ಆಗಸದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಸಿಡಿಮದ್ದು ಪ್ರದರ್ಶನ​​​​​​​


Team Udayavani, Jan 19, 2019, 1:10 AM IST

18-kbl-1a.jpg

ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಉತ್ಸವದಂಗವಾಗಿ ನಡೆದ ಕುಂಬಳೆ ಬೆಡಿ ಸಿಡಿಮದ್ದು ಪ್ರದರ್ಶನ ಭಕ್ತರನ್ನು ಬಣ್ಣದ ಲೋಕದಲ್ಲಿ ತೇಲಿಸಿತು.

ಕ್ಷೇತ್ರದಲ್ಲಿ ರಾತ್ರಿ ಶ್ರೀಬಲಿ ಉತ್ಸವದ ಬಳಿಕ ವಾದ್ಯಘೋಷದ ಮೆರವಣಿಗೆಯಲ್ಲಿ ಆಗಮಿಸಿದ ಶ್ರೀದೇವರು ಪೊಲೀಸ್‌ ಠಾಣೆಯ ಮುಂದಿನ ಬೆಡಿಕಟ್ಟೆಯಲ್ಲಿ ವಿರಾಜಮಾನವಾದ ಬಳಿಕ ಅರ್ಚಕರು ದೀಪದಿಂದ ಆರತಿಯ ಮೂಲಕ ನೀಡಿದ ಬೆಂಕಿಯಿಂದ ಸಿಡಿಮದ್ದುಗಳನ್ನು ಉರಿಸಲು ಆರಂಭಿಸಲಾಯಿತು. ಬಳಿಕ ಚೈನೀಸ್‌ ಸಿಡಿಮದ್ದುಗಳು ಆಕಾಶದಲ್ಲಿ ಬಣ್ಣಬಣ್ಣದ ನಕ್ಷತ್ರದಂತೆ  ಮಿನುಗಿದುವು.ಸಣ್ಣ ದೊಡ್ಡ ರಾಕೆಟ್‌ಗಳು ಬೆಂಕಿಯನ್ನು ಉಗುಳುತ್ತಾ ಬಾನೆತ್ತರಕ್ಕೆ ಹಾರಿ ವರ್ಣ ಚಿತ್ತಾರ ಮೂಡಿಸಿದವು. ಸಣ್ಣದೊಡ್ಡ ಬಾಂಬ್‌ಗಳು ಸಿಡಿದು ಭಕ್ತರನ್ನು ಮಂತ್ರ ಮುಗ್ಧಗೊಳಿಸಿದವು. ಕೊನೆಯಲ್ಲಿ ಸಿಡಿಸಿದ ಫಿನಿಶಿಂಗ್‌ ಪಾಯಿಂಟ್‌ನ ಕಲರ್‌ ಮಾಲೆ ಕಿವಿಗಡ ಚಿಕ್ಕುವ ಭಾರೀ ಸದ್ದಿನೊಂಂದಿಗೆ ಪ್ರಖರ ಬೆಳಕನ್ನು ಹರಿಸಿ ರಾತ್ರಿಯನ್ನು ಹಗಲನ್ನಾಗಿಸಿತು. ರಾತ್ರಿ 9.30ರಿಂದ 10 ಗಂಟೆಯ ತನಕ ಸಿಡಿದ ಸುಡುಮದ್ದು ಪ್ರದರ್ಶನವನ್ನು ವೀಕ್ಷಿಸಲು ಅನ್ಯರಾಜ್ಯಗಳ ಸಹಿತ ಅಬಾಲವೃದ್ಧರೆನ್ನದೆ ಸಹಸ್ರಾರು  ಜನರು ಆಗಮಿಸಿದ್ದರು.ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ‌ರು.

