– ಪ್ರದೀಪ್‌ ಬೇಕಲ್‌

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Kasaragod ಭಾಗದ ಅಪರಾಧ ಸುದ್ದಿಗಳು; ಕಳ್ಳನೋಟು ಸಹಿತ ವಶಕ್ಕೆ

Untitled-1

Kasaragod Crime News: ಬೀದಿ ನಾಯಿಗೆ ಹೆದರಿ ಓಡಿದ ಬಾಲಕ ಬಾವಿಗೆ ಬಿದ್ದು ಸಾವು

2

Kasaragod: ಯುವತಿ ನಾಪತ್ತೆ; ದೂರು ದಾಖಲು

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

Bus Fare Hike: ಕರ್ನಾಟಕಕ್ಕೆ ಕೇರಳ ಸರಕಾರಿ ಬಸ್‌ ಟಿಕೆಟ್‌ ದರ ಏರಿಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.