ಕೈಬಿಟ್ಟ ಜಲ ವಿಮಾನ ಯೋಜನೆ; 15 ಕೋ. ರೂ. ನಷ್ಟ


Team Udayavani, Jul 13, 2018, 6:00 AM IST

12ksde16.gif

ಕಾಸರಗೋಡು: ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಈ ಮೂಲಕ ಆರ್ಥಿಕ ಸಬಲೀಕರಣ ಸಾಧಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾದ ಬೇಕಲ ಕೋಟೆ ಸಹಿತ ರಾಜ್ಯದ ವಿವಿಧೆಡೆ ಯೋಜಿಸಿದ ಮಹತ್ವಾಕಾಂಕ್ಷೆಯ “ಜಲ ವಿಮಾನ’ (ಸೀ ಪ್ಲೇನ್‌) ಯೋಜನೆಯನ್ನು ಕೇರಳ ಸರಕಾರ ಕೈಬಿಟ್ಟಿದೆ. ಜಲ ವಿಮಾನ ಸುರಕ್ಷೆಗಾಗಿ ಖರೀದಿಸಿದ ಸುಮಾರು 15 ಕೋಟಿ ರೂ. ಸಾಮಗ್ರಿಗಳು ತುಕ್ಕು ಹಿಡಿಯುತ್ತಿದ್ದು, ಈ ಉಪಕರಣಗಳನ್ನು ಸಾರ್ವಜನಿಕ ಸಂಸ್ಥೆಗಳಿಗೆ ಹಸ್ತಾಂತರಿಸಲು ಸರಕಾರ ಆದೇಶ ನೀಡಿದೆ.

ಯುಡಿಎಫ್‌ ಸರಕಾರದ ಕಾಲಘಟ್ಟದಲ್ಲಿ ನಡೆದ “ಎಮರ್ಜಿಂಗ್‌ ಕೇರಳ’ ಯೋಜನೆಯಲ್ಲಿ ಜಲ ವಿಮಾನದ ಬಗ್ಗೆ ಪ್ರಚಾರ ಮಾಡಿತ್ತು. ಪ್ರವಾಸೋದ್ಯಮ ಇಲಾಖೆಯ ಕೈಕೆಳಗಿರುವ ಕೇರಳ ಟೂರಿಸಂ ಇನಾ#†ಸ್ಟ್ರಕ್ಚರ್‌ ಲಿಮಿಟೆಡ್‌(ಕೆಟಿಐಎಲ್‌) ಯೋಜನೆಯನ್ನು ಸಾಕಾರಗೊಳಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿತ್ತು. ಕೇರಳ ಏವಿಯೇಶನ್‌ ಕಂಪೆನಿ, ಕೈರಳಿ ಏರ್‌ಲೈನ್ಸ್‌, ಸೀ ಬರ್ಡ್‌ ಸೀ ಪ್ಲೇನ್‌ ಸರ್ವೀಸ್‌ ಮೊದಲಾದ ಕಂಪೆನಿಗಳು ಹಲವು ಬಾರಿ ಯೋಜನೆಯ  ಸಾಕಾರಕ್ಕೆ ಮುಂದೆ ಬಂದರೂ ವಿರೋಧದ ಹಿನ್ನೆಲೆಯಲ್ಲಿ ಹಿಂದೆ ಸರಿದವು.

