![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 17, 2018, 10:10 AM IST
ಪೆರ್ಲ: ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್.ಎಸ್.ಎಸ್. ಘಟಕದ ವತಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಣ್ಮಕಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಅವರು ಮಾತನಾಡುತ್ತ ಹಿಂದೆ ಸ್ತ್ರೀಯರು ನಾಲ್ಕು ಗೋಡೆಗಳ ಮಧ್ಯೆ ಅಂತರ್ಮುಖೀಗಳಾಗಿ ಬಾಳುವ ಕಾಲ ಒಂದಿತ್ತು. ಇಂದು ಹಾಗಲ್ಲ. ಇದ್ದ ಸ್ವಾತಂತ್ರ್ಯವನ್ನು ಬಳಸಿಕೊಂಡು ತಾನೇನು ಎಂಬುದನ್ನು ಸಮಾಜಕ್ಕೆ ತೋರಿಸಿಕೊಡಬೇಕು. ನಾಲ್ಕು ಗೋಡೆಯೊಳಗಿದ್ದು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸ್ತ್ರೀಯರನ್ನು ಜರೆಯುವ, ಟೀಕಿಸುವ ಜನರಿದ್ದಾರೆಂದು ಅಂಜುತ್ತ ಕೂರದೆ ಬಂದುದನ್ನು ಮೆಟ್ಟಿನಿಂತು ಛಲದಿಂದ ಕಾರ್ಯಸಾಧನೆಯನ್ನು ಮಾಡಬೇಕು. ಸ್ತ್ರೀ ಶಕ್ತಿ ಒಗ್ಗಟ್ಟಾಗಿ ಸಮಾಜ ಕಂಟಕರ ವಿರುದ್ಧ ಹೋರಾಡಬೇಕಾಗಿದೆ. ಅದಕ್ಕಾಗಿ ಸ್ತ್ರೀಯರು ಹೋರಾಟ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸತ್ಯ, ಧರ್ಮ, ನ್ಯಾಯಕ್ಕಾಗಿ ಮುನ್ನುಗ್ಗಬೇಕು. ಹೆಣ್ಣೊಬ್ಬಳು ವಿದ್ಯಾವಂತಳಾದರೆ ಅವಳ ಕುಟುಂಬ, ಸಮಾಜ, ದೇಶ ಅಭಿವೃದ್ಧಿ ಹೊಂದುತ್ತದೆ. ಪುರುಷ ಮತ್ತು ಸ್ತ್ರೀ ಸಮಾಜದ ಕಣ್ಣುಗಳಿದ್ದಂತೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಪುರುಷ ಯಾವುದೇ ಸಾಧನೆಯನ್ನು ಮಾಡಬೇಕಾದರೆ ಅದರ ಹಿಂದೆ ಸ್ತ್ರೀ ಶಕ್ತಿಯೊಂದಿದೆ ಎಂದರು. ಕಾಲೇಜಿನ ಆಡಳಿತಾಧಿಕಾರಿ ಕೆ. ಶಿವಕುಮಾರ್, ಭೂಮಿತ್ರ ಸೇನಾ ಸಂಚಾಲಕರು ಉಪನ್ಯಾಸಕ ರಂಜಿತ್ ಕುಮಾರ್. ಎನ್.ಎಸ್.ಎಸ್. ಯೊಜನಾಧಿಕಾರಿ ಶಂಕರ್ ಖಂಡಿಗೆ, ಮಲೆಯಾಳ ಉಪನ್ಯಾಸಕಿ ವಿನೀಶಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೃಷ್ಣಪ್ರಿಯ ಸ್ವಾಗತಿಸಿದರು. ನಯನಶ್ರೀ ವಂದಿಸಿದರು. ಪವಿತ್ರಾ ಕಾರ್ಯ ಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿ ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.