ಕೃತಕ ಬೆಲೆಯೇರಿಕೆ ವಿರುದ್ಧ ಕ್ರಮ: ಡಾಣ ಐಸಾಕ್
Team Udayavani, Jul 8, 2017, 2:45 AM IST
ಕಾಸರಗೋಡು: ನೂತನ ಸರಕು ಸೇವಾ ತೆರಿಗೆ ಮಸೂದೆಯು ಕೇರಳದಲ್ಲಿ ದೊಡ್ಡ ಮಟ್ಟಿನ ಬೆಲೆಯೇರಿಕೆಗೆ ಕಾರಣವಾಗಿದೆ. ಜನರು ತೀವ್ರ ಶೋಷಣೆಗೊಳಗಾಗುತ್ತಿದ್ದಾರೆ ಎಂದು ಹಣಕಾಸು ಸಚಿವ ಡಾಣ ಥೋಮಸ್ ಐಸಾಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಲಭಿಸುವ ದೂರುಗಳಲ್ಲಿ ತೆರಿಗೆ ಇಲಾಖೆಯು ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವುದು. ಕೃತಕ ಬೆಲೆಯೇರಿಕೆ ಸೃಷ್ಟಿಸಲಾಗುತ್ತಿದೆ ಎಂದು ಬಂದ ದೂರುಗಳ ಹಿನ್ನೆಲೆಯಲ್ಲಿ ಅಳತೆ ತೂಕ ವಿಭಾಗವು ರಾಜ್ಯದಾದ್ಯಂತ ಮಿಂಚಿನ ಪರಿಶೋಧನೆ ನಡೆಸಿದೆ.
ಇದೇ ಸಂದರ್ಭದಲ್ಲಿ ಜಿಎಸ್‌ಟಿಗೆ ಸಂಬಂಧಿಸಿದ ವಿವರಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಐಸಾಕ್ ಅವರಿಗೆ ಪತ್ರ ಬರೆದಿದ್ದಾರೆ.
ಶುಲ್ಕ ದರದಲ್ಲಿ ಕಡಿತ ಉಂಟಾಗಿರುವುದರಿಂದ ಅದಕ್ಕನುಸಾರ ವಸ್ತುಗಳ ಗರಿಷ್ಠ ಬೆಲೆ(ಎಂಆರ್‌ಪಿ)ಯನ್ನು ಮರು ನಿರ್ಣಯಿಸಬೇಕೆಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದ್ದಾರೆ. ಅಮಿತ ಲಾಭವನ್ನು ತಡೆಗಟ್ಟುವ ಪ್ರಾಧೀಕಾರ, ರಾಜ್ಯ ಸ್ಕ್ರೀನಿಂಗ್ ಸಮಿತಿಯನ್ನು ಕೂಡಲೇ ರಚಿಸಬೇಕೆಂದೂ ತಿಳಿಸಲಾಗಿದೆ.
ಹೊಟೇಲ್‌ಗಳಲ್ಲಿನ ಬೆಲೆಯೇರಿಕೆಯನ್ನು ತಡೆಗಟ್ಟಲು ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ಸ್‌ನ ಪದಾಧಿಕಾರಿಗಳೊಂದಿಗೆ ತಿರುವನಂತಪುರದಲ್ಲಿ ಮುಂದಿನ ಮಂಗಳವಾರ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ.
ಸಮಸ್ಯೆಯ ಗಂಭೀರತೆಯನ್ನು ಅವರಿಗೆ ಮನವರಿಕೆ ಮಾಡಿ ಕೊಡಲಾಗುವುದು. ಗ್ರಾಹಕರನ್ನು ಕೊಳ್ಳೆ ಹೊಡೆಯಲು ಯತ್ನಿಸುವವರನ್ನು ಹಿಂಜರಿಯುವಂತೆ ಮಾಡಲು ಎಲ್ಲಾ ರೀತಿಯ ದಾರಿಗಳನ್ನು ಹುಡುಕಲಾಗುವುದು. ತೆರಿಗೆ ವಿನಾಯಿತಿಯ ಪ್ರಯೋಜನವು ಸಾರ್ವಜನಿಕರಿಗೆ ದೊರಕಿಯೇ ಸಿದ್ಧವೆಂದು ಇದೇ ಸಂದರ್ಭದಲ್ಲಿ ಸಚಿವ ಥೋಮಸ್ ಐಸಾಕ್ ತಿಳಿಸಿದ್ದಾರೆ.
ಕೇರಳದ ಮಾದರಿಯಲ್ಲಿ ಬೆಲೆ ಏರುವುದು ಮತ್ತು ಇಳಿಯುವ ಉತ್ಪನ್ನಗಳ ಪಟ್ಟಿಯನ್ನು ಕೇಂದ್ರ ಸರಕಾರವು ಬಿಡುಗಡೆ ಮಾಡಬೇಕು. ಇದರಿಂದಾಗಿ ಜನಸಾಮಾನ್ಯರನ್ನು ಹಗಲು ದರೋಡೆ ಮಾಡುವುದು ತಪ್ಪಲಿದೆ ಎಂದು ಅವರು ತಿಳಿಸಿದರು.
ಜಿಎಸ್‌ಟಿ ಜಾರಿಗೆ ಬರುತ್ತಲೇ ಎಲ್ಲಾ ರಾಜ್ಯಗಳಲ್ಲೂ ಕೃತಕ ಬೆಲೆಯೇರಿಕೆ ಮಾಡಲಾಗಿದೆ. ಇದು ಗ್ರಾಹಕರನ್ನು ವಂಚಿಸಿ ಈ ರೀತಿಯಲ್ಲಿ ಜಿಎಸ್‌ಟಿಯ ಹೆಸರಲ್ಲಿ ಬೆಲೆಯೇರಿಕೆ ಮಾಡಲಾಗಿದೆ ಎಂದು ಅವರು ಬೊಟ್ಟು ಮಾಡಿದರು.
ಕಠಿಣ ಕ್ರಮ: ಸರಕು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ ಬಳಿಕ ಸಾಮಗ್ರಿಗಳಿಗೆ ಅನ್ಯಾಯಯುತವಾದ ಬೆಲೆ ಏರಿಸುವವರ ವಿರುದ್ಧ ರಾಜ್ಯ ಸರಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ದಿನಬಳಕೆ ಸಾಮಗ್ರಿಗಳಿಗೆ ದಿಢೀರನೆ ಬೆಲೆ ಹೆಚ್ಚಿಸಿರುವ ಕ್ರಮವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರಿಗೆ ಆ ಬಗ್ಗೆ ದೂರುಗಳಿದ್ದಲ್ಲಿ ಅದನ್ನು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಕೃತಕ ಬೆಲೆಯೇರಿಕೆಯನ್ನು ಕೇಂದ್ರ ಸರಕಾರದ ಗಮನಕ್ಕೂ ತರಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.
ಕೊಚ್ಚಿಯಲ್ಲಿ ಮಲಯಾಳದ ಯುವನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕರಣದ ನಿಟ್ಟಿನಲ್ಲಿ ಪೊಲೀಸ್ ತನಿಖೆ ಸರಿಯಾದ ದಾರಿಯಲ್ಲೇ ಸಾಗುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಪೊಲೀಸರು ಬಂಧಿಸಲಿದ್ದಾರೆ. ತನಿಖೆಯ ದೃಷ್ಟಿಯಿಂದ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ. ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಶಿಕ್ಷೆ ಅನುಭವಿಸಲೇ ಬೇಕು ಎಂದು ಪಿಣರಾಯಿ ವಿಜಯನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.