ಇತಿಹಾಸ ಪ್ರಸಿದ್ಧ ಹಾಗೂ ಅಂತಾ ರಾಷ್ಟ್ರೀಯ ಪ್ರವಾಸಿ ಕೇಂದ್ರಗಳ ಯಾದಿ ಯಲ್ಲಿ ಸ್ಥಾನಪಡೆದಿರುವ ಕಾಸರಗೋಡು ಜಿಲ್ಲೆಯ ಬೇಕಲ್‌ ಬೀಚ್‌, ಕೊಲ್ಲಂ ಜಿಲ್ಲೆಯ ಅಷ್ಟಮುಡಿ ಹಿನ್ನೀರು, ಆಲಪ್ಪುಳ ಜಿಲ್ಲೆಯ ಪುನ್ನಮಡ ಹಿನ್ನೀರು, ಕೊಚ್ಚಿ, ಕುಮರಗಂ ಹಿನ್ನೀರಿನಲ್ಲಿ ಮೊದಲ ಹಂತದಲ್ಲಿ ಸೀ ಪ್ಲೇನ್‌ ಲ್ಯಾಂಡ್‌ ಮಾಡಲು ಯೋಜಿಸಲಾಗಿತ್ತು. ಇದಕ್ಕಾಗಿ ಬೇಕಲ, ಪುನ್ನಮಡ, ಅಷ್ಟಮುಡಿಯಲ್ಲಿ ವಾಟರ್‌ ಡ್ರಂ ಸಜ್ಜುಗೊಳಿಸಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು. ದೋಣಿ ಮನೆ, ಜಲ ವಿಮಾನದಲ್ಲಿ ಬರುವ ಪ್ರವಾಸಿಗರ ಸುರಕ್ಷೆಗಾಗಿ ಬಳಸುವ ಸ್ಕ್ಯಾನರ್‌ಗಳು, ಎಕ್ಸ್‌ ರೇ ಡಿಟೆಕ್ಟರ್‌, ವಯರ್‌ಲೆಸ್‌, ಮೆಟಲ್‌ ಡಿಟೆಕ್ಟರ್‌, ಜಿ.ಪಿ.ಎಸ್‌, ಆ್ಯಂಟೆನಾ, ಸುರಕ್ಷಾ ಕೆಮರಾಗಳು, ಸ್ಪೀಡ್‌ ಬೋಟ್‌ಗಳನ್ನು ಖರೀದಿಸಲಾಯಿತು. ಇವುಗಳು ಕಳೆದ ಐದು ವರ್ಷಗಳಿಂದ ಪುನ್ನಮಡದ ಎರಡು ಹೌಸ್‌ ಬೋಟ್‌ಗಳಲ್ಲಿ ತುಕ್ಕು ಹಿಡಿಯುತ್ತಿವೆ. ಅಲ್ಲದೆ ಅಂದು ನೇಮಿಸಿದ್ದ ಸುರಕ್ಷಾ ಪೊಲೀಸ್‌ಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಮೂರು ವಾಟರ್‌ ಡ್ರಂಗಳ ಸುರಕ್ಷೆಗಾಗಿ ಕೈಗಾರಿಕಾ ಸುರಕ್ಷಾ ಸೇನೆಯ 20 ಮಂದಿಯನ್ನು ನೇಮಿಸಲಾಗಿತ್ತು. ಇವರಿಗಾಗಿ ಪ್ರತೀ ವರ್ಷ ಸುಮಾರು 70 ಲಕ್ಷ ರೂಪಾಯಿಯನ್ನು ಸರಕಾರಿ ಖಜಾನೆಯಿಂದ ನೀಡಲಾಗಿತ್ತು. ಈ ಎಲ್ಲಾ ಮೊತ್ತವನ್ನು ಪ್ರವಾಸೋದ್ಯಮ ಇಲಾಖೆ ವೆಚ್ಚ ಮಾಡಿತ್ತು.

ಎಡರಂಗ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೀನು ಕಾರ್ಮಿಕರು ಸರಕಾರದ ಮೇಲೆ ಇನ್ನಷ್ಟು ಒತ್ತಡ ಹಾಕಿದರು. ಈ ಯೋಜನೆಯನ್ನು ಸಾಕಾರ ಗೊಳಿಸುವುದರಿಂದ ಮೀನಿನ ಸಂಪತ್ತು ನಾಶವಾಗಲಿದೆ ಎಂಬುದಾಗಿ ಮೀನು ಕಾರ್ಮಿಕರು ಸರಕಾರದ ಗಮನ ಸೆಳೆದರು. ಈ ಕಾರಣದಿಂದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಬಿಡಲು ಸರಕಾರ ತೀರ್ಮಾನಿಸಿತು. ಅಲ್ಲದೆ ಈ ಯೋಜನೆಕಾಗಿ ಖರೀದಿಸಿದ ಉಪಕರಣಗಳನ್ನು ವಿವಿಧ ಸಾರ್ವಜನಿಕ ಸಂಸ್ಥೆಗಳಿಗೆ ಹಸ್ತಾಂತರಿಸಲು ತೀರ್ಮಾನಿಸಿತು.