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉನ್ನತ ಪೊಲೀಸ್‌ ಅಧಿಕಾರಿಗಳಾ ದ ಎಸ್‌.ಪಿ.ಡಾ.ಶ್ರೀನಿವಾಸ್‌ ಎಎಸ್‌.ಪಿ. ಶಿಲ್ಪಾ ಡಿ., ಕುಂಬಳೆ, ಆದೂರು, ವೆಳ್ಳರಿಕುಂಡು, ವಿದ್ಯಾನಗರ ಸಿ.ಐ.ಗಳಾದ ಪ್ರೇಂಸದನ್‌, ಮ್ಯಾಥ್ಯೂ ಎಂ.ಎ., ಸುನಿಲ್‌ ಕುಮಾರ್‌, ಜಿಲ್ಲೆಯ ವಿವಿಧ ಠಾಣೆಗಳ ಎಸ್‌.ಐ.ಗಳಾದ ಅಶೋಕ್‌, ಜಯರಾಜನ್‌, ಗೋಪಾಲನ್‌, ಶಾಜಿ, ದಾಮೋದರನ್‌, ಶಶಿಕುಮಾರ್‌, ಅನೂಪ್‌, ವನಿತಾ ಎಸ್‌. ಐ.ಗಳಾದ ನಿರ್ಮಲಾ ಮತ್ತು ರಾಧಾ ವಿಶೇಷ ನಿಗಾ ವಹಿಸಿದ್ದರು. ಮೀಸಲು ಮತ್ತು  ಮಹಿಳಾ ಪೊಲೀಸರ ಸಹಿತ 200 ಪೊಲೀಸರು  ಕರ್ತವ್ಯ ನಿರತರಾಗಿದ್ದರು.

15 ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಆಕಾಶದಲ್ಲಿ 3 ಡೋÅಣ್‌ ಹೆಲಿ ಕೆಮರಾ ಕಾರ್ಯಾಚರಿಸುತ್ತಿದ್ದವು. ಬೆಳಕು ಆರಿದಲ್ಲಿ ತುರ್ತು ಬೆಳಕಿನ ವ್ಯವಸ್ಥೆಗಾಗಿ 2 ಎಸ್ಕಾ ಲೈಟ್‌ಗಳನ್ನು ತರಿಸಲಾಗಿತ್ತು.ಮೈಕೊರೆಯುವ ಚಳಿಯಲ್ಲೂ ಕುಂಬಳೆ ಸರಕಾರಿ ವಿದ್ಯಾಲಯದ ವಿಶಾಲ ಮೈದಾನ ಮತ್ತು ಪೊಲೀಸ್‌ ಠಾಣೆಯ ಮುಂದಿನ ಮೈದಾನದಲ್ಲಿ ನೆರೆದ ಬೆಡಿ ವೀಕ್ಷಕರು ಸಿಡಿಮದ್ದು ಪ್ರದರ್ಶನವನ್ನು ಕೇಕೆಯ ಮೂಲಕ ಸಂಭ್ರಮಿಸಿದರು. 

ಮೊಬೈಲ್‌ ಮತ್ತು ಕೆಮರಾ ಮೂಲಕ ಬೆಡಿಯನ್ನು ಸೆರೆಹಿಡಿದರು.ಜಾತ್ರೆಯ ಐದನೇ ದಿನವಾದ ಜ. 18 ರಂದು  ಬೆಳಗ್ಗೆ  ಕವಾಟೋದ್ಘಾಟನೆ,ಭಜನೆ, ತುಲಾಭಾರ ಸೇವೆ,ಮಧ್ಯಾಹ್ನ ಮಹಾ ಪೂಜೆಯ ಬಳಿಕ ಸುಶೀಲಾ ರೈ ಮತ್ತು ಕೋಟೆಕ್ಕಾರು ಐತ್ತಪ್ಪ ರೈ ಮನೆಯವರಿಂದ ಅನ್ನದಾನ ನಡೆಯಿತು. ಸಂಜೆ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಕುಂಬಳೆ ಘಟಕದವತಿಯಿಂದ ಯಕ್ಷಗಾನ ವೈಭವ, ರಾತ್ರಿ ಉತ್ಸವ ಬಲಿ, ಘೋಷಯಾತ್ರೆ, ಶೇಡಿಗುಮ್ಮೆ ಯಲ್ಲಿ ಅವಭೃಥ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವತರಣ ನಡೆಯಿತು. ಯಕ್ಷಮಿತ್ರರು ಮುಜಂಗಾವು ತಂಡದಿಂದ “ಶ್ರೀದೇವಿ ಮಹಾತೆ¾’ ಯಕ್ಷಗಾನ ಬಯಲಾಟ ಜರಗಿತು.

ಇಂದಿನ ಕಾರ್ಯಕ್ರಮ 
ಜ. 19ರಂದು ಬೆಳಗ್ಗೆ 10ರಿಂದ ಶ್ರೀದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, 7ರಿಂದ ಭಜನೆ, ರಾತ್ರಿ 8ರಿಂದ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

ಟಾಪ್ ನ್ಯೂಸ್

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-nikil

Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪ‌ಲಾಯನ ಮಾಡಲ್ಲ: ನಿಖಿಲ್‌

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.