ಕರಿಂದಳಂನಲ್ಲಿ ಯೋಗ- ಪ್ರಕೃತಿ ಚಿಕಿತ್ಸೆ ಕೇಂದ್ರ
Team Udayavani, Jun 28, 2018, 11:34 AM IST
ಕಾಸರಗೋಡು: ಕೇಂದ್ರ ಆಯುಷ್ ಸಚಿವಾಲಯ ಕಾಸರಗೋಡು ಜಿಲ್ಲೆಯ ಕಿನಾನೂರು- ಕರಿಂದಳದಲ್ಲಿ ಸ್ಥಾಪಿಸಲು ಉದ್ದೇಶಿಸಿದ ಸೆಂಟ್ರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಆ್ಯಂಡ್ ನ್ಯಾಚುರೋಪತಿ ಸೆಂಟರ್‌ಗೆ 15 ಎಕರೆ ಸ್ಥಳ ಮಂಜೂರು ಮಾಡಿದೆ.
ಕೇರಳ ಸಚಿವ ಸಂಪುಟ ಸಭೆಯಲ್ಲಿ ಯೋಗ ಇನ್‌ಸ್ಟಿಟ್ಯೂಟ್‌ಗೆ ಸ್ಥಳ ನೀಡಲು ತೀರ್ಮಾನಿಸಲಾಯಿತು. ಈ ಕೇಂದ್ರದಲ್ಲಿ 100 ಹಾಸಿಗೆಗಳಿರುವ ಆಸ್ಪತ್ರೆ ನಿರ್ಮಾಣವಾಗಲಿದೆ. ವೆಳ್ಳರಿಕುಂಡು ತಾಲೂಕಿನ ಕರಿಂದಳಂ ವಿಲೇಜ್‌ನ ರೀ ಸರ್ವೆ ನಂಬ್ರ 89/1ರಲ್ಲಿ 15 ಎಕರೆ ಸ್ಥಳವನ್ನು ಸೆಂಟ್ರಲ್ ಕೌನ್ಸಿಲ್ ಫೋರ್ ರಿಸರ್ಚ್ ಇನ್ ಯೋಗ ಆ್ಯಂಡ್ ನ್ಯಾಚುರೋಪತಿಗೆ ಸ್ಥಳ ಮಂಜೂರು ಮಾಡಲಾಗಿದೆ. ವಾರ್ಷಿಕ 100 ರೂ.ಗಳಂತೆ 30 ವರ್ಷಕ್ಕೆ ಲೀಸ್‌ನಲ್ಲಿ ಭೂಮಿ ನೀಡಲಾಗಿದೆ.
ಆಸ್ಪತ್ರೆ, ಸ್ನಾತಕೋತ್ತರ ಪದವಿ ಸಹಿತ ಅತ್ಯಾಧುನಿಕ ವ್ಯವಸ್ಥೆಗಳಿರುವ ಆಸ್ಪತ್ರೆಯನ್ನು ಸ್ಥಾಪಿಸಲು ಯೋಜಿಸ ಲಾಗಿದೆ. ದೇಶದಲ್ಲೇ ಕೇಂದ್ರ ಸರಕಾರವೇ ಪೂರ್ಣ ಹಣ ವ್ಯಯಿಸಿ ಕೇಂದ್ರದ ಆಯುಷ್ ಇಲಾಖೆಯ ಕೈಕೆಳಗೆ ಆರಂಭಿಸುವ ಐದನೇ ಆಸ್ಪತ್ರೆಯಾಗಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಲು 200 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಅವಕಾಶ ಇರುವುದು.
ಬಿಜೆಪಿಯ ಮನವಿಗೆ ಸ್ಪಂದನೆ
ಕೇಂದ್ರ ಆಯುಷ್ ಸಚಿವಾಲಯ ಕಿನಾನೂರು – ಕರಿಂದಳಂನಲ್ಲಿ ಸ್ಥಾಪಿಸಲು ಉದ್ದೇಶಿಸಿದ ಸೆಂಟ್ರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಆ್ಯಂಡ್ ನ್ಯಾಚುರೋಪತಿ ಸೆಂಟರ್‌ಗೆ ಅಗತ್ಯವಾದ ಸ್ಥಳ ನೀಡಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅವರ ಮನವಿಗೆ ಸ್ಪಂದಿಸಿ ಸ್ಥಳ ಮಂಜೂರು ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.