ಕಲಾವಿದರ ಕುಂಚದಲ್ಲಿ ಮೂಡಿದ ಜಾಗೃತಿಯ ಚಿತ್ತಾರ
Team Udayavani, Apr 8, 2018, 7:15 AM IST
ಮಂಜೇಶ್ವರ: ಗಡಿನಾಡಿನಲ್ಲಿ ವ್ಯಾಪಕಗೊಳ್ಳುತ್ತಿರುವ ಅಮಲು ಪದಾರ್ಥ ಮಾಫಿಯಾಗಳ ವಿರುದ್ಧ ಜನಜಾಗೃತಿ ಮೂಡಿಸಲು ಯುವಪಡೆ ರಂಗಕ್ಕಿಳಿದಿದೆ. ಮಂಜೇಶ್ವರದ ಜನಮೈತ್ರಿ ಪೊಲೀಸರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಅಭಿಯಾನಕ್ಕೆ ಭಾರೀ ಜನಬೆಂಬಲ ದೊರೆತಿದೆ.
ಶಾಲಾ ಕಾಲೇಜುಗಳನ್ನು, ಕ್ಲಬ್ ಗಳನ್ನು ಕೇಂದ್ರಿಕರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳಲಾಗಿದ್ದು, ಹೊಸಂಗಡಿ ಪೇಟೆಯಲ್ಲಿ ಜರುಗಿದ ಮ್ಯಾರಥಾನ್ ಅಭೂತಪೂರ್ವ ಯಶಸ್ಸನ್ನು ಕಂಡಿತು. ಸುಮಾರು 500ಕ್ಕೂ ಮಿಕ್ಕಿದ ಯುವಕರು ಈ ಓಟದಲ್ಲಿ ಭಾಗಿಯಾಗಿ ಅಮಲು ಪದಾರ್ಥಗಳ ವಿರುದ್ಧ ಪ್ರತಿಜ್ಜೆ ಕೈಗೊಂಡರು.
ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆಯುತ್ತಿರುವ ಬಿಚ್ಚು ಬಾಯ್ಸ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ಬಿನ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ವೇದಿಕೆಯು ಮಾದಕವಸ್ತುಗಳ ವಿರುದ್ಧದ ಚಿತ್ರಲಹರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಮಂಜೇಶ್ವರದ ಜನಮೈತ್ರಿ ಪೊಲೀಸರು ವಿವಿಧ ಸಂಘಟನೆಗಳ ಜೊತೆಗೂಡಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಹತ್ತಕ್ಕೂ ಮಿಕ್ಕಿದ ಕಲಾವಿದರು ಪಾಲ್ಗೊಂಡರು.
ಅಂತಾರಾಷ್ಟ್ರೀಯ ಖ್ಯಾತಿಯ ವಿಕಲಚೇತನ ಕಲಾವಿದ ಗಣೇಶ್ ಕುಮಾರ್ ಕುಂಞಮಂಗಳಂ ಬಾಯಿಯ ಮೂಲಕ ಚಿತ್ರ ರಚಿಸುವ ಮೂಲಕ ಚಿತ್ರಲಹರಿಗೆ ಚಾಲನೆಯನ್ನು ನೀಡಿದರು. ಬಾಯಿಯಲ್ಲಿ ಬ್ರಶ್ ಇಟ್ಟು ಮಾದಕದ್ರವ್ಯ ಬಳಕೆಯಿಂದಾಗುವ ಮಾರಕತೆಯ ಕುರಿತು ಕ್ಷಣಾರ್ಧದಲ್ಲಿ ಅವರು ರಚಿಸಿದ ಚಿತ್ರ ಎಲ್ಲರನ್ನೂ ದಿಗೂ¾ಢಗೊಳಿಸಿತು.
