ಸುಸ್ಥಿರ ಗೇರು ಕೃಷಿಗೆ ಹೊಸ ಯೋಜನೆ ಅಗತ್ಯ: ಗೋಪಿ
Team Udayavani, Sep 8, 2017, 8:25 AM IST
ಕಾಸರಗೋಡು: ಕೇಂದ್ರ ಸರಕಾರವು ಸುಸ್ಥಿರ ಹಾಗೂ ಲಾಭದಾಯಕ ಗೇರು ಕೃಷಿಗೆ ಹೊಸ ಯೋಜನೆ ರೂಪಿಸಲು ಚಿಂತಿಸಿದೆ ಎಂದು ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಹೇಳಿದರು. ಮಾನವನ ಜೀವದ ಬೆಲೆಯನ್ನು ಲೆಕ್ಕಿಸದ ಗೇರು ಕೃಷಿಯ ಬದಲು ಹೊಸ ಆವಿಷ್ಕಾರದ ಮೂಲಕ ಪ್ರಕೃತಿ ಸಾಮೀಪ್ಯದ ಅರೋಗ್ಯಯುತ ಗೇರು ಕೃಷಿಯನ್ನು ಉತ್ತೇಜಿಸಲಾಗುವುದೆಂದು ಅವರು ತಿಳಿಸಿದರು.
ಕಾಞಂಗಾಡು ಅಂಬಲತ್ತರದಲ್ಲಿ ನೆಹರೂ ಕಲಾ ವಿಜ್ಞಾನ ಕಾಲೇಜಿನ ಸಾಹಿತ್ಯ ವೇದಿಕೆ ವತಿಯಿಂದ ನಿರ್ಮಾಣಕಂಡ ವಿಶಿಷ್ಟ ಚೇತನ ನಾಗರಿಕರಿಗಾಗಿ ನಿರ್ಮಿಸಿದ ಸ್ನೇಹದ ಮನೆಯನ್ನು ಲೋಕಾರ್ಪಣೆಗೈದು ಅವರು ಮಾತನಾಡಿದರು.
ಗೇರು ಕೃಷಿಕರಿಗೆ ಸಹಾಯಕವಾಗುವ ಯೋಜನೆಯನ್ನು ರೂಪಿಸುವ ಬಗ್ಗೆ ಕೇಂದ್ರ ಸಚಿವ ಅರುಣ್‌ಜೇಟಿÉ ಹಾಗೂ ನಿರ್ಮಲಾ ಸೀತಾರಾಮನ್ ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಹೊಸ ಯೋಜನೆಯು ವರ್ಷದೊಳಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಹೇಳಿದರು. ವಿಶಿಷ್ಟ ಚೇತನರಿಗೆ ಸಹಾಯಕವಾಗುವ ಆರೋಗ್ಯ ಘಟಕವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು.
ಯಾವುದೇ ಯೋಜನೆಗೆ ಕೇಂದ್ರದ ಸಹಾಯವಷ್ಟೇ ಅಲ್ಲದೆ ಜನಸಾಮಾನ್ಯರು ಒಂದುಗೂಡಿ ಸಾಮಾಜಿಕ ಒಳಿತಿಗೆ ಮಾದರಿಯಾಗಬೇಕಿದೆ ಎಂದು ಅವರು ಹೇಳಿದರು. ಕಾಞಂಗಾಡು ನೆಹರೂ ಕಲಾ ವಿಜ್ಞಾನ ಕಾಲೇಜಿನ ಸಾಹಿತ್ಯ ವೇದಿಕೆಯು ಇಂತಹ ಮಹತ್ತರ ಬದಲಾವಣೆಯಲ್ಲಿ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾರ್ಗದರ್ಶಕ ಎಂದರು.
ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಂಡೋಸಲ್ಫಾನ್ ದುರಂತದ ಬಗ್ಗೆ ಬೆಳಕು ಚೆಲ್ಲುವ ಎಣ್ಮಕಜೆ ಪುಸ್ತಕ ಬರಹಗಾರ ಅಂಬಿಕಾಸುತನ್ ಮಾಂಗಾಡ್ ಮಾತನಾಡಿ ಸಾಹಿತ್ಯ ವೇದಿಕೆಯು ಸುರೇಶ್ ಗೋಪಿ ಅವರ ಜೊತೆಗೂಡಿ ಅನಿವಾಸಿ ಭಾರತೀಯ ಉದ್ಯಮಿಗಳ ನೆರವಿನಿಂದ ಒಟ್ಟು ಎಂಟು ಮನೆಗಳನ್ನು ಅಶಕ್ತರಿಗೆ ನೀಡಿದೆ.
ಸ್ನೇಹ ಮನೆ ನಿರ್ಮಾಣಕ್ಕೆ ಕಸ್ತೂರ್ ಬಾ ಮಹಿಳಾ ಸಮಾಜವು ಹತ್ತು ಸೆಂಟ್ಸ್ ಸ್ಥಳವನ್ನು ವೇದಿಕೆಗೆ ನೀಡಿತ್ತು ಎಂದು ಅಂಬಿಕಾ ಸುತನ್ ನೆನಪಿಸಿಕೊಂಡರು. ಎಂಡೋ ಸಲ್ಫಾನ್ ವಿರೋಧಿ ಚಳುವಳಿಯ ಮುನೀಸಾ ಅಂಬಲತ್ತರ ಮತು ¤ಕುಂಞಿಕೃಷ್ಣನ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
Kasaragod: 300 ಪವನ್ ಚಿನ್ನ, 1 ಕೋಟಿ ರೂ. ಕಳವು ಕರ್ನಾಟಕ, ತಮಿಳುನಾಡಿಗೆ ತನಿಖೆ ವಿಸ್ತರಣೆ
Road Mishap: ಲಾರಿ ಹರಿದು ಇಬ್ಬರು ಮಕ್ಕಳು ಸೇರಿ ಐವರು ಮೃತ್ಯು
Road Mishap: ಪೊನ್ನಂಪೇಟೆ: ಲಾರಿ ಢಿಕ್ಕಿ; ಬಾಲಕಿ ಸಾವು
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.