ಎಸ್‌ಎಫ್‌ಐ ಹೀನ ಕೃತ್ಯದ ವಿರುದ್ಧ ಕ್ರಮ: ಬಿಜೆಪಿ ಆಗ್ರಹ
ಕೊಚ್ಚಿ ಕಾಲೇಜಿನಲ್ಲಿ ದೇವರ ಚಿತ್ರ ಬಳಸಿ ಕೀಳು ಮಟ್ಟದ ಪೋಸ್ಟರ್
Team Udayavani, Jun 28, 2019, 5:31 AM IST
ಕುಂಬಳೆ: ಕೊಚ್ಚಿ ದೇವಸ್ವಂ ಬೋರ್ಡ್ ಅಧೀನದ ಕೇರಳವರ್ಮ ಕಾಲೇಜಿನಲ್ಲಿ ಅತೀ ಹೀನವಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಭಾವಚಿತ್ರವನ್ನು ಪ್ರದರ್ಶಿಸಿರುವ ಎಸ್.ಎಫ್.ಐ ಕಾರ್ಯಚಟುವಟಿಕೆ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಬಿ.ಜೆ.ಪಿ. ರಾಜ್ಯ ಸಮಿತಿ ಸದಸ್ಯ ಪಿ. ಸುರೇಶ್ ಕುಮಾರ್ ಶೆಟ್ಟಿ ಒತ್ತಾಯಿಸಿದ್ಧಾರೆ.
ಕುಂಬಳೆ ಬಿ.ಜೆ.ಪಿ. ಪಂಚಾಯತ್ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಬರಿಮಲೆ ಆಚಾರ ಸಂರಕ್ಷಣೆಗೆ ಭಂಗ ತರಲೆತ್ನಿಸಿದ ಎಡರಂಗಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿರುವ ಶಿಕ್ಷೆಯಿಂದ ಬುದ್ಧಿ ಕಲಿತಿಲ್ಲವೆಂದರು.
ಗ್ರಾಮ ಪಂಚಾಯತ್ ವತಿ ಯಿಂದ ಅಡಿಕೆ ಮತ್ತು ಇತರ ಕೃಷಿಕರಿಗೆ ಕೊಡಬೇಕಾದ ರೋಗ ನಿರೋಧಕ ಔಷಧಗಳನ್ನು ಸರಿಯಾದ ಸಮಯದಲ್ಲಿ ವಿತರಣೆ ಮಾಡಬೇಕಾದ ಸಂದರ್ಭದಲ್ಲಿ ವಿತರಣೆ ಮಾಡದೆ ಕೃಷಿಕರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ. ಕೀಟನಾಶಕವನ್ನು ಸಿಂಪಡಿಸುವ ಸಮಯದಲ್ಲಿ ಕೃಷಿ ಭವನದಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಸರಿಯಾದ ಸಮಯದಲ್ಲಿ ರೋಗ ನಿರೋಧಕ ಔಷಧಗಳನ್ನು ವಿತರಿಸುವುದರಲ್ಲಿ ಪಂಚಾಯತ್ ಆಡಳಿತ ಸಮಿತಿಯ ಅವ್ಯವಸ್ಥೆಯಿಂದ ಕೃಷಿಕರಿಗೆ ನಷ್ಟ ಸಂಭವಿಸಿದೆ ಎಂಬುದಾಗಿ ಆರೋಪಿಸಿದರು.
ಸಭೆಯಲ್ಲಿ ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಕೆ. ಶಂಕರ ಆಳ್ವ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಎಸ್.ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ. ಕಯ್ನಾರ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಚ್. ಸತ್ಯಶಂಕರ ಭಟ್, ಮಂಡಲ ಉಪಾಧ್ಯಕ್ಷ ಕೆ. ವಿನೋದನ್ ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್ ಮಂಡಲ ಕಾರ್ಯದರ್ಶಿ ಮಣಿಕಂಠ ರೈ,ಗ್ರಾಮ ಪಂಚಾಯತ್ ಸದಸ್ಯರಾದ ಸುಜಿತ್ ರೈ ಮತ್ತು ಪ್ರೇಮಲತ.ಎಸ್. ಮಾತನಾಡಿದರು.
ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಸುಧಾಕರ ಕಾಮತ್ ಸ್ವಾಗತಿಸಿದರು. ಪಂಚಾಯತ್ ಉಪಾಧ್ಯಕ್ಷ ಕಮಲಾಕ್ಷ ಆರಿಕ್ಕಾಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.