ಕಾಸರಗೋಡು ಜಿಲ್ಲೆಯ ಸುಪ್ರಸಿದ್ಧ ಚಿತ್ರಕಲಾವಿದರಾದ ಅಶೋಕನ್ ಇ.ವಿ, ನಾರಾಯಣ ಮಾಸ್ತರ್, ಬಾಬು ಮೇಕಾಡನ್, ಸುರೇಶ್ ಎಂ, ಶಿವನ್ ಕೈಲಾಶ್‌ಮ ಮೋಹನಚಂದ್ರನ್,ಕೆಆರ್ ಸಿ ತಾಯನ್ನೂರ್, ಶಿಶುಪಾಲನ್ ಮಾಯಿಚ್ಚ ತಮ್ಮ ಕಲ್ಪನೆಯ ಚಿತ್ತಾರಕ್ಕೆ ಸೃಷ್ಟಿ ನೀಡಿದರು. ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆರೆದ ಯುವಕ್ರೀಡಾಳುಗಳು ಈ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾದರು. ಕವಿ ವಿನೋದ್ ಕುಮಾರ್ ಪರಂಬಳ ಕಾವ್ಯವಾಚನಗೈದರು.
ಕಲಾವಿದರು ಸೃಷ್ಟಿಸಿದ ಕುಂಚಗಳು ಮಾದಕವಸ್ತು ಬಳಕೆಯ ವಿರುದ್ಧ ಸಂದೇಶವನ್ನು ನೀಡುವ ವರ್ಣಮಯ ಚಿತ್ತಾರವಾಗಿತ್ತು. ಪ್ರತಿಯೊಂದು ವರ್ಣಚಿತ್ರ ಅರ್ಥಗರ್ಭಿತ ಹಾಗೂ ಸಂದೇಶಭರಿತವಾಗಿತ್ತು.ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಜೊತೆಗೆ ಕಲಾವಿದರ ಚಿತ್ರರಚನೆ ಕಲಾ-ಕ್ರೀಡೆಗಳ ಜುಗಲ್‌ಬಂದಿಯಾಗಿತ್ತು.
ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಚಿತ್ರಲಹರಿ ಹಾಗೂ ಎಂಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿದ ಅವರು ಅಮಲು ಪದಾರ್ಥಗಳ ಬಳಕೆ ಕ್ಷಣಿಕ ಸುಖಕ್ಕಾಗಿ ಇಡೀ ಜೀವನವನ್ನೇ ನಾಶಮಾಡುವ ಪ್ರಕ್ರಿಯೆಯಾಗಿದೆ, ಸಮಾಜದಲ್ಲಿ ಕ್ರಿಮಿನಲ್‌ಗಳಾಗಿ ಮಾರ್ಪಾಡಾಗುವ ಮೊದಲೇ ಮಾದಕದ್ರವ್ಯ ವ್ಯಸನಿಗಳನ್ನು ಸರಿದಾರಿಗೆ ತರುವ ಪ್ರಯತ್ನ ಆಗಬೇಕಾಗಿದೆ ಎಂದು ಅವರು ಹೇಳಿದರು.
ಕಾಸರಗೋಡು ಜಿಲ್ಲಾ ಪಂಂಚಾಯಯ್‌ಅಭಿವೃದ್ಧಿ ಸ್ಥಾಯೀ ಅಧ್ಯಕ್ಷ ರು ಅಧ್ಯಕ್ಷತೆ ವಹಿಸಿದ್ದರು. ಗೋಲ್ಡನ್ ರಹ್ಮಾನ್ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕರಾವಳಿ ಠಾಣೆಯ ಇನ್ಸ್‌ಪೆಕ್ಟರ್ ಅಜಿ.ಜಿ.ನಾಥ್‌ಮ ಸಬ್ ಇನ್ಸ್‌ಪೆಕ್ಟರ್ ಪ್ರಮೋದ್,ವಿಮುಕ್ತಿ ಜಿಲ್ಲಾ ಕೋರ್ಡಿನೇಟರ್ ರಘುನಾಥನ್,ಮಂಜೇಶ್ವರ ಎಸ್‌ಐ ರವೀಂದ್ರನ್, ಮಂಗಲ್ಪಾಡಿ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ, ಸಂಘಟಕ ಶಶಿಧರನ್,ಮುಂತಾದವರು ಉಪಸ್ಥಿತರಿದ್ದರು.
ಮಾದಕವಸ್ತುಗಳ ವಿರುದ್ಧದ ಸಂದೇಶದೊಂದಿಗೆ ಹಮ್ಮಿಕೊಳ್ಳಲಾದ ಎಂಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ಕಾಸರಗೋಡು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಕ್ರಿಕೆಟ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದ ಅವರು ಬಾಲನ್ನು ಬೌಂಡರಿಗಟ್ಟಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.