ಖರೀದಿಸಿದ್ದೆಲ್ಲ ವಿವಿಧ ಸಂಸ್ಥೆಗಳಿಗೆ ಹಂಚಿಕೆ
ಸ್ಪೀಡ್‌ ಬೋಟ್‌ಗಳನ್ನು ಕೆ.ಟಿ.ಡಿ.ಸಿ.ಗೂ, ಟಿ.ಡಿ.ಪಿ.ಸಿ.ಗೂ ನೀಡಿದೆ. ಬ್ಯಾಗೇಜ್‌ ಸ್ಕ್ಯಾನರ್‌, ಎಕ್ಸ್‌ರೇ ಯಂತ್ರ, ಸಿ.ಸಿ.ಟಿ.ವಿ.ಗಳು, ಫ್ಲೋಟಿಂಗ್‌ ಜಟ್ಟಿಗಳನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗುವುದು. ಹಿಂದಿನ ಸರಕಾರ ಯಾವುದೇ ಅಧ್ಯಯನ ನಡೆಸದೆ ಈ ಯೋಜನೆಯನ್ನು ಸಾಕಾರಗೊಳಿಸಲು ಮುಂದಾಗಿತ್ತು ಎಂದು ಪ್ರವಾಸೋದ್ಯಮ ಇಲಾಖೆಯ ಅಂಬೋಣ. ಈ ವರೆಗೆ ಯೋಜನೆಗಾಗಿ ಮಾಡಿರುವ ವೆಚ್ಚದ ಬಗ್ಗೆ ಸಮಗ್ರ ಅಂಕಿಅಂಶಗಳನ್ನು ಮತ್ತು ಲೆಕ್ಕಾಚಾರ ಮಾಡಲು ಪ್ರವಾಸೋದ್ಯಮ ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ನಿರ್ದೇಶ ನೀಡಿದ್ದಾರೆ. ತಿರುವನಂತಪುರ ಮತ್ತು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲು ಮಾಡಿಕೊಂಡ ಒಡಂಬಡಿಕೆಯನ್ನು ಸರಕಾರ ರದ್ದುಗೊಳಿಸಿದೆ.

ಲ್ಯಾಂಡ್‌ ಆಗದ ಜಲವಿಮಾನ
2013ರ ಜೂನ್‌ ತಿಂಗಳಲ್ಲಿ ಖಾಸಗಿ ಏಜೆನ್ಸಿಯ ನೆರವಿನೊಂದಿಗೆ ಕೊಲ್ಲಂ ಅಷ್ಟಮುಡಿ ಹಿನ್ನೀರಿನಲ್ಲಿ ಜಲ ವಿಮಾನ ಯೋಜನೆಯನ್ನು ಔದ್ಯೋಗಿಕವಾಗಿ ಆರಂಭಿಸಿದ್ದರೂ ರಾಜಕೀಯ ಪಕ್ಷವೊಂದರ ನೇತೃತ್ವದಲ್ಲಿ ಮೀನು ಕಾರ್ಮಿಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮತ್ತೆ ಜಲ ವಿಮಾನ ನೀರಿಗಿಳಿಯಲಿಲ್ಲ. ಪುನ್ನಮಡ ಹಿನ್ನೀರಿನಲ್ಲಿ ಜಲ ವಿಮಾನ ಲ್ಯಾಂಡ್‌ ಮಾಡಲು ಉದ್ದೇಶಿಸಲಾಗಿದ್ದರೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಯೋಜನೆಗೆ ಆರಂಭದಲ್ಲೇ ಸಂಕಷ್ಟ ಎದುರಾಯಿತು. ಜಲ ವಿಮಾನ ಲ್ಯಾಂಡ್‌ ಆಗುವುದರಿಂದ ಮೀನಿನ ಸಂಪತ್ತು ನಾಶವಾಗಬಹುದೆಂಬ ಆತಂಕದಿಂದ ಮೀನು ಕಾರ್ಮಿಕರು ಯೋಜನೆಯನ್ನು ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ನಡೆಸಲು ಸರಕಾರ ತಜ್ಞರ ಸಮಿತಿಯೊಂದನ್ನು ನೇಮಿಸಿತು. ತಜ್ಞರ ಸಮಿತಿ ಮೀನು ಕಾರ್ಮಿಕರ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸರಕಾರಕ್ಕೆ ವರದಿಯನ್ನು ಸಮರ್ಪಿಸಿತು. ಈ ಹಿನ್ನೆಲೆಯಲ್ಲಿ ಪುನ್ನಮಡ ಹಿನ್ನೀರಿನಲ್ಲಿ ಆಳವಡಿಸಲಾಗಿದ್ದ ವಾಟರ್‌ ಡ್ರಂ ಅನ್ನು ಮೀನುಗಾರಿಕೆ ನಡೆಸದ ವಟ್ಟಗ ಹಿನ್ನೀರಿಗೆ ಸ್ಥಳಾಂತರಿಸಲಾಯಿತು. ಈ ಮೂಲಕ ಜಲ ವಿಮಾನ ಯೋಜನೆಗೆ ಮರು ಜೀವ ನೀಡುವ ಸಂಕಲ್ಪ ಕಂಡುಬಂದರೂ ಇಂದಿನ ವರೆಗೂ ಜಲ ವಿಮಾನ ಹಿನ್ನೀರಿನಲ್ಲಿ ಲ್ಯಾಂಡ್‌ ಆಗಿಲ್ಲ